ದೆಹಲಿ: ಕಳೆದ ವಾರ ಭಾರತವು ವರದಿ ಮಾಡಿದ ಒಟ್ಟು ಪ್ರಕರಣಗಳಲ್ಲಿ ಕೇರಳವು 68.59 ಕೋವಿಡ್ -19 ಪ್ರಕರಣಗಳನ್ನು ಹೊಂದಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ಹೇಳಿದರು.ಕಳೆದ 24 ಗಂಟೆಗಳಲ್ಲಿ 43,263 ಹೊಸ ಕೊವಿಡ್ ಪ್ರಕರಣಗಳ ಪೈಕಿ ಕೇರಳದಲ್ಲಿ 32,000 ಪ್ರಕರಣಗಳು ದಾಖಲಾಗಿವೆ. ದೇಶವು ಎರಡನೇ ಅಲೆಯ ತಲ್ಲಣದಲ್ಲಿದೆ, ಅದು ಇನ್ನೂ ಮುಗಿದಿಲ್ಲ ಎಂದು ಭೂಷಣ್ ಎಚ್ಚರಿಕೆ ನೀಡಿದರು. “ಕಳೆದ 24 ಗಂಟೆಗಳಲ್ಲಿ 43,263 ವರದಿಯಾಗಿದೆ. ಕೇರಳದಿಂದ 32,000 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವಾರದಲ್ಲಿ ಒಟ್ಟು ಶೇ 68 ಪ್ರಕರಣಗಳು ಕೇರಳದಿಂದ ವರದಿಯಾಗಿದೆ. ಎರಡನೇ ಉಲ್ಬಣವನ್ನು ನಾವು ಈಗಲೂ ನೋಡುತ್ತಿದ್ದೇವೆ, ಅದು ಮುಗಿದಿಲ್ಲ ಎಂದು ಭೂಷಣ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಸಾವುನೋವುಗಳ ವಿಷಯದಲ್ಲಿ ಕೇರಳವು ಗುರುವಾರ 181 ಸಾವುಗಳನ್ನು ದಾಖಲಿಸಿದ್ದು, ಭಾರತದ ಒಂದೇ ದಿನದ ಸಾವಿನ ಸಂಖ್ಯೆ 338 ಆಗಿದೆ. ಆದರೆ ಇಲ್ಲಿಯವರೆಗೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ಸಾವುಗಳು ದಾಖಲಾಗಿವೆ.
ಕೇರಳದಲ್ಲಿ ದೈನಂದಿನ ಕೊವಿಡ್-ಪರೀಕ್ಷೆಗಳ ಸಂಖ್ಯೆಯಲ್ಲಿನ ಹೆಚ್ಚಳವು ಪ್ರಕರಣಗಳ ಹಠಾತ್ ಹೆಚ್ಚಳಕ್ಕೆ ಕಾರಣವಾಗಿದೆ. ಹಿಂದಿನ 24 ಗಂಟೆಗಳಲ್ಲಿ ಒಟ್ಟು 1,71, 295 ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ 30,196 ಪಾಸಿಟಿವ್ ಆಗಿದ್ದು, ಪರೀಕ್ಷಾ ಧನಾತ್ಮಕ ದರ (TPR) ಶೇ 17.63ಕ್ಕೆ ತಲುಪಿದೆ.
ಪರೀಕ್ಷೆಗಳು ಹೆಚ್ಚಾದ ನಂತರ ಪ್ರಕರಣಗಳು ಹೆಚ್ಚಾಗುವುದು ಸಹಜ. ಒಂದೆರಡು ತಿಂಗಳ ಹಿಂದೆಯೇ ರಾಜ್ಯವು ಪರೀಕ್ಷೆಗಳನ್ನು ಹೆಚ್ಚಿಸಬೇಕಿತ್ತು ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ.ಎಸ್.ಎಸ್.ಲಾಲ್ ಹಿಂದುಸ್ತಾನ್ ಟೈಮ್ಸ್‌ಗೆ ತಿಳಿಸಿದರು.
ಕೇರಳದಲ್ಲಿ ಆರ್ ಟಿಪಿಸಿಆರ್ ಬದಲು ಅರ್ಧದಷ್ಟು ಪರೀಕ್ಷೆಗಳು ಆಂಟಿಜೆನ್ ಪರೀಕ್ಷೆಗಳಾಗಿವೆ ಎಂದು ಕೇರಳದ ಬಿಜೆಪಿ ಘಟಕ ಆರೋಪಿಸಿದೆ.
ದೆಹಲಿಯಂತಹ ನಗರ ಎರಡನೇ ಅಲೆಗೆ ಸಾಕ್ಷಿಯಾಗಿದೆ, ಕಳೆದ ಐದು ತಿಂಗಳಲ್ಲಿ ಸೋಂಕಿತ ರೋಗಿಗಳನ್ನು ಗುರುತಿಸಲು ನಡೆಸಿದ ಒಟ್ಟು ಪರೀಕ್ಷೆಗಳಲ್ಲಿ ಶೇ 70ರಷ್ಟು RT-PCR ಪರೀಕ್ಷೆಗಳು ಎಂದು ದೆಹಲಿ ಸರ್ಕಾರ ಹೇಳಿದೆ.
ಕೇರಳದಲ್ಲಿ ಒಂದೇ ದಿನ 26,200 ಹೊಸ ಕೊವಿಡ್ ಪ್ರಕರಣ ಪತ್ತೆ
ಕೇರಳದಲ್ಲಿ ಇಂದು 26,200 ಹೊಸ ಕೊವಿಡ್ ಪ್ರಕರಣಗಳು, 29,209 ಚೇತರಿಕೆ ಮತ್ತು 114 ಸಾವುಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,56,957 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಒಟ್ಟು ಧನಾತ್ಮಕ ದರವು ಶೇ 16.69ರಷ್ಟಿದೆ. 2,36,345 ರಲ್ಲಿ ಸಕ್ರಿಯ ಪ್ರಕರಣಗಳು ಇದ್ದು ಸಾವಿನ ಸಂಖ್ಯೆ 22,126 ತಲುಪಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
26,200 new #COVID19 cases, 29,209 recoveries and 114 deaths reported in Kerala today. A total of 1,56,957 samples were tested in last 24 hours and Total Positivity Rate stands at 16.69%. Active cases at 2,36,345, death toll 22,126: Kerala Health Minister Veena George pic.twitter.com/CpOMGG05Zg
— ANI (@ANI) September 9, 2021
ನಮ್ಮಲ್ಲಿ ಲಭ್ಯವಿರುವ ದತ್ತಾಂಶಗಳ ಪ್ರಕಾರ ಜೂನ್ 15 ರಿಂದ ಸೆಪ್ಟೆಂಬರ್ವರೆಗೆ ಶೇ 90 ಸಾವುಗಳು ಲಸಿಕೆ ಹಾಕದವರಲ್ಲಿ ಮತ್ತು ಸಹವರ್ತಿಗಳಲ್ಲಿ ಸಂಭವಿಸಿದೆ. ಸೆಪ್ಟೆಂಬರ್ 30 ರ ಮೊದಲು 18 ವರ್ಷಕ್ಕಿಂತ ಮೇಲ್ಪಟ್ಟವರ ಮೊದಲ ಡೋಸ್ ಲಸಿಕೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಅಕ್ಟೋಬರ್ 4 ರೊಳಗೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಠ ಮೊದಲ ಡೋಸ್ ಲಸಿಕೆ ಹಾಕಲಾಗುತ್ತದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ಇದನ್ನೂ ಓದಿ: Covid 19 Karnataka Update: ಕರ್ನಾಟಕದ 1074 ಜನರಲ್ಲಿ ಕೊರೊನಾ ಸೋಂಕು ಪತ್ತೆ, 1136 ಮಂದಿ ಗುಣಮುಖ
ಇದನ್ನೂ ಓದಿ: ಕೊವಿಡ್ ಸಾವು ನಿಯಂತ್ರಿಸುವಲ್ಲಿ ಲಸಿಕೆಯ ಮೊದಲ ಡೋಸ್ ಶೇ 96.6 ಮತ್ತು 2ನೇ ಡೋಸ್ ಶೇ 97.5 ಪರಿಣಾಮಕಾರಿ: ಕೇಂದ್ರ
(Kerala accounts for 68.59 percent of the Covid 19 cases India reported last week says health ministry)