Kargil Vijay Diwas 2022: ಕಾರ್ಗಿಲ್ ವಿಜಯ ದಿವಸ ಸೇನಾ ಪಡೆಗಳ ಶೌರ್ಯದ ಸಂಕೇತ; ಪ್ರಧಾನಿ ಮೋದಿ, ದ್ರೌಪದಿ ಮುರ್ಮು ಶ್ರದ್ಧಾಂಜಲಿ

ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಭಾರತದ ಎಲ್ಲಾ ದೇಶವಾಸಿಗಳು ಋಣಿಯಾಗಿರುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

Kargil Vijay Diwas 2022: ಕಾರ್ಗಿಲ್ ವಿಜಯ ದಿವಸ ಸೇನಾ ಪಡೆಗಳ ಶೌರ್ಯದ ಸಂಕೇತ; ಪ್ರಧಾನಿ ಮೋದಿ, ದ್ರೌಪದಿ ಮುರ್ಮು ಶ್ರದ್ಧಾಂಜಲಿ
ಪ್ರಧಾನಿ ಮೋದಿ- ರಾಷ್ಟ್ರಪತಿ ದ್ರೌಪದಿImage Credit source: Hindustan Times
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 26, 2022 | 2:01 PM

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಹಿನ್ನೆಲೆಯಲ್ಲಿ 1999ರ ಯುದ್ಧದಲ್ಲಿ ಪಾಕಿಸ್ತಾನದೊಂದಿಗೆ ಹೋರಾಡಿದ ಸೈನಿಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಗೌರವ ಸಲ್ಲಿಸಿದ್ದಾರೆ. ಈ ದಿನವನ್ನು ಸೇನಾ ಪಡೆಗಳ ಅಸಾಧಾರಣ ಶೌರ್ಯದ ಸಂಕೇತ ಎಂದು ಅವರು ಕರೆದಿದ್ದಾರೆ. ನಿನ್ನೆಯಷ್ಟೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ದ್ರೌಪದಿ ಮುರ್ಮು, “ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ” ಎಂದು ಹೇಳಿದ್ದಾರೆ.

ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಭಾರತದ ಎಲ್ಲಾ ದೇಶವಾಸಿಗಳು ಋಣಿಯಾಗಿರುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ, ಶಕ್ತಿ ಮತ್ತು ನಿರ್ಣಯದ ಸಂಕೇತವಾಗಿದೆ. ಭಾರತಮಾತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ದೇಶವಾಸಿಗಳೆಲ್ಲರೂ ಸದಾ ಋಣಿಗಳಾಗಿರುತ್ತಾರೆ. ಜೈ ಹಿಂದ್! ಎಂದು ದ್ರೌಪದಿ ಮುರ್ಮು ಟ್ವಿಟರ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ‘ಹೆಮ್ಮೆ ಮತ್ತು ವೈಭವದ ಸಂಕೇತ’. ದೇಶದ ಎಲ್ಲ ವೀರ ಪುತ್ರರಿಗೆ ನಾನು ವಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ತಾಯಿ ಭಾರತಾಂಬೆಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್! ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ಭಾರತೀಯ ಸೇನೆಯು ಜಮ್ಮುವಿನ ಬಲಿದಾನ್ ಸ್ತಂಭದಲ್ಲಿ ಪುಷ್ಪಾರ್ಚನೆ ಸಮಾರಂಭವನ್ನು ನಡೆಸಲಾಯಿತು.

ಇದನ್ನೂ ಓದಿ: Kargil Vijay Diwas 2022: ಭಾರತ-ಪಾಕಿಸ್ತಾನ ಕಾರ್ಗಿಲ್ ಯುದ್ಧ; ಅಂದು ಏನಾಯ್ತು? ಅದಕ್ಕೆ ಕಾರಣ ಏನು ಗೊತ್ತಾ?

Koo App

ಇಂದು ನಾವೆಲ್ಲ ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರ ಸೈನಿಕರ ತ್ಯಾಗ, ಬಲಿದಾನ, ಕಠಿಣ ಪರಿಶ್ರಮವೇ ಪ್ರಮುಖ ಕಾರಣ. ಶತ್ರುಗಳನ್ನು ಸದೆಬಡೆದು ಭಾರತ ಮಾತೆಯನ್ನು ಪ್ರತಿಕ್ಷಣವೂ ಉಳಿಸುವ ನಮ್ಮ ಯೋಧರ ಉದಾತ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಕಾರ್ಗಿಲ್ ವೀರರನ್ನು ನೆನೆದು ವಂದಿಸುತ್ತಿದ್ದೇನೆ. @BJP4Karnataka

Dr. Murugesh R Nirani (@murugesh_nirani) 26 July 2022

1999ರ ಮೇ 8 ಮತ್ತು ಜುಲೈ 26ರ ನಡುವೆ ಚಳಿಗಾಲದಲ್ಲಿ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನದ ಒಳನುಗ್ಗುವವರ ವಿರುದ್ಧ ನಡೆದ ಯುದ್ಧದ ನೆನಪಿಗಾಗಿ ಕಾರ್ಗಿಲ್ ವಿಜಯ್ ದಿವಸವನ್ನು ಪ್ರತಿ ವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. ಎಲ್ಲಾ ಮಿಲಿಟರಿ ಮತ್ತು ನಾಗರಿಕ ಚಳುವಳಿಗಳ ಮೇಲೆ ಪ್ರಾಬಲ್ಯ ಸಾಧಿಸುವ ಗುರಿಯೊಂದಿಗೆ ಲಡಾಖ್ ಪ್ರದೇಶದ ಕಾರ್ಗಿಲ್‌ನ ದ್ರಾಸ್ ಮತ್ತು ಬಟಾಲಿಕ್ ಸೆಕ್ಟರ್‌ಗಳಲ್ಲಿ NH 1A ಮೇಲಿರುವ ಕೋಟೆಯ ರಕ್ಷಣೆಯನ್ನು ಆಕ್ರಮಿಸಿಕೊಂಡಿದೆ.

Koo App

ಇಂದು ಕಾರ್ಗಿಲ್ ವಿಜಯ ದಿನ. ಗಡಿಯೊಳಕ್ಕೆ ನುಸುಳಿ ನಮ್ಮ ಭೂಮಿಯನ್ನು ಆಕ್ರಮಿಸಿದ ಶತ್ರುಗಳನ್ನು ಸೆದೆಬಡಿದು ಮಾತೃಭೂಮಿಯನ್ನು ರಕ್ಷಿಸಿದ ವೀರಯೋಧರಿಗೆ ನನ್ನ ಶತ ನಮನಗಳು. ಅಪ್ರತಿಮ ಕೆಚ್ಚಿನಿಂದ ಹೋರಾಡಿದ ನಮ್ಮ ಸೇನಾಪಡೆಗಳ ಕರ್ತವ್ಯನಿಷ್ಠೆ, ಶೌರ್ಯ, ಪರಾಕ್ರಮಗಳಿಗೆ ಜೈಹೋ.. ಹುತಾತ್ಮರಾದ ವೀರಪುತ್ರರಿಗೆ ಭಾವಪೂರ್ವಕ ಶ್ರದ್ಧಾಂಜಲಿ. #jaihind

H D Kumaraswamy (@h_d_kumaraswamy) 26 July 2022

ಪ್ರತಿ ವರ್ಷ, ಈ ದಿನದಂದು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಪ್ರಧಾನ ಮಂತ್ರಿ ಗೌರವ ಸಲ್ಲಿಸುತ್ತಾರೆ. ದೇಶಕ್ಕೆ ಭಾರತೀಯ ಸೇನೆಯ ಕೊಡುಗೆಯನ್ನು ಕೊಂಡಾಡಲು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತದೆ. ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23ನೇ ವಾರ್ಷಿಕೋತ್ಸವವನ್ನು ನಡೆಸುವುದರೊಂದಿಗೆ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಜುಲೈ 24ರಿಂದ ಜುಲೈ 26ರವರೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Published On - 9:58 am, Tue, 26 July 22