ನಂಬಿಕೆ ಇಡಿ, ದ್ವೇಷ ಗೆಲ್ಲುವುದಿಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್
Rahul Gandhi ಕಾಂಗ್ರೆಸ್ ನಾಯಕ ತನ್ನ ಟ್ವೀಟ್ ಯಾವ ಸಂದರ್ಭದ ಬಗ್ಗೆ ಹೇಳದಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಹೇಳಿಕೆಯನ್ನು ಹಾಸ್ಯನಟ ಮುನಾವರ್ ಫರೂಕಿ ಅವರ ಹೇಳಿಕೆಯೊಂದಿಗೆ ಲಿಂಕ್ ಮಾಡಿದ್ದಾರೆ
ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi )ಅವರು ಭಾನುವಾರದಂದು “ನಂಬಿಕೆ ಇರಲಿ. ಪ್ರಯತ್ನ ಬಿಡಬೇಡಿ, ನಿಲ್ಲಬೇಡಿ” ಎಂದು ಟ್ವೀಟ್ ಮಾಡಿದ್ದು ‘ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ’ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. ಕಾಂಗ್ರೆಸ್ ನಾಯಕ ತನ್ನ ಟ್ವೀಟ್ ಯಾವ ಸಂದರ್ಭದ ಬಗ್ಗೆ ಹೇಳದಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಹೇಳಿಕೆಯನ್ನು ಹಾಸ್ಯನಟ ಮುನಾವರ್ ಫರೂಕಿ (Munawar Faruqui) ಅವರ ಹೇಳಿಕೆಯೊಂದಿಗೆ ಲಿಂಕ್ ಮಾಡಿದ್ದಾರೆ. ಭಾನುವಾರದಂದು ನಿಗದಿಯಾಗಿದ್ದ ಅವರ ಬೆಂಗಳೂರು ಕಾರ್ಯಕ್ರಮವು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದ ರದ್ದುಗೊಂಡ ನಂತರ ತಾನು ಕಾಮಿಡಿ ತೊರೆಯುವುದಾಗಿ ಫರೂಕಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಫರೂಕಿ ಕಳೆದ ಎರಡು ತಿಂಗಳುಗಳಲ್ಲಿ ಅವರ 12 ಪ್ರದರ್ಶನಗಳು ರದ್ದುಗೊಂಡ ನಂತರ ಅವರು ತಮ್ಮ ಕಲಾ ಪ್ರಕಾರಕ್ಕೆ ವಿದಾಯ ಹೇಳುತ್ತಿರುವುದಾಗಿ ಬರೆದಿದ್ದಾರೆ. ಜನವರಿ 1 ರಂದು ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಫರೂಕಿಯನ್ನು ಬಂಧಿಸಲಾಗಿತ್ತು. ಫರೂಕಿ ಅವರು ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ಅವರನ್ನು ಬಂಧಿಸಲಾಯಿತು. ಒಂದು ತಿಂಗಳು ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಫರೂಕಿ ಬಿಡುಗಡೆಯಾದರು.
नफ़रत नहीं जीतेगी- विश्वास रखिए हार नहीं माननी, रुकना नहीं है।#StayUnited
— Rahul Gandhi (@RahulGandhi) November 28, 2021
ದ್ವೇಷ ಗೆದ್ದಿತು, ಕಲಾವಿದ ಸೋತ, ಅನ್ಯಾಯವಾಗಿದೆ ಎಂದು ಫರೂಕಿ ಹೇಳಿದ್ದಾರೆ. ತಮಾಷೆಯೊಂದರ ವಿಷಯದಲ್ಲಿ ನನ್ನನ್ನು ಜೈಲಿಗೆ ಹಾಕಲಾಗಿತ್ತು. ಸಮಸ್ಯೆ ಇಲ್ಲದೇ ಇರುವ ಪ್ರದರ್ಶನವನ್ನು ನಾನು ರದ್ದುಗೊಳಿಸಲು ಬಯಸಿಲ್ಲ. ಇದು ಅನ್ಯಾಯ. ಈ ಪ್ರದರ್ಶನವು ಧರ್ಮವನ್ನು ಲೆಕ್ಕಿಸದೆ ಭಾರತದ ಜನರಿಂದ ತುಂಬಾ ಪ್ರೀತಿಯನ್ನು ಗಳಿಸಿದೆ. ಇದು ಅನ್ಯಾಯವಾಗಿದೆ. ಪ್ರದರ್ಶನದ ಸೆನ್ಸಾರ್ ಪ್ರಮಾಣಪತ್ರ ನಮ್ಮಲ್ಲಿ ಇದೆ.ದು ಪ್ರದರ್ಶನದಲ್ಲಿ ಏನೇನೂ ಸಮಸ್ಯೆ ಇರಲಿಲ್ಲ ಎಂದು ಮುನಾವರ್ ಬರೆದಿದ್ದಾರೆ.
Nafrat jeet hai, Artist haar gaya. Im done! Goodbye! INJUSTICE pic.twitter.com/la4xmaeQ0C
— munawar faruqui (@munawar0018) November 28, 2021
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಹುಲ್ ಗಾಂಧಿಯವರ ಟ್ವೀಟ್ ಅನ್ನು ದೇಶದ ರಾಜಕೀಯ ಬೆಳವಣಿಗೆಗಳೊಂದಿಗೆ ಸಂದರ್ಭೋಚಿತಗೊಳಿಸಿದರೆ, ಅನೇಕರು ಮುನಾವರ್ ಫರೂಕಿ ಅವರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಈ ಸಂದೇಶವು ಅವರಿಗೆ ಉದ್ದೇಶಿಸಲಾಗಿತ್ತು ಎಂದು ಬರೆದಿದ್ದಾರೆ.
ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಸೋಲನುಭವಿಸಿದ ನಂತರ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧದ ಟೀಕೆಗೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್, “ಮೊಹಮ್ಮದ್ ಶಮಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಯಾರಿಂದಲೂ ಪ್ರೀತಿ ಲಭಿಸಿದ ಕಾರಣ ಈ ಜನರು ದ್ವೇಷದಿಂದ ತುಂಬಿದ್ದಾರೆ. ಅವರನ್ನು ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Munawar Faruqui ಮುನಾವರ್ ಫರೂಕಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ