Republic Day 2024: ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಮಹಿಳಾ ಶಕ್ತಿ ಪ್ರದರ್ಶನ, ಪರೇಡ್ನಿಂದ ಸ್ತಬ್ಧಚಿತ್ರದವರೆಗೂ ಎಲ್ಲೆಲ್ಲೂ ಮಹಿಳೆಯರು
2024ರ ಗಣರಾಜ್ಯೋತ್ಸವ ಪರೇಡ್ಗೆ ಈಗಿನಿಂದಲೇ ಕೇಂದ್ರ ಸರ್ಕಾರವು ಸಿದ್ಧತೆಗಳನ್ನು ಆರಂಭಿಸಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಸೈನ್ಯದ ಪರೇಡ್ನಿಂದ ಹಿಡಿದು ಸ್ತಬ್ಧಚಿತ್ರ ಪ್ರದರ್ಶನಗಳವರೆಗೆ ಮಹಿಳೆಯರೇ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.
2024ರ ಗಣರಾಜ್ಯೋತ್ಸವ ಪರೇಡ್ಗೆ ಈಗಿನಿಂದಲೇ ಕೇಂದ್ರ ಸರ್ಕಾರವು ಸಿದ್ಧತೆಗಳನ್ನು ಆರಂಭಿಸಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಸೈನ್ಯದ ಪರೇಡ್ನಿಂದ ಹಿಡಿದು ಸ್ತಬ್ಧಚಿತ್ರ ಪ್ರದರ್ಶನಗಳವರೆಗೆ ಮಹಿಳೆಯರೇ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಸೆರೆಮೋನಿಯಲ್ ಬ್ರ್ಯಾಂಚ್ ಈಗಾಗಲೇ ಎಲ್ಲಾ ರಕ್ಷಣಾ ಪಡೆಗಳಿಗೆ ಟಿಪ್ಪಣಿಯನ್ನು ನೀಡಿದೆ.
ಮಾರ್ಚ್, ಬ್ಯಾಂಡ್, ಸ್ತಬ್ದಚಿತ್ರ ಮತ್ತು ಪ್ರದರ್ಶನ ಸೇರಿದಂತೆ ಎಲ್ಲದರಲ್ಲೂ ಮಹಿಳೆಯರು ಮಾತ್ರ ಭಾಗವಹಿಸಲು ನಿರ್ಧರಿಸಲಾಗಿದೆ ಎಂದರು. 2023ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಮೊದಲ ಬಾರಿಗೆ ಕೇಂದ್ರೀಯ ಪೊಲೀಸ್ ಪಡೆಯಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ನೋಡಿದ್ದೇವೆ.
ಮತ್ತಷ್ಟು ಓದಿ: Field Marshal Manekshaw: ಭಾರತೀಯ ಸೇನೆ ಎಂದೂ ಮರೆಯಲಾಗದ ಮಾಣಿಕ್ಯ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜೀವನಗಾಥೆ
ಮಹಿಳಾ ಆರ್ಟಿಲರಿ ರೆಜಿಮೆಂಟ್ ಅನ್ನು ತೆರೆಯಲಾಗಿದೆ: ಸರ್ಕಾರದ ಈ ಪ್ರಯತ್ನದಿಂದಾಗಿ, ಮಹಿಳೆಯರು ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಸಾಧ್ಯವಾಗುತ್ತದೆ ಮತ್ತು ಸೈನ್ಯಕ್ಕೆ ಸೈನಿಕರಾಗಿ ಸಹ ಸೇರಿದ್ದಾರೆ. ಇತ್ತೀಚೆಗೆ ಸೇನೆಯು ಮಹಿಳಾ ಅಧಿಕಾರಿಗಳಿಗೆ ಮಹಿಳಾ ಆರ್ಟಿಲರಿ ರೆಜಿಮೆಂಟ್ ಅನ್ನು ತೆರೆದಿದೆ.
ಆದರೆ, ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ಇಲ್ಲವೆಂದಾಗಲೀ ಅಥವಾ ಮಹಿಳೆಯರು ಕಡೆಗಣಿಸಲ್ಪಟ್ಟಿದ್ದಾರೆಂದಾಗಲೀ ಅಲ್ಲ. ಎಲ್ಲಾ ಮೂರು ಸೇವೆಗಳಲ್ಲಿ ಪುರುಷರಿಗೆ ಸಮಾನವಾದ ಪಾತ್ರಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಅವರು ಯುದ್ಧ ವಿಮಾನಗಳನ್ನು ಹಾರಿಸುತ್ತಾರೆ, ಯುದ್ಧನೌಕೆಗಳಲ್ಲಿ ಸೇವೆ ಸಲ್ಲಿಸುತ್ತಾರೆ, ಆದರೆ ಇನ್ನೂ ಕೆಲವು ಕಡೆ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇದೆ. ಹೀಗಾಗಿ ಮಹಿಳೆಯರನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಇದನ್ನು ಮಾಡಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ