ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ವಿ. ಪ್ರಕಾಶ್ ಗುರುವಾರ ಬೆಳಗ್ಗೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮಲಪ್ಪುರಂ ಜಿಲ್ಲೆಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ಪ್ರಕಾಶ್ ಅವರಿಗೆ ಎದೆ ನೋವು ನೋವು ಕಾಣಿಸಿಕೊಂಡ ಕಾರಣ ಮಂಜೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮುಂಜಾನೆ 3 ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ. ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಸುಮಾರು ಒಂದು ಗಂಟೆಗಳ ಕಾಲ ಕಾಂಗ್ರೆಸ್ ಕಚೇರಿಯಲ್ಲಿರಿಸಿ, ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ. ಇದಾದ ನಂತರ ಕೊವಿಡ್ ನಿಯಮಾವಳಿಗಳನ್ನು ಪಾಲಿಸಿ ಎಡಕ್ಕರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ನಿಲಂಬೂರ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರಕಾಶ್ ಅವರು ಇತ್ತೀಚೆಗೆ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಪ್ರಸ್ತುತ ಈ ಕ್ಷೇತ್ರದಲ್ಲಿಎಲ್ಡಿಎಫ್ ಬೆಂಬಲಿತ ಪಕ್ಷೇತರ ಪಿ.ವಿ ಅನ್ವರ್ ಶಾಸಕರಾಗಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ನಿಲಂಬೂರ್ ನಲ್ಲಿ 2016 ರಲ್ಲಿ ಎಲ್ ಡಿಎಫ್ ಗೆದ್ದಿತ್ತು. ಚುನಾವಣಾ ಫಲಿತಾಂಶ ಪ್ರಕಟವಾಗಲು ಇನ್ನೇನು ಮೂರು ದಿನಗಳು ಬಾಕಿ ಇರುವಾಗ ಪ್ರಕಾಶ್ ವಿಯೋಗ ಕಾಂಗ್ರೆಸ್ ಪಾಲಿಗೆ ಅತೀವ ದುಃಖವನ್ನುಂಟು ಮಾಡಿದೆ.
Malappuram, Kerala: Malappuram District Congress Committee president and Nilambur constituency’s UDF candidate, VV Prakash passed away earlier this morning due to a heart attack. pic.twitter.com/BeeCtcZxgY
— ANI (@ANI) April 29, 2021
ಅನುಭವಿ ರಾಜಕಾರಣಿ ಆಗಿದ್ದ ಪ್ರಕಾಶ್ ತಿರುವನಂತಪುರಂನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಯಾಗಿದ್ದರು. ಕೆಎಸ್ಯು ಮತ್ತು ಯೂತ್ ಕಾಂಗ್ರೆಸ್ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ಇವರು 2011ರಲ್ಲಿ ಚುನಾವಣೆ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಎಲ್ಡಿಎಫ್ ಅಭ್ಯರ್ಥಿ ಕೆ.ಟಿ.ಜಲೀಲ್, ಪ್ರಕಾಶ್ ವಿರುದ್ಧ ಗೆಲುವು ಸಾಧಿಸಿದ್ದರು.
ಕಂಬನಿ ಮಿಡಿದ ನಾಯಕರು
ವಿ.ವಿ ಪ್ರಕಾಶ್ ಅವರ ಆಕಸ್ಮಿಕ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಅವರಿಗಾಗಿ ನಾನು ಚುನಾವಣಾ ಪ್ರಚಾರ ಮಾಡಿದ್ದು, ಅವರ ಗೆಲುವಿಗಾಗಿ ಕಾಯುತ್ತಿದ್ದೆವು. ಉತ್ತಮ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದರು ಅವರು . ಡಿಸಿಸಿ ಅಧ್ಯಕ್ಷರೂ ಆಗಿದ್ದರು. ಓಂ ಶಾಂತಿ ಎಂದು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ .
Shocked to learn of the sudden & untimely demise of @INCKerala Assembly candidate in Nilambur, VV Prakash, whom I campaigned for personally & whose victory we had all been anticipating on May 2. A dedicated social & political worker, he was president of the DCC. OmShanti pic.twitter.com/jxgZC0wEOv
— Shashi Tharoor (@ShashiTharoor) April 29, 2021
ಮಲಪ್ಪುಂ ಡಿಸಿಸಿ ಅಧ್ಯಕ್ಷ , ನಿಲಂಬೂರ್ ಯುಡಿಎಫ್ ಅಭ್ಯರ್ಥಿ ವಿ.ವಿ. ಪ್ರಕಾಶ್ ಅವರ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ . ಶಾಲಾ ದಿನಗಳಿಂದಲೇ ನಾವು ಜತೆಯಾಗಿದ್ದೆವು. ಶ್ರದ್ಧಾಂಜಲಿ ಎಂದು ಕೇರಳದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಟ್ವೀಟ್ ಮಾಡಿದ್ದಾರೆ.
Iam shattered to hear about the unexpected demise of Malappuram DCC president and Nilambur UDF candidate VV Prakash. We had a comradeship that started during our student days.
My heartfelt condolences to the bereaved family and supporters. pic.twitter.com/8lwLXlQYhF— Ramesh Chennithala (@chennithala) April 29, 2021
ಮಲಪ್ಪುಂ ಡಿಸಿಸಿ ಅಧ್ಯಕ್ಷ , ನಿಲಂಬೂರ್ ಯುಡಿಎಫ್ ಅಭ್ಯರ್ಥಿ ವಿ.ವಿ. ಪ್ರಕಾಶ್ ಅವರ ಸಾವು ದುರಂತ. ಅವರ ಪ್ರಾಮಾಣಿಕ ಮತ್ತು ಪರಿಶ್ರಮದ ಕಾರ್ಯಕರ್ತರಾಗಿದ್ದರು. ಇತರರಿಗೆ ಸಹಾಯ ಮಾಡಲು ಅವರು ಸದಾ ಸಿದ್ದರಿರುತ್ತಿದ್ದರು. ನನ್ನ ಸಂತಾಪಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
The untimely demise of Malappuram DCC President & UDF Nilambur candidate V V Prakash Ji is extremely tragic.
He will be remembered as an honest & hardworking member of the Congress, always ready to offer help to the people.
My heartfelt condolences to his family. pic.twitter.com/LugPBIROKP
— Rahul Gandhi (@RahulGandhi) April 29, 2021
ಇದನ್ನೂ ಓದಿ: Kerala Assembly Elections 2021: ಬಿಜೆಪಿಯವರು ಸೃಷ್ಟಿಸುವ ಲವ್ ಜಿಹಾದ್ ಭೀತಿ, ಕೋಮುವಾದ ಕೇರಳದಲ್ಲಿ ನಡೆಯಲ್ಲ: ಶಶಿ ತರೂರ್
ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್
Published On - 3:52 pm, Thu, 29 April 21