AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಹಿಂದೂ ಎಂಬ ಕಾರಣಕ್ಕೆ ಮಗುವಿನ ಅಜ್ಜನನ್ನು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕೊಂದಿದ್ದಾರೆ?, ಇಲ್ಲ ಇದು 2020ರ ವಿಡಿಯೋ

Pahalgam Terrorists Attack: ಇಂದು ಕಾಶ್ಮೀರದ ಪಹಲ್ಗಾಮ್‌ಗೆ ಭೇಟಿ ನೀಡಲು ಹೋದ ಈ ಮುಗ್ಧ ಮಗುವಿನ ಮುಂದೆ, ಅವನ ಅಜ್ಜ ಹಿಂದೂ ಎಂಬ ಕಾರಣಕ್ಕಾಗಿ ಗುಂಡಿಕ್ಕಿ ಕೊಂದ ಮುಸ್ಲಿಂ ಭಯೋತ್ಪಾದಕರು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ಇತ್ತೀಚಿನದಲ್ಲ.

Fact Check: ಹಿಂದೂ ಎಂಬ ಕಾರಣಕ್ಕೆ ಮಗುವಿನ ಅಜ್ಜನನ್ನು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕೊಂದಿದ್ದಾರೆ?, ಇಲ್ಲ ಇದು 2020ರ ವಿಡಿಯೋ
Pahalgam Terror Attack Fact Check (2)
Vinay Bhat
|

Updated on: Apr 24, 2025 | 1:05 PM

Share

ಬೆಂಗಳೂರು (ಏ. 24): ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terrorists Attack) ಕನಿಷ್ಠ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ, ಅದರಲ್ಲಿ ಮಗುವೊಂದು ಮೃತ ದೇಹದ ಮೇಲೆ ಕುಳಿತಿರುವುದನ್ನು ಕಾಣಬಹುದು. ವಿಡಿಯೋದ ಎರಡನೇ ಭಾಗದಲ್ಲಿ, ಅದೇ ಮಗು ಕಾರಿನೊಳಗೆ ರಕ್ತಸಿಕ್ತ ಶರ್ಟ್ ಧರಿಸಿ ಕಾಣಿಸಿಕೊಂಡಿದೆ. ಅಲ್ಲದೆ, ಮಗುವಿಗೆ ಬಿಸ್ಕತ್ತು ಮತ್ತು ಚಾಕೊಲೇಟ್‌ಗಳನ್ನು ನೀಡುವ ಮೂಲಕ ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವ ಮಹಿಳೆಯ ಧ್ವನಿ ಕೇಳಿಸುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಏಪ್ರಿಲ್ 23, 2025 ರಂದು ಈ ವಿಡಿಯೋವನ್ನು ಹಂಚಿಕೊಂಡು, ‘‘ಇಂದು ಕಾಶ್ಮೀರದ ಪಹಲ್ಗಾಮ್‌ಗೆ ಭೇಟಿ ನೀಡಲು ಹೋದ ಈ ಮುಗ್ಧ ಮಗುವಿನ ಮುಂದೆ, ಅವನ ಅಜ್ಜ ಹಿಂದೂ ಎಂಬ ಕಾರಣಕ್ಕಾಗಿ ಗುಂಡಿಕ್ಕಿ ಕೊಂದ ಮುಸ್ಲಿಂ ಭಯೋತ್ಪಾದಕರು..’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಸ್ಕೂಬಾ ಡ್ರೈವರ್​ಗಳು ನಿಜಕ್ಕೂ ರಾಮ ಸೇತುವಿನ ವಿಡಿಯೋ ತೋರಿಸಿದ್ದಾರೆಯೇ?
Image
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಿಯಾಂಕಾ ಗಾಂಧಿ ಪ್ರತಿಭಟನೆ?
Image
ಭಾರತ ಸರ್ಕಾರದಿಂದ 125 ಮತ್ತು 500 ರೂಪಾಯಿ ನಾಣ್ಯ ಬಿಡುಗಡೆ?
Image
ಎಂಎಸ್ ಧೋನಿ ಬಿಜೆಪಿ ಸೇರ್ಪಡೆ?: ವೈರಲ್ ಫೋಟೋದ ಅಸಲಿಯತ್ತು ಏನು?

ಮಗುವಿನ ಅಜ್ಜನನ್ನು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕೊಂದಿದ್ದು ನಿಜವೇ?:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ಇತ್ತೀಚಿನದಲ್ಲ, ಇದು ಸುಮಾರು ಐದು ವರ್ಷಗಳಷ್ಟು ಹಳೆಯದು ಮತ್ತು ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ನಡೆದ ಘಟನೆ ಆಗಿದೆ. ಅಲ್ಲದೆ, ಈ ಘಟನೆಯಲ್ಲಿ ಕೊಲ್ಲಲ್ಪಟ್ಟ ವೃದ್ಧ ಮುಸ್ಲಿಂ ಆಗಿದ್ದಾರೆ.

Fact Check: ಸ್ಕೂಬಾ ಡ್ರೈವರ್​ಗಳು ನಿಜಕ್ಕೂ ರಾಮ ಸೇತುವಿನ ವಿಡಿಯೋ ತೋರಿಸಿದ್ದಾರೆಯೇ?: ವೈರಲ್ ಪೋಸ್ಟ್​ನ ಸತ್ಯ ಇಲ್ಲಿದೆ

ನಿಜಾಂಶವನ್ನು ತಿಳಿಯಲು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ಅನೇಕ ಮಾಧ್ಯಮ ಸಂಸ್ಥೆ ಇದೇ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ವರದಿಯ ಪ್ರಕಾರ, ಈ ಘಟನೆ ಜುಲೈ 1, 2020 ರಂದು ಕಾಶ್ಮೀರದ ಸೋಪೋರ್ ಪಟ್ಟಣದಲ್ಲಿ ನಡೆದಿದೆ. ಆ ದಿನ ಬೆಳಿಗ್ಗೆ 7.30ಕ್ಕೆ, ಬಶೀರ್ ಅಹ್ಮದ್ ಖಾನ್ ತನ್ನ ಮೂರು ವರ್ಷದ ಮೊಮ್ಮಗನೊಂದಿಗೆ ಕಾರಿನಲ್ಲಿ ಕಾರು ಚಲಾಯಿಸಲು ಹೊರಟಿದ್ದಾಗ, ಸೋಪೋರ್‌ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಗುಂಡು ಹಾರಿಸುವಾಗ, ಬಶೀರ್ ಅವರ ಕಾರು ದಾರಿಯಲ್ಲಿ ಬಂದಿತು ಮತ್ತು ಬಶೀರ್ ಮೇಲೆ ಗುಂಡು ಹಾರಿಸಲಾಯಿತು, ಇದರಿಂದಾಗಿ ಅವರು ಸಾವನ್ನಪ್ಪಿದರು.

ಮತ್ತೊಂದು ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ಭಯೋತ್ಪಾದಕರಿಂದ ಗುಂಡು ಹಾರಿಸಲ್ಪಟ್ಟ ತನ್ನ ಅಜ್ಜನ ಪಕ್ಕದಲ್ಲಿ ಕುಳಿತಿದ್ದ ಮೂರು ವರ್ಷದ ಮಗುವನ್ನು ಭದ್ರತಾ ಪಡೆಗಳು ರಕ್ಷಿಸಿವೆ. ಸಿಆರ್‌ಪಿಎಫ್ ಸಿಬ್ಬಂದಿ ಬಾಲಕನನ್ನು ಗಮನಿಸಿ, ಆತನನ್ನು ಕರೆದುಕೊಂಡು ಹೋಗಿ ತಾಯಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.

ಟಿವಿ9 ಮರಾಠಿ ಕೂಡ ಇದೇ ವೈರಲ್ ವಿಡಿಯೋವನ್ನು ಎಂಬೆಡ್ ಮಾಡಿಕೊಂಡು (ANI ವಿಡಿಯೋ ಎಂಬೆಡ್ ಮಾಡಲಾಗಿದೆ) ಜುಲೈ 1, 2020 ರಂದು ಸುದ್ದಿ ಪ್ರಕಟಿಸಿದೆ. ‘‘ಸೈನಿಕರ ಮತ್ತು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಒಬ್ಬ ಸೈನಿಕ ಹುತಾತ್ಮರಾಗಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ದುರದೃಷ್ಟವಶಾತ್, ಒಬ್ಬ ನಾಗರಿಕ ಕೂಡ ಸಾವನ್ನಪ್ಪಿದ್ದಾನೆ. ಆದರೆ, ಆ ನಾಗರಿಕನ ಮೊಮ್ಮಗ ತನ್ನ ಅಜ್ಜನ ದೇಹದ ಮೇಲೆ ಕುಳಿತು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಫೋಟೋ ವೈರಲ್ ಆಗಿದೆ. ಈ ಸಂದರ್ಭ ಅಲ್ಲೆ ಒಬ್ಬ ಭಾರತೀಯ ಸೈನಿಕ, ಆ ಪುಟ್ಟ ಹುಡುಗನನ್ನು ತನ್ನ ಬಳಿಗೆ ಕರೆತಂದು ರಕ್ಷಿಸಿದ್ದಾನೆ’’ ಎಂದು ವರದಿಯಲ್ಲಿದೆ.

ಈ ಮೂಲಕ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಜುಲೈ 2020 ರಲ್ಲಿ ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ನಡೆದ ಘಟನೆ ಆಗಿದೆ. ಅಲ್ಲದೆ, ಈ ಘಟನೆಯಲ್ಲಿ ಕೊಲ್ಲಲ್ಪಟ್ಟ ವೃದ್ಧ ಮುಸ್ಲಿಂ ಆಗಿದ್ದಾರೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್