ಕೇರಳ: ಕಾಡಾನೆ ದಾಳಿಗೆ 47 ವರ್ಷದ ವ್ಯಕ್ತಿ ಬಲಿ, ವಯನಾಡಿನಲ್ಲಿ ಸೆಕ್ಷನ್ 144 ಜಾರಿ

|

Updated on: Feb 10, 2024 | 1:28 PM

wayanad: ಕೇರಳದ ವಯನಾಡಿನ ಮಾನಂತವಾಡಿಯಲ್ಲಿ ಕಾಡಾನೆ ದಾಳಿಗೆ 47 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ವಯನಾಡು ಜಿಲ್ಲೆಯ ನಾಲ್ಕು ವಿಭಾಗಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಕಾಡಾನೆ ದಾಳಿಯಿಂದ ಅಲ್ಲಿನ ಭಯಗೊಂಡಿದ್ದು, ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇರಳ: ಕಾಡಾನೆ ದಾಳಿಗೆ 47 ವರ್ಷದ ವ್ಯಕ್ತಿ ಬಲಿ, ವಯನಾಡಿನಲ್ಲಿ ಸೆಕ್ಷನ್ 144 ಜಾರಿ
Follow us on

ಕೇರಳ, ಫೆ.10: ಇಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಕೇರಳದ ವಯನಾಡಿನ (Wayanad) ಮಾನಂತವಾಡಿಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆ ಆ ವ್ಯಕ್ತಿಯನ್ನು ತುಳಿದು ಕೊಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಟ್ಯಾಕ್ಸಿ ಡ್ರೈವರ್‌ ಅಜಿ ಎಂದು ಗುರುತಿಸಲಾಗಿದೆ. ಸುಮಾರು ದಿನಗಳಿಂದ ಈ ಕಾಡಾನೆ ಮಾನಂತವಾಡಿ ಜನರಿಗೆ ತೊಂದರೆಯನ್ನು ನೀಡುತ್ತಿದೆ ಎಂದು ಅಲ್ಲಿ ಅರಣ್ಯಾಧಿಕಾರಿ ದೂರು ನೀಡಲಾಗಿತ್ತು. ಆದರೆ ಅಧಿಕಾರಿಗಳು ಈ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

ಒಂದು ವಾರದಿಂದ ಕಾಡಾನೆ ಈ ಪ್ರದೇಶದಲ್ಲಿ ಅಳೆದಾಡುತ್ತಿದೆ. ಇದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಈ ಹಿಂದೆ ತನ್ನೀರ್ ಕೊಂಬನ್ ಎಂಬ ಆನೆಯು ಈ ಪ್ರದೇಶದಲ್ಲಿ ತೊಂದರೆ ನೀಡಿತ್ತು. ಅನೇಕರನ್ನು ಕೊಂಬನ್ ಆನೆ ಬಳಿ ಪಡೆದಿತ್ತು. ಸಾಮಾಜಿಕ ಜಾಲತಾಣದಲ್ಲೂ ತನ್ನೀರ್ ಕೊಂಬನ್  ಎಂಬ ಹ್ಯಾಶ್​​​ ಟ್ಯಾಗ್ ಕೂಡ ಭಾರೀ ಸದ್ದು ಮಾಡಿತ್ತು. ಈ ಆನೆ ಕರ್ನಾಟಕದ ಅರಣ್ಯ ಪ್ರದೇಶದಿಂದ ಮನಂತವಾಡಿಗೆ ದಾರಿ ತಪ್ಪಿ ಬಂದಿತ್ತು ಎಂದು ಹೇಳಲಾಗಿದೆ. ನಂತರ ಕೇರಳ ಅರಣ್ಯಧಿಕಾರಿಗಳು ತನ್ನೀರ್ ಕೊಂಬನ್ ಶಾಂತಗೊಳಿಸಿ ಸೆರೆಹಿಡಿದು ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸಿದ್ದರು. ಆದರೆ ಇದು ಅಲ್ಲಿ ಸಾವನ್ನಪ್ಪಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು.

ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ:

ಆದರೆ ಇದೀಗ ಮತ್ತೆ ಎರಡನೇ ಆನೆ ಬಂದಿದೆ. ಈ ಆನೆಯಲ್ಲಿ ರೇಡಿಯೊ ಕಾಲರ್ ಅಳವಡಿಸಿರುವುದು ಪತ್ತೆಯಾಗಿದೆ. ಇದು ಕೂಡ ಕರ್ನಾಟಕದಿಂದ ಬಂದಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಸಾವನ್ನಪ್ಪಿರುವ ಅಜಿ ಎಂಬ ವ್ಯಕ್ತಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಜಿ ತಮ್ಮ ಮನೆಯ ಗೇಟ್‌ನ ಬಳಿ ನಿಂತುಕೊಂಡಿರುತ್ತಾರೆ. ಈ ವೇಳೆ ಆನೆ ವೇಗವಾಗಿ ಬರುವುದನ್ನು ಕಂಡು ಗೇಟಿನಿಂದ ಜಿಗಿದು ಒಳಗೆ ಬರುವ ವೇಳೆ ಕಾಲು ಜಾರಿ ಬೀಳುತ್ತಾರೆ. ಆನೆ ಕ್ಷಣ ವೇಗದಲ್ಲಿ ಬಂದು ಗೇಟ್​​​​ ಮುರಿದು ಅಜಿ ಅವರನ್ನು ಕಾಲಿನಿಂದ ತುಳಿದು ಕೊಂದಿದೆ.

ಇದನ್ನೂ ಓದಿ: ಆಂಧ್ರಪ್ರದೇಶ: ಬಸ್‌ಗೆ ಟ್ರಕ್ ಡಿಕ್ಕಿ, ಏಳು ಸಾವು, 15 ಮಂದಿಗೆ ಗಾಯ

ವಯನಾಡಿನಲ್ಲಿ ಸೆಕ್ಷನ್ 144 ಜಾರಿ

ಘಟನೆ ಬಗ್ಗೆ ಮಾತನಾಡಿದ ವಯನಾಡ್ ಜಿಲ್ಲಾಧಿಕಾರಿ ರೇಣು ರಾಜ್ ಅವರು ಪುರಸಭೆಯ ನಾಲ್ಕು ವಿಭಾಗಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ, ಏಕೆಂದರೆ ಆನೆಯು ಜನವಸತಿಗೆ ಹತ್ತಿರದಲ್ಲಿದೆ. ಕುರುವ, ಕುರುಕ್ಕನಮೂಲ, ಪಯ್ಯಂಬಳ್ಳಿ ಮತ್ತು ಕಾಡಂಕೊಲ್ಲಿ ವಿಭಾಗಗಳಲ್ಲಿ ಸೆಕ್ಷನ್ 144 ಅನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶ: ಬಸ್‌ಗೆ ಟ್ರಕ್ ಡಿಕ್ಕಿ, ಏಳು ಸಾವು, 15 ಮಂದಿಗೆ ಗಾಯ

Published On - 11:37 am, Sat, 10 February 24