AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2024: ಈ ಬಾರಿಯ ಪರೇಡ್​​​ನಲ್ಲಿ ಭಾಗವಹಿಸುವುದು ಹೇಗೆ? ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಟಿಕೆಟ್ ಎಲ್ಲಿ ಖರೀದಿಸಬೇಕು?

ಭಾರತ ಈ ಬಾರಿ 75ನೇ ಗಣರಾಜ್ಯೋತ್ಸವವನ್ನು ಜನವರಿ 26 ರಂದು ಆಚರಿಸಿಕೊಳ್ಳಲಿದೆ. ಈಗಾಗಲೇ ರಾಜಪಥನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಈ ಬಾರಿಯ ಪರೇಡ್​​​ನಲ್ಲಿ ಭಾಗವಹಿಸುವುದು ಹೇಗೆ? ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಟಿಕೆಟ್ ಎಲ್ಲಿ ಖರೀದಿಸಬೇಕು? ಎಲ್ಲ ಮಾಹಿತಿ ಇಲ್ಲಿದೆ.

Republic Day 2024: ಈ ಬಾರಿಯ ಪರೇಡ್​​​ನಲ್ಲಿ ಭಾಗವಹಿಸುವುದು ಹೇಗೆ? ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಟಿಕೆಟ್ ಎಲ್ಲಿ ಖರೀದಿಸಬೇಕು?
ಅಕ್ಷಯ್​ ಪಲ್ಲಮಜಲು​​
|

Updated on: Jan 06, 2024 | 10:56 AM

Share

ದೆಹಲಿ, ಜ.6: ಭಾರತ ಈ ಬಾರಿ 75ನೇ ಗಣರಾಜ್ಯೋತ್ಸವವನ್ನು (Republic Day) ಜನವರಿ 26 ರಂದು ಆಚರಿಸಿಕೊಳ್ಳಲಿದೆ. ಈಗಾಗಲೇ ರಾಜಪಥನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಫ್ರಾನ್ಸ್​​​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಆರ್ಕಷಣೆಯಾಗಿ ಭಾರತೀಯ ಸೇನೆಯ ಮೂರು ಪಡೆಗಳು ಸೇನಾ ಪ್ರದರ್ಶನ ನಡೆಸಲಿದೆ. ಇದರ ಜತೆಗೆ ಹಲವು ಟ್ಯಾಬ್ಲೋ ಪ್ರದರ್ಶನ ಕೂಡ ನಡೆಯಲಿದೆ. ಈ ಮೆರವಣಿಗೆಯು ವಿಜಯ್ ಚೌಕ್‌ನಿಂದ ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗಿ ಐದು ಕಿಲೋಮೀಟರ್‌ಗಳಷ್ಟು ದೂರ ಸಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಗೊಳ್ಳುತ್ತದೆ.

ಈ ಟ್ಯಾಬ್ಲೋ ಪ್ರದರ್ಶನದಲ್ಲಿ ಬೇರೆ ಬೇರೆ ರಾಜ್ಯಗಳ ಸಂಸ್ಕೃತಿಯ ಬಗ್ಗೆ ತಿಳಿಸಲಾಗಿರುತ್ತದೆ. ಹಲವು ದೇಶಗಳಿಂದ ಈ ಪ್ರದರ್ಶನವನ್ನು ನೋಡಲು ಬಂದಿರುತ್ತಾರೆ. ದೇಶದ ಸೈನ್ಯ ಶಕ್ತಿಯನ್ನು ಈ ದಿನದಂದು ಅದ್ಭುತವಾಗಿ ಪ್ರದರ್ಶನ ನಡೆಸಲಾಗುತ್ತದೆ. ದೇಶದ ಭದ್ರತೆ ಶಕ್ತಿಯನ್ನು ಈ ಮೂಲಕ ವಿಶ್ವಕ್ಕೆ ಪರೋಕ್ಷವಾಗಿ ತಿಳಿಸಲಾಗುತ್ತದೆ.

ಈ ಪರೇಡ್ ​​​ಸಮಯದಲ್ಲಿ ದೇಶದ ಅನೇಕ ಕಡೆಯಿಂದ ಜನರು ಬಂದಿರುತ್ತಾರೆ. ನಮ್ಮ ದೇಶದ ಸೈನ್ಯ ಹಾಗೂ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳತ್ತಾರೆ. ಸಾವಿರಾರೂ ಜನ ಈ ಪರೇಡ್ ​​ವೀಕ್ಷಣೆಗೆ ದೆಹಲಿಗೆ ಬರುತ್ತಾರೆ. ಈಗಾಗಲೇ ಈ ಕಾರ್ಯಕ್ರಮ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಪರೇಡ್​​​ನಲ್ಲಿ ಹೇಗೆ ಭಾಗವಹಿಸಬಹುದು, ದೇಶದ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುವುದು ಹೇಗೆ? ಗ್ಯಾಲರಿ ಟಿಕೆಟ್​​​ ಪಡೆಯುವುದು ಹೇಗೆ? ಎಲ್ಲ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಮಹಿಳಾ ಶಕ್ತಿ ಪ್ರದರ್ಶನ, ಪರೇಡ್​ನಿಂದ ಸ್ತಬ್ಧಚಿತ್ರದವರೆಗೂ ಎಲ್ಲೆಲ್ಲೂ ಮಹಿಳೆಯರು 

ಗಣರಾಜ್ಯೋತ್ಸವ 2024: ಪರೇಡ್ ದಿನಾಂಕ, ಸ್ಥಳ ಮತ್ತು ಸಮಯ

ದಿನಾಂಕ: ಜನವರಿ 26

ಸ್ಥಳ: ರಾಜಪಥ, ದೆಹಲಿ.

ಸಮಯ: 10:00 am (ಪ್ರಾರಂಭದ ಸಮಯ: 9:30 am)

ರಿಪಬ್ಲಿಕ್ ಡೇ ಪರೇಡ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ?

ಹಂತ 1: ಆಮಂತ್ರಣ ನಿರ್ವಹಣಾ ವ್ಯವಸ್ಥೆ (IMS) ಅಥವಾ ರಕ್ಷಣಾ ಸಚಿವಾಲಯದ ಆಮಂತ್ರನ್ ಆನ್‌ಲೈನ್ ಪೋರ್ಟಲ್ (aamantran.mod.gov.in/login) ಗೆ ಭೇಟಿ ನೀಡಿ.

ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ತದನಂತರ ಅದಕ್ಕೆ ಬಂದ OTP ಅನ್ನು ಒದಗಿಸಿ.

ಹಂತ 3: ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಕ್ಯಾಪ್ಚಾ ಕೋಡ್‌ನಂತಹ ಇತರ ವಿವರಗಳನ್ನು ಭರ್ತಿ ಮಾಡಿ ಮತ್ತು ನೋಂದಾಯಿಸಿ.

ಹಂತ 4: ಅಲ್ಲಿ ನೀಡಿವ ಈವೆಂಟ್‌ಗಳ ಪಟ್ಟಿಯಲ್ಲಿ “ಗಣರಾಜ್ಯೋತ್ಸವ ಪರೇಡ್” ಆಯ್ಕೆ ಮಾಡಿ. ನಂತರ ಐಡಿ ಕ್ರಮಗಳನ್ನು ಆಯ್ಕೆ ಮಾಡಿ ಹಾಗೂ ಮಾನ್ಯವಾದ ಗುರುತಿನ ಪುರಾವೆಯನ್ನು ಅಲ್ಲಿ ಅಪ್‌ಲೋಡ್ ಮಾಡಿ.

ಹಂತ 5: ಟಿಕೆಟ್‌ಗಾಗಿ ಆನ್‌ಲೈನ್ ಪಾವತಿಯನ್ನು ಮಾಡಲು ಮುಂದುವರಿಯಿರಿ ಆಯ್ಕೆಯನ್ನು ಕ್ಲಿಕ್​​ ಮಾಡಿ

ಹಂತ 6: ಆನ್‌ಲೈನ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲಿ

ರಿಪಬ್ಲಿಕ್ ಡೇ ಪರೇಡ್ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ?

ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC) ಟ್ರಾವೆಲ್ ಕೌಂಟರ್‌ಗಳು, ದೆಹಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (DTDC) ಕೌಂಟರ್‌ಗಳು ಮತ್ತು ದೆಹಲಿಯ ವಿವಿಧ ಸ್ಥಳಗಳಲ್ಲಿ ಇಲಾಖೆ ಮಾರಾಟ ಕೌಂಟರ್‌ಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಕಾರ್ಯಕ್ರಮದ ಟಿಕೆಟ್‌ಗಳನ್ನು ಪಡೆಯಬಹುದು. ಇದರ ಜತೆಗೆ ಸಂಸತ್ ಭವನದ ಸ್ವಾಗತ ಕಚೇರಿ ಮತ್ತು ಜನಪಥ್‌ನಲ್ಲಿರುವ ಭಾರತ ಸರ್ಕಾರದ ಪ್ರವಾಸಿ ಕಚೇರಿಯೂ ಸಹ ನಿರ್ದಿಷ್ಟ ಸಮಯದಲ್ಲಿ ಟಿಕೆಟ್ ಖರೀದಿಗೆ ಲಭ್ಯವಿದೆ.

ಸೇನಾ ಭವನ, ಶಾಸ್ತ್ರಿ ಭವನ, ಜಂತರ್ ಮಂತರ್, ಪ್ರಗತಿ ಮೈದಾನ್ ಮತ್ತು ಸಂಸತ್ ಭವನದಲ್ಲಿರುವ ಬೂತ್‌ಗಳು ಮತ್ತು ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವಾಗ ನೀವು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ನಂತಹ ಮೂಲ ಫೋಟೋ ಐಡಿ ಕಾರ್ಡ್​​​ಗಳು ಅಗತ್ಯ ಇರುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್