ಧರ್ಮ, ಜಾತಿಯ ಆಧಾರಕ್ಕಿಂತ ರಾಷ್ಟ್ರೀಯ ಏಕತೆ ಅಗತ್ಯ : ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸದ್ಗುರು

ಪಹಲ್ಗಾಂನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಘಟನೆಯನ್ನು ಸದ್ಗುರು ಜಗ್ಗಿ ವಾಸುದೇವ್ ತೀವ್ರವಾಗಿ ಖಂಡಿಸಿದ್ದು, ಭಯೋತ್ಪಾದನೆಯು ಸಮಾಜವನ್ನು ಭಯಭೀತಗೊಳಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಏಕತೆಯ ಅಗತ್ಯತೆಯನ್ನು ಒತ್ತಿ ಹೇಳಿ, ಧರ್ಮ, ಜಾತಿಯ ಆಧಾರದ ಮೇಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತುವಂತೆ ಮನವಿ ಮಾಡಿದ್ದಾರೆ.

ಧರ್ಮ, ಜಾತಿಯ ಆಧಾರಕ್ಕಿಂತ ರಾಷ್ಟ್ರೀಯ ಏಕತೆ ಅಗತ್ಯ : ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸದ್ಗುರು
Sadhguru
Image Credit source: Pinterest

Updated on: Apr 24, 2025 | 3:33 PM

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಉಗ್ರರ ಗುಂಡಿನ ದಾಳಿಯಿಂದ 26 ಪ್ರವಾಸಿಗರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು,ಪುಲ್ವಾಮಾ ದಾಳಿಯ ನಂತರ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಭಯೋತ್ಪಾದಕ ದಾಳಿಗೆ ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಹೀನಾ ಕೃತ್ಯವನ್ನು ಅವರು ಹೇಡಿತನ ಎಂದು ಕರೆದಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ‘ಎಕ್ಸ್’ ನಲ್ಲಿ, ಭಯೋತ್ಪಾದನೆಯ ಗುರಿ ಯುದ್ಧವಲ್ಲ, ಬದಲಾಗಿ ಸಮಾಜವನ್ನು ಭಯದೆಡೆಗೆ ನೂಕುವುದು ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕರು ದೇಶದ ಆರ್ಥಿಕ ಪ್ರಗತಿಯನ್ನು ಹಳಿತಪ್ಪಿಸಲು ಮತ್ತು ಪ್ರತಿಯೊಂದು ಹಂತದಲ್ಲೂ ಅವ್ಯವಸ್ಥೆಯನ್ನು ಸೃಷ್ಟಿಸಲು ಬಯಸುತ್ತಾರೆ. ನಾವು ಈ ದೇಶದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಮತ್ತು ಪೋಷಿಸಲು ಬಯಸಿದರೆ, ಅಂತಹ ಅರಾಜಕತಾವಾದಿ ಅಂಶಗಳನ್ನು ಕಟ್ಟುನಿಟ್ಟಾಗಿ ಮತ್ತು ದೃಢನಿಶ್ಚಯದಿಂದ ಎದುರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿಯನ್ನು ಕೇಕ್ ತಿಂದು ಸಂಭ್ರಮಿಸಿತೇ ಭಾರತದಲ್ಲಿರುವ ಪಾಕ್ ಹೈಕಮಿಷನ್?

ಧರ್ಮದ ಆಧಾರದ ಮೇಲೆ ಹರಡುವ ಭಯೋತ್ಪಾದನೆ ತುಂಬಾ ಅಪಾಯಕಾರಿ. ಆದ್ದರಿಂದ ಧರ್ಮ, ಜಾತಿ, ಪಂಥಗಳ ಕಿರಿದಾದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲುವುದು ಸದ್ಯಕ್ಕೆ ಬಹಳ ಮುಖ್ಯ ಅವರು ಹೇಳಿದರು. ಮೃತರಿಗೆ ಮತ್ತು ಗಾಯಾಳುಗಳಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ