ಆಂಧ್ರಪ್ರದೇಶ: ಬಸ್‌ಗೆ ಟ್ರಕ್ ಡಿಕ್ಕಿ, ಏಳು ಸಾವು, 15 ಮಂದಿಗೆ ಗಾಯ
ಇಂದು ಬೆಳಿಗ್ಗೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 4 ಜನ ಸಾವನ್ನಪ್ಪಿದ್ದಾರೆ, 15 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಮರಾವತಿ, ಫೆ.10: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದು ಏಳು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಇಂದು (ಫೆ.10) ಮುಸುನೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ.
#WATCH | Andhra Pradesh | Four dead while 15 people injured after a lorry collided with a bus on Musunuru Toll Plaza, in Nellore District: Kavali DSP Venkataramana pic.twitter.com/MP8ercc92h
— ANI (@ANI) February 10, 2024
ಹಸುಗಳನ್ನು ತುಂಬಿದ್ದ ಲಾರಿ ಪಲ್ಟಿ, ಚಾಲಕ, ಕ್ಲೀನರ್, 40 ಜಾನುವಾರುಗಳು ಸಾವು
ಆಂಧ್ರಪ್ರದೇಶದ ಅನಂತಪರಂ ಜಿಲ್ಲೆಯಲ್ಲಿ ಫೆ.6ರಂದು ಹಸುಗಳನ್ನು ತುಂಬಿದ್ದ ಲಾರಿಯೊಂದು ಪಲ್ಟಿಹೊಡೆದಿದ್ದು, ಚಾಲಕ, ಕ್ಲೀನರ್ ಹಾಗೂ 40 ಹಸುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 44ರ ಕಾಸೆಪಲ್ಲಿ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ, ಚಾಲಕಹಾಗೂ ಕ್ಲೀನರ್ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ: ಬೋರ್ವೆಲ್ಗೆ ಬಿದ್ದ 2 ವರ್ಷದ ಮಗುವಿನ ರಕ್ಷಣೆ
ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್
ಬೆಂಗಳೂರಿನಲ್ಲಿ ಇಂದು (ಫೆ.10) ಹಿಟ್ ಆ್ಯಂಡ್ ರನ್ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ . ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ ಬಳಿ 62 ವರ್ಷದ ಆಶಾರಾಣಿ ಎಂಬುವವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾರೆ. ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 am, Sat, 10 February 24