ಕೇರಳ: ಬಿಜೆಪಿಗೆ ಸೇರ್ಪಡೆಗೊಂಡ ಪಾದ್ರಿ, ಚರ್ಚ್​ನ ಕರ್ತವ್ಯದಿಂದ ಅಮಾನತು

ಕೇರಳದ ಇಡುಕ್ಕಿಯ ಸಿರೋ-ಮಲಬಾರ್ ಚರ್ಚ್‌ನ ಕ್ಯಾಥೋಲಿಕ್ ಪಾದ್ರಿ ಕುರಿಯಾಕೋಸ್ ಮಟ್ಟಮ್ ಅವರು ಸೋಮವಾರ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ನಂತರ ಚರ್ಚ್​ನ ಎಲ್ಲಾ ಕರ್ತವ್ಯದಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಇಡುಕ್ಕಿಯಲ್ಲಿ ಸೋಮವಾರ ಬಿಜೆಪಿಯ ಫಾದರ್ ಕುರಿಯಕೋಸ್ ಮಟ್ಟಂ ಜಿಲ್ಲಾಧ್ಯಕ್ಷ ಕೆ.ಎಸ್.ಅಜಿ ಅವರ ಸಮ್ಮುಖದಲ್ಲಿ ಪಕ್ಷದ ಸದಸ್ಯತ್ವ ಪಡೆದ ಕೆಲವೇ ಗಂಟೆಗಳಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲು ಚರ್ಚ್‌ ಮುಂದಾಗಿದೆ.

ಕೇರಳ: ಬಿಜೆಪಿಗೆ ಸೇರ್ಪಡೆಗೊಂಡ ಪಾದ್ರಿ, ಚರ್ಚ್​ನ ಕರ್ತವ್ಯದಿಂದ ಅಮಾನತು
ಕೇರಳ ಪಾದ್ರಿ
Image Credit source: IndiaToday

Updated on: Oct 03, 2023 | 9:48 AM

ಕೇರಳದ ಇಡುಕ್ಕಿಯ ಸಿರೋ-ಮಲಬಾರ್ ಚರ್ಚ್‌ನ ಕ್ಯಾಥೋಲಿಕ್ ಪಾದ್ರಿ ಕುರಿಯಾಕೋಸ್ ಮಟ್ಟಮ್ ಅವರು ಸೋಮವಾರ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ನಂತರ ಚರ್ಚ್​ನ ಎಲ್ಲಾ ಕರ್ತವ್ಯದಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಇಡುಕ್ಕಿಯಲ್ಲಿ ಸೋಮವಾರ ಬಿಜೆಪಿಯ ಫಾದರ್ ಕುರಿಯಕೋಸ್ ಮಟ್ಟಂ ಜಿಲ್ಲಾಧ್ಯಕ್ಷ ಕೆ.ಎಸ್.ಅಜಿ ಅವರ ಸಮ್ಮುಖದಲ್ಲಿ ಪಕ್ಷದ ಸದಸ್ಯತ್ವ ಪಡೆದ ಕೆಲವೇ ಗಂಟೆಗಳಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲು ಚರ್ಚ್‌ ಮುಂದಾಗಿದೆ.

ಚರ್ಚ್‌ನಲ್ಲಿ ಕರ್ತವ್ಯಗಳಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಮಂಕುವಾ ಚರ್ಚ್‌ನ ಫಾದರ್ ಕುರಿಯಾಕೋಸ್ ಮಟ್ಟಂ ಅವರನ್ನು ಪಾದ್ರಿ ಹುದ್ದೆಯಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್​ ಪ್ರಕಟಣೆ ತಿಳಿಸಿದೆ.

ಚರ್ಚ್ ಆಡಳಿತದ ಅಡಿಯಲ್ಲಿ, ಚರ್ಚ್‌ನ ಪಾದ್ರಿಯೊಬ್ಬರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ ಅಥವಾ ಸಕ್ರಿಯವಾಗಿ ಭಾಗವಹಿಸುವಂತಿಲ್ಲ ಎಂಬ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಮತ್ತಷ್ಟು ಓದಿ: ಬಿಜೆಪಿಯ ಗೇಮ್ ಚೇಂಜರ್ ಅಣ್ಣಾಮಲೈ; ಬದುಕು, ರಾಜಕೀಯ ಬಗ್ಗೆ ಮುಕ್ತ ಮಾತು

ಮಣಿಪುರ ಹಿಂಸಾಚಾರದ ಬಗ್ಗೆ ಕ್ಯಾಥೋಲಿಕ್ ಚರ್ಚ್ ಪಕ್ಷದ ಮೇಲೆ ದಾಳಿ ನಡೆಸುತ್ತಿದ್ದ ಸಮಯದಲ್ಲಿ ಪಾದ್ರಿ ಬಿಜೆಪಿಗೆ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಸೇರದಿರಲು ನನಗೆ ಯಾವುದೇ ಕಾರಣವಿಲ್ಲ. ನಾನು ಅನೇಕ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ನೇಹ ಹೊಂದಿದ್ದೇನೆ. ಇಂದು ನಾನು ಸದಸ್ಯತ್ವ ಪಡೆದಿದ್ದೇನೆ ಎಂದು ಪಾದ್ರಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ