ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಮಳೆಯ ಮುನ್ಸೂಚನೆ ಇಲ್ಲ. ಆದರೆ ಚಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಇಂದು ಮತ್ತು ನಾಳೆ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಶೀತ ಗಾಳಿ ಇರಲಿದೆ. ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಳೆಯ ತೀವ್ರತೆಯು ವಾರಾಂತ್ಯದಲ್ಲಿ ಹೆಚ್ಚು ವೇಗವನ್ನು ಪಡೆಯುತ್ತದೆ. ಅಂದರೆ ಇಂದು ಮತ್ತು ನಾಳೆ (ಶನಿವಾರ ಮತ್ತು ಭಾನುವಾರದಂದು) ಈ ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯುತ್ತದೆ.
ಇನ್ನೆರಡು ದಿನ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಕೂಡ ಮಳೆಯಾಗಲಿದೆ. ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರ ಮಧ್ಯಪ್ರದೇಶದ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸುತ್ತದೆ. ಇಂದು ಹಿಮಾಚಲ ಪ್ರದೇಶದ ಮೇಲೆ ಭಾರೀ ಮಳೆ ಮತ್ತು ಹಿಮಪಾತದ ಸಾಧ್ಯತೆಯಿದೆ. ಅಲ್ಲದೆ, ಇಂದು ಮತ್ತು ನಾಳೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಉತ್ತರ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.
ಇಂದು (ಜನವರಿ 22) ಶನಿವಾರದಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಭಾನುವಾರ ಅಂದರೆ ಜನವರಿ 23 ರಂದು ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಅದರಂತೆ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಸ್ಥಾನದಲ್ಲಿ ಯಾವುದೇ ರೀತಿಯ ಕಟ್ಟುಪಾಡುಗಳು ಸದ್ಯಕ್ಕೆ ಇಲ್ಲ.
ಮುಂದಿನ 2 ರಿಂದ 3 ದಿನಗಳ ರಾತ್ರಿಯ ವೇಳೆ ಕನಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಆದಾಗ್ಯೂ ಮುಂಬರುವ ವಾರದಲ್ಲಿ ಮತ್ತೆ ಭಾರತದಾದ್ಯಂತ ತಾಪಮಾನವು 3-5 ° C ರಷ್ಟು ಕುಸಿಯುವ ಸಾಧ್ಯತೆಯಿದೆ.
ಇಂದು ಮತ್ತು ನಾಳೆ ವ್ಯಾಪಕ ಮಳೆ, ಹಿಮಪಾತವಾಗಲಿದೆ ಮತ್ತು ನಂತರದಲ್ಲಿ ಇಳಿಕೆಯಾಗಲಿದೆ. ಅದರಂತೆ ಉಪ-ವಿಭಾಗಗಳ ಮೇಲೆ ಭಾರೀ ಮಳೆ, ಹಿಮ ಬೀಳುವ ಸಾಧ್ಯತೆಯಿದೆ. ಪೂರ್ವ ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ. ಇನ್ನೂ ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರದಲ್ಲಿ ಕೂಡ ಇಂದು ಮತ್ತು ನಾಳೆ ಮಳೆಯಾಗಲಿದೆ.
ಮಳೆಯ ಅಂಕಿಅಂಶಗಳ ಪ್ರಕಾರ, ಚಂಡೀಗಢವು 122 ಮಿಮೀ ಅತ್ಯಧಿಕ ಮಳೆಯನ್ನು ದಾಖಲಿಸಲಿದೆ. ನಂತರ ಪಂಜಾಬ್ (81 ಮಿಮೀ), ದೆಹಲಿ (69 ಮಿಮೀ), ಹರಿಯಾಣ (53 ಮಿಮೀ), ಉತ್ತರ ಪ್ರದೇಶ (31 ಮಿಮೀ) ಮತ್ತು ರಾಜಸ್ಥಾನ (21 ಮಿಮೀ) ಮಳೆಯಾಗಲಿದೆ.
ಇದನ್ನೂ ಓದಿ:
Karnataka Weather Today: ಕರ್ನಾಟಕದಲ್ಲಿ ಇಂದು, ನಾಳೆ ಅಲ್ಲಲ್ಲಿ ಮಳೆ: ಬಿಹಾರ, ಸಿಕ್ಕಿಂನಲ್ಲಿ ದಟ್ಟ ಮಂಜು
Weather Today: ದೆಹಲಿ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಸೇರಿ ಹಲವೆಡೆ ಇಂದು ಮಳೆ ಸಾಧ್ಯತೆ