ನವದೆಹಲಿ: ಗಣರಾಜ್ಯೋತ್ಸವಕ್ಕೆ ಬ್ರ್ಯಾಂಡ್​ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆ, ಪರೇಡ್​ನಲ್ಲಿ ಸಾಗುವುದು ಅನುಮಾನ

| Updated By: ವಿವೇಕ ಬಿರಾದಾರ

Updated on: Jan 06, 2024 | 11:45 AM

ಜನವರಿ 26 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತದೆ. ಕೆಂಪುಕೋಟೆ ಮೇಲೆ ಧ್ವಜಾರೋಹಣ ನಡೆದ ಬಳಿಕ ಕರ್ತ್ಯವ್ಯಪಥ್​​ನಲ್ಲಿ ದೇಶದ ಸೈನ್ಯ ಬಲ ಮತ್ತು ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಬ್ರ್ಯಾಂಡ್​ ಬೆಂಗಳೂರು ಸ್ತಬ್ಧಚಿತ್ರ ಭಾಗಿಯಾಗಲಿದೆ.

ನವದೆಹಲಿ: ಗಣರಾಜ್ಯೋತ್ಸವಕ್ಕೆ ಬ್ರ್ಯಾಂಡ್​ ಬೆಂಗಳೂರು ಸ್ತಬ್ಧಚಿತ್ರ ಆಯ್ಕೆ, ಪರೇಡ್​ನಲ್ಲಿ ಸಾಗುವುದು ಅನುಮಾನ
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬ್ರ್ಯಾಂಡ್​ ಬೆಂಗಳೂರು ಸ್ತಬ್ಧಚಿತ್ರ ಅನಾವರಣ
Follow us on

ನವದೆಹಲಿ, ಜನವರಿ 06: ಜನವರಿ 26 ರಂದು ನವದೆಹಲಿಯಲ್ಲಿ (Delhi) ನಡೆಯಲಿರುವ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮದ ಪರೇಡ್​ನಲ್ಲಿ ದೇಶದ ಸೈನ್ಯ ಬಲ ಮತ್ತು ಸಂಸ್ಕೃತಿ ಅನಾವರಣವಾಗುತ್ತದೆ. ದೇಶದ ವಿವಿಧ ರಾಜ್ಯಗಳಿಂದ ಬರುವ ಟ್ಯಾಬ್ಲೋಗಳು ಪರೇಡ್​​ನಲ್ಲಿ ಭಾಗವಹಿಸುತ್ತವೆ. ಈ ಬಾರಿಯ ಗಣರಾಜ್ಯಜ್ಯೋತ್ಸದಲ್ಲಿ ಕರ್ನಾಟಕದಿಂದ “ಬ್ರ್ಯಾಂಡ್ ಬೆಂಗಳೂರು” (Brand Bengaluru) ಸ್ತಬ್ಧಚಿತ್ರ ಭಾಗಿಯಾಗಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ರಾಜ್ಯ ರಾಜಧಾನಿಯ ‘ಬ್ರ್ಯಾಂಡ್ ಬೆಂಗಳೂರು’ ವೈಭವ ಅನಾವರಣಗೊಳ್ಳಲಿದೆ.

ಬ್ರ್ಯಾಂಡ್ ಬೆಂಗಳೂರು ಬಿಂಬಿಸುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯ್ಕೆ ಸಮಿತಿ ಒಪ್ಪಿಗೆ ನೀಡಿದೆ. ಹೀಗಾಗಿ ರಾಜ್ಯ ವಾರ್ತಾ ಇಲಾಖೆಯಿಂದ ‘ಬ್ರಾಂಡ್ ಬೆಂಗಳೂರು’ ಟ್ಯಾಬ್ಲೋ ರಚನೆ ಕಾರ್ಯ ಆರಂಭವಾಗಿದೆ. ಇನ್ನು ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾದರೂ ಪರೇಡ್​ನಲ್ಲಿ ಸಾಗುವುದು ಅನುಮಾನವಾಗಿದೆ. ಕೆಂಪುಕೋಟೆ ಆವರಣದಲ್ಲಿ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಸುವ ಸಾಧ್ಯತೆ ಇದೆ.

 ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:36 am, Sat, 6 January 24