ಕಾರ್ಗಿಲ್ ಯುದ್ಧ ವೇಳೆ ಮುಖಾಮುಖಿ ಸಂಘರ್ಷದಲ್ಲಿ ನಾನು ಪಾಕಿಸ್ತಾನದ ಕ್ಯಾಪ್ಟನ್​​ನನ್ನು ಹತ್ಯೆ ಮಾಡಿದ್ದೆ: ಸಮರವೀರ ಸತ್ಪಾಲ್ ಸಿಂಗ್

ಮುಂಜಾನೆ 5 ಗಂಟೆಯಿಂದಲೇ ನಾವು ಪ್ರತಿದಾಳಿ ಎದುರಿಸುತ್ತಿದ್ದೆವು. ಅವರು ನಮ್ಮ ಮೇಲೆ ಗುಂಡು ಹಾರಿಸಿದ್ದು ದೂರದಿಂದಲೇ ನಮಗೆ ಕಾಣಿಸುತ್ತಿತ್ತು. ಅವರ ಪ್ರತಿದಾಳಿಯನ್ನು ನಾವು ಎರಡು ಬಾರಿ ವಿಫಲಗೊಳಿಸಿದ್ದೆವು. ಕಾರ್ಗಿಲ್ ಸಮರವೀರ ಸತ್ಪಾಲ್ ಸಿಂಗ್ ಮೆಲುಕು ಹಾಕಿದ ಕಾರ್ಗಿಲ್ ಯುದ್ಧದ ಅನುಭವದ ಮಾತು ಇಲ್ಲಿದೆ.

ಕಾರ್ಗಿಲ್ ಯುದ್ಧ ವೇಳೆ ಮುಖಾಮುಖಿ ಸಂಘರ್ಷದಲ್ಲಿ ನಾನು ಪಾಕಿಸ್ತಾನದ ಕ್ಯಾಪ್ಟನ್​​ನನ್ನು ಹತ್ಯೆ ಮಾಡಿದ್ದೆ: ಸಮರವೀರ ಸತ್ಪಾಲ್ ಸಿಂಗ್
ಸತ್ಪಾಲ್ ಸಿಂಗ್Image Credit source: News9live
Follow us
ರಶ್ಮಿ ಕಲ್ಲಕಟ್ಟ
| Updated By: Ganapathi Sharma

Updated on:Jul 26, 2023 | 9:08 PM

ದೆಹಲಿ ಜುಲೈ 26:  ಪ್ರತಿವರ್ಷ ಜುಲೈ 26ಂದು ಕಾರ್ಗಿಲ್​​ ವಿಜಯೋತ್ಸವವನ್ನು (Kargil Vijay Diwas) ಆಚರಿಸುತ್ತೇವೆ. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ (Kargil War) ದೇಶಕ್ಕಾಗಿ ಮಡಿದ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮಕ್ಕೆ ಗೌರವ ಸಲ್ಲಿಸುದೇ ಈ  ದಿನದ ಮಹತ್ವ.  24ವರ್ಷದ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ,ಪಾಕ್  ಸೇನಾ ನಾಯಕನ್ನು ಹತ್ಯೆ ಮಾಡಿದ ಪರಾಕ್ರಮಿ ಸತ್ಪಾಲ್ ಸಿಂಗ್ (Satpal Singh).  ವೀರಚಕ್ರ ಗೌರವ ಪ್ರಶಸ್ತಿಗೆ ಪಾತ್ರರಾಗಿರುವ ಇವರು ನ್ಯೂಸ್ 9ನ ಗೀತಾ ದತ್ತಾ  ಜತೆ ಕಾರ್ಗಿಲ್ ಯುದ್ಧದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಮರವೀರನ ಅನುಭವಗಳನ್ನು ಅವರ ಮಾತಿನಲ್ಲೇ ಕೇಳಿ.

ನಾನು 1992 ರ ಏಪ್ರಿಲ್‌ನಲ್ಲಿ ಭಾರತೀಯ ಸೇನೆಗೆ ಸೇರಿಕೊಂಡೆ. ಸಿಖ್ ರೆಜಿಮೆಂಟ್‌ನಲ್ಲಿ ತರಬೇತಿ ಪಡೆದೆ. 1999 ರಲ್ಲಿ ನಾನು ರಜೆಯಲ್ಲಿದ್ದೆ. ನನ್ನ ಬೆಟಾಲಿಯನ್ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರ ಪಟ್ಟಣಕ್ಕೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಿದಾಗ ನನ್ನನ್ನು ವಾಪಸ್ ಕರೆಯಲಾಯಿತು. ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ ನಾವು ನಮ್ಮ ಹೊಸ ಪೋಸ್ಟ್‌ನಲ್ಲಿ ನಮ್ಮ ಕರ್ತವ್ಯ ವಹಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೆವು.

ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಸೇನೆ ನಮ್ಮ ಪೋಸ್ಟ್ ವಶಪಡಿಸಿಕೊಂಡ ಸುದ್ದಿ ತಿಳಿದ ತಕ್ಷಣ ನಾವು ಕಾರ್ಗಿಲ್‌ನತ್ತ ಸಾಗಲು ಪ್ರಾರಂಭಿಸಿದೆವು. ಅಜ್ಞಾತ, ಕಠಿಣ ಮತ್ತು ಕಡಿಮೆ ಆಮ್ಲಜನಕದ ಭೂಪ್ರದೇಶಕ್ಕೆ ಹೊಂದಿಕೊಳ್ಳುವುದಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿರಲಿಲ್ಲ. ಭೂಪ್ರದೇಶ ಮತ್ತು ಯಾವುದೇ ಹವಾಮಾನಕ್ಕೆ ಸೂಕ್ತವಾದ ಸಮವಸ್ತ್ರದ ಬಗ್ಗೆ ಯಾವುದೇ ಜ್ಞಾನವಿಲ್ಲದೆ, ನಾವು ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಸಮೀಪವಿರುವ ಡ್ರಾಸ್‌ನಲ್ಲಿ ನಾವು ತಂಗಿದೆವು. ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳಲು 19 ಗ್ರೆನೇಡಿಯರ್‌ಗಳಿಗೆ ಸಹಾಯ ಮಾಡಲು ನನ್ನ ಬೆಟಾಲಿಯನ್‌ಗೆ ಆದೇಶಿಸಲಾಯಿತು ನಾನು ಆಗ ಸಿಪಾಯಿಯಾಗಿದ್ದೆ. ಇಬ್ಬರು ಅಧಿಕಾರಿಗಳು, ನಾಲ್ವರು JCO ಗಳು ಮತ್ತು 46 ಇತರ ಶ್ರೇಣಿಯ 8 ಸಿಖ್ ತಂಡದ ಭಾಗವಾಗಿದ್ದೆ ನಾನು.

ಮುಂಜಾನೆ 5 ಗಂಟೆಯಿಂದಲೇ ನಾವು ಪ್ರತಿದಾಳಿ ಎದುರಿಸುತ್ತಿದ್ದೆವು. ಅವರು ನಮ್ಮ ಮೇಲೆ ಗುಂಡು ಹಾರಿಸಿದ್ದು ದೂರದಿಂದಲೇ ನಮಗೆ ಕಾಣಿಸುತ್ತಿತ್ತು. ಅವರ ಪ್ರತಿದಾಳಿಯನ್ನು ನಾವು ಎರಡು ಬಾರಿ ವಿಫಲಗೊಳಿಸಿದ್ದೆವು. ಏತನ್ಮಧ್ಯೆ, ನಮ್ಮ ಬ್ರಿಗೇಡಿಯರ್ ಎಂಪಿಎಸ್ ಬಜ್ವಾ ಅವರಿಂದ ನಾವು ನಮ್ಮ ವೈರ್‌ಲೆಸ್‌ನಲ್ಲಿ ಸಂದೇಶವನ್ನು ಸ್ವೀಕರಿಸಿದ್ದು, ಕಾರ್ಯಾಚರಣೆಯನ್ನು ವಿಫಲಗೊಳಿಸಲು ಪಾಕಿಸ್ತಾನಿ ಪಡೆಗಳನ್ನು ಮುನ್ನಡೆಸುವ ಅಧಿಕಾರಿಯನ್ನು ಕೊಲ್ಲಲು ಸೂಚನೆ ಸಿಕ್ಕಿತ್ತು.

ಟ್ರ್ಯಾಕ್‌ಸೂಟ್ ಧರಿಸಿ AK-47 ನೊಂದಿಗೆ ಶಸ್ತ್ರಸಜ್ಜಿತನಾಗಿ ನಿಂತಿರುವ ಅಧಿಕಾರಿಯೊಬ್ಬನನ್ನು ನಾನು ನೋಡಿದೆ. ಅವನೊಂದಿಗೆ ಮುಖಾಮುಖಿ ಸಂಘರ್ಷ ನಡೆಸಿದ ನಾನು ಅವನನ್ನು ಕೊಂದೆ. ತಮ್ಮ ಹಿರಿಯ ಅಧಿಕಾರಿಯನ್ನು ಕಳೆದುಕೊಂಡ ನಂತರ, ಪಾಕಿಸ್ತಾನಿ ಪಡೆಗಳು ಅಲ್ಲಿಂದ ಪಲಾಯನ ಮಾಡಲು ಪ್ರಾರಂಭಿಸಿದವು. ನಾನು ಕೊಂದ ವ್ಯಕ್ತಿ ಪಾಕಿಸ್ತಾನದ ನಾರ್ದರ್ನ್ ಲೈಟ್ ಇನ್‌ಫಾಂಟ್ರಿಯ ಕ್ಯಾಪ್ಟನ್ ಕರ್ನಾಲ್ ಶೇರ್ ಖಾನ್. ಆತನ ಆತನ ಸಮವಸ್ತ್ರ ಮತ್ತು ಅವರ ಗುರುತಿನ ಚೀಟಿಯಿಂದ ಅವನು ಯಾರೆಂದು ನಮಗೆ ಗೊತ್ತಾಯಿತು.

ಇದನ್ನೂ ಓದಿ: Kargil Vijay Diwas: ಕಾರ್ಗಿಲ್ ವಿಜಯಕ್ಕೆ 24 ವರ್ಷ: ವೀರ ಯೋಧರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ

ನಾವು ಅವರ ದೇಹವನ್ನು ದೆಹಲಿಗೆ ತಂದು ಪಾಕಿಸ್ತಾನದ ಲಾಹೋರ್‌ಗೆ ಕಳುಹಿಸಿದ್ದೇವೆ. ಬ್ರಿಗೇಡಿಯರ್ ಬಜ್ವಾ ಅವರು ಟೈಗರ್ ಹಿಲ್‌ನಲ್ಲಿ ಅವರ ಶೌರ್ಯವನ್ನು ಉಲ್ಲೇಖಿಸಿ ಕ್ಯಾಪ್ಟನ್ ಖಾನ್ ಅವರ ಜೇಬಿನಲ್ಲಿ ಒಂದು ತುಂಡು ಕಾಗದವನ್ನು ಇರಿಸಿದ್ದರು. 2009 ರಲ್ಲಿ ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶೌರ್ಯ ಪ್ರಶಸ್ತಿಯಾದ  ನಿಶಾನ್-ಎ-ಹೈದರ್, ಕ್ಯಾಪ್ಟನ್ ಖಾನ್ ಅವರಿಗೆ ದೊರಕಲು ಈ ಕಾಗದದ ತುಂಡು ಕಾರಣವಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Wed, 26 July 23