ತೆಲಂಗಾಣಕ್ಕೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು ಕೆಸಿಆರ್‌ಗೆ ಬೇಕಾಗಿಲ್ಲ, ಕೇಂದ್ರ ಸಚಿವ ಕಿಶನ್ ರೆಡ್ಡಿ ವಾಗ್ದಾಳಿ
ತೆಲಂಗಾಣ ಸರ್ಕಾರ ಫೆ.06ರಂದು ಮಂಡಿಸಿದ್ದ ಬಜೆಟ್ ಬಗ್ಗೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಸರಣಿ ಟ್ವೀಟ್ ಮಾಡಿ, ಇಲಾಖೆವಾರು ಹಂಚಿಕೆಯನ್ನು ಅಂಕಿ-ಅಂಶಗಳೊಂದಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹೈದರಾಬಾದ್: 2023-24ನೇ ಸಾಲಿನ ಬಜೆಟ್‌ನಲ್ಲಿ BRS ನೇತೃತ್ವದ ತೆಲಂಗಾಣ ಸರ್ಕಾರ, ಯಾವುದೇ ಇಲಾಖೆಗಳಿಗೆ ಹೇಳಿಕೊಳ್ಳುವಂತ ಯೋಜನೆಗಳು ಹಾಗೂ ಅನುದಾನವನ್ನು ನೀಡಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ, ಈಶಾನ್ಯ ರಾಜ್ಯಗಳ ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ( Kishan Reddy) ಕಿಡಿಕಾರಿದ್ದಾರೆ. ತೆಲಂಗಾಣ ಸರ್ಕಾರದ ಫೆ.06ರಂದು ಮಂಡಿಸಿದ್ದ ಬಜೆಟ್ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಜೆಟ್‌ನಲ್ಲಿ ಇಲಾಖೆವಾರು ಹಂಚಿಕೆಯನ್ನು ಅಂಕಿ-ಅಂಶಗಳೊಂದಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಪಕ್ಷವು ರಾಜ್ಯದ ಜನರ ಕಲ್ಯಾಣವನ್ನು ಕಡೆಗಣಿಸುತ್ತಿದೆ. ಬಜೆಟ್‌ನಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಯಾವುದೇ ಪ್ರಯತ್ನ ನಡೆದಿಲ್ಲ. ಶಿಕ್ಷಣ, ಆರೋಗ್ಯ ರಕ್ಷಣೆ, ರಸ್ತೆಗಳು, ಗ್ರಾಮೀಣಭಿವೃದ್ಧಿ ಸೇರಿದಂತೆ ಇತರೆ ಪ್ರಮುಖ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಹಂಚಿಕೆ ಮಾಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕಿಡಿಕಾರಿದ್ದಾರೆ.
5. KCR has been ignoring the needs & requirements of Rural Telangana.
Budget allocation for Rural development is seeing a gradual reduction every year under KCR Rule.
He has totally failed in providing the necessary cushion to rural livelihoods pic.twitter.com/W1qxhDlY9P
— G Kishan Reddy (@kishanreddybjp) February 21, 2023
ದೇಶದ ರಾಷ್ಟ್ರೀಯ ಆರೋಗ್ಯ ವೆಚ್ಚವು ಸರಾಸರಿ ಶೇ. 6.3ರಷ್ಟಿದೆ. ಆದ್ರೆ, ತೆಲಂಗಾಣ ಸರ್ಕಾರದ ಖರ್ಚು ಮತ್ತು ಬಜೆಟ್ ಹಂಚಿಕೆ ಕೇವಲ 5ರಷ್ಟು ಇದೆ. ಮುಖ್ಯಮಂತ್ರಿ ಕೆಸಿಆರ್ ಅವರು ಆರೋಗ್ಯ ರಕ್ಷಣೆಯ ವಿಷಯದಲ್ಲಿ ತೆಲಂಗಾಣವನ್ನು “ದೇಶದ ರತ್ನ” ಎಂದು ಹೇಳುತ್ತಾರೆ. ಆದರೆ ಖರ್ಚು ಮತ್ತು ಬಜೆಟ್ ಹಂಚಿಕೆಯ ವಿಷಯದಲ್ಲಿ ಅಲ್ಲ ಎಂದು ಸಚಿವ ಕಿಶನ್ ರೆಡ್ಡಿ ಲೇವಡಿ ಮಾಡಿದ್ದಾರೆ.
ಕೆಸಿಆರ್ ಗ್ರಾಮೀಣದ ಅಗತ್ಯತೆಗಳನ್ನು ಕಡೆಗಣಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ಪ್ರತಿ ವರ್ಷ ಗ್ರಾಮೀಣಾಭಿವೃದ್ಧಿಗೆ ಬಜೆಟ್ ಹಂಚಿಕೆಯಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಗ್ರಾಮೀಣಾಭಿವೃದ್ಧಿಗೆ ರಾಷ್ಟ್ರೀಯ ಸರಾಸರಿ 5.7% ಆಗಿದ್ದರೆ, ತೆಲಂಗಾಣದ ಹಂಚಿಕೆ ಕೇವಲ ಸರಾಸರಿ ಶೇ.3.6ಕ್ಕೆ ಸೀಮಿತವಾಗಿದೆ. ಇದರೊಂದಿಗೆ ಗ್ರಾಮೀಣ ಜೀವನೋಪಾಯಕ್ಕೆ ಅಗತ್ಯವಾದ ಯೋಜನೆಗಳನ್ನು ಒದಗಿಸುವಲ್ಲಿ ಕೆಸಿಆರ್ ಸರ್ಕಾರ ಸಂಪೂರ್ಣ ವಿಫಲರಾಗಿದೆ. ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ. ಪೊಲೀಸರ ಇಲಾಖೆಗೆ ಬಜೆಟ್ ಹಂಚಿಕೆಯೂ ಕಡಿಮೆಯಾಗಿದೆ. ಆಯವ್ಯಯದಲ್ಲಿ ಪೊಲೀಸರಿಗೆ ಮೀಸಲಿಟ್ಟ 4.3% ರಾಷ್ಟ್ರೀಯ ಸರಾಸರಿಗೆ ವಿರುದ್ಧವಾಗಿ, ತೆಲಂಗಾಣವು 3.6% ಅನುದಾನವನ್ನು ನಿಗದಿಪಡಿಸಿದೆ ಎಂದರು.
ರಾಜ್ಯದಲ್ಲಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಯಾವುದೇ ಪ್ರಯತ್ನ ಆಗಿಲ್ಲ. ಮಾನವ ಸಂಪನ್ಮೂಲ ಮತ್ತು ಶಿಕ್ಷಣದ ಮೇಲೆ BRS ಸರ್ಕಾರದ ವೆಚ್ಚವು ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆ ಇದೆ. ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ರಸ್ತೆಗಳು ಮತ್ತು ಸೇತುವೆಗಳು ನಿರ್ಣಾಯಕವಾಗಿವೆ. ಆದ್ರೆ, ಸೇತುವೆಗಳು ಮತ್ತು ರಸ್ತೆಗಳಿಗೆ ಬಜೆಟ್‌ನಲ್ಲಿ ಕೇವಲ ಶೇ.3.7ರಷ್ಟು ನೀಡಲಾಗಿದೆ. ಈ ಮೂಲಕ ತೆಲಂಗಾಣಕ್ಕೆ ಉತ್ತಮ ಗುಣಮಟ್ಟದ ಮೂಲಸೌಕರ್ಯ ಅಗತ್ಯವಿಲ್ಲ ಎಂದು ಕೆಸಿಆರ್ ನಂಬಿದ್ದಾರೆ. ನಗರಾಭಿವೃದ್ಧಿಗೆ ಬಜೆಟ್‌ನ ಕೇವಲ 2.8% ಹಂಚಿಕೆಯೊಂದಿಗೆ ರಾಷ್ಟ್ರೀಯ ಸರಾಸರಿ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ಕೆಸಿಆರ್ ಸರ್ಕಾರಕ್ಕೆ ತಿವಿದಿದ್ದಾರೆ.
2. KCR considers Telangana a “Jewel in the country in terms of healthcare” but not in terms of spending & budget allocation
Health care budget is 5%, whereas the national average of states is higher at 6.3% pic.twitter.com/u4jndrv52F
— G Kishan Reddy (@kishanreddybjp) February 21, 2023
Published On - 10:50 pm, Tue, 21 February 23