ತನ್ನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟ ಮಹಿಳೆಗೆ 40 ವರ್ಷಗಳ ಕಠಿಣ ಜೈಲು ಶಿಕ್ಷೆ

ತನ್ನ ಇಬ್ಬರು ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ಕೇರಳದ ವಿಶೇಷ ತ್ವರಿತ ನ್ಯಾಯಾಲಯ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಮಾರ್ಚ್​ 2018ರಿಂದ ಸೆಪ್ಟೆಂಬರ್ 2019ರ ನಡುವೆ ಈ ಘಟನೆ ನಡೆದಿದೆ. ಮಹಿಳೆ ಮಾನಸಿಕ ಅಸ್ವಸ್ಥ ಪತಿಯನ್ನು ತೊರೆದು ಶಿಶಿಪಾಲನ್ ಎಂಬಾತನೊಂದಿಗೆ ವಾಸಿಸುತ್ತಿದ್ದಳು, ಈ ಶಿಶುಪಾಲನ್ ಅಪ್ತಾಪ್ತ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಖಾಸಗಿ ಅಂಗಗಳಲ್ಲಿ ಗಾಯಗಳಾಗಿವೆ.

ತನ್ನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟ ಮಹಿಳೆಗೆ 40 ವರ್ಷಗಳ ಕಠಿಣ ಜೈಲು ಶಿಕ್ಷೆ
Follow us
ನಯನಾ ರಾಜೀವ್
|

Updated on: Nov 28, 2023 | 8:23 AM

ತನ್ನ ಇಬ್ಬರು ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ಕೇರಳದ ವಿಶೇಷ ತ್ವರಿತ ನ್ಯಾಯಾಲಯ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಮಾರ್ಚ್​ 2018ರಿಂದ ಸೆಪ್ಟೆಂಬರ್ 2019ರ ನಡುವೆ ಈ ಘಟನೆ ನಡೆದಿದೆ. ಮಹಿಳೆ ಮಾನಸಿಕ ಅಸ್ವಸ್ಥ ಪತಿಯನ್ನು ತೊರೆದು ಶಿಶಿಪಾಲನ್ ಎಂಬಾತನೊಂದಿಗೆ ವಾಸಿಸುತ್ತಿದ್ದಳು, ಈ ಶಿಶುಪಾಲನ್ ಅಪ್ತಾಪ್ತ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಖಾಸಗಿ ಅಂಗಗಳಲ್ಲಿ ಗಾಯಗಳಾಗಿವೆ.

ತಾಯಿ ಮಗುವನ್ನು ಪದೇ ಪದೇ ತನ್ನ ಮನೆಗೆ ಕರೆದೊಯ್ದು ಆಕೆಯ ಸಮ್ಮುಖದಲ್ಲೇ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತ ಬಾಲಕಿಯ ಸಹೋದರಿ ಮನೆಗೆ ಬಂದಾಗ ನಡೆದಿರುವ ವಿಚಾರವನ್ನು ತಿಳಿಸಿದ್ದಾಳೆ. ಬೆದರಿಕೆ ಹಾಕಿದ್ದರಿಂದ ಮಕ್ಕಳು ಮಾಹಿತಿ ಬಹಿರಂಗಪಡಿಸಿರಲಿಲ್ಲ.

ಹೇಗೋ ಅಕ್ಕ ತಂಗಿ ತಪ್ಪಿಸಿಕೊಂಡು ಅಜ್ಜಿಯ ಮನೆಗೆ ಹೋಗಿದ್ದರು, ಅಜ್ಜಿ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹಾಗೂ ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ನಡೆದ ಕೌನ್ಸೆಲಿಂಗ್​ನಲ್ಲಿ ಮಕ್ಕಳು ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್​ಎಸ್ ವಿಜಯ್ ಮೋಹನ್ ಎಎನ್​ಐಗೆ ಮಾಹಿತಿ ನೀಡಿದ್ದು, ಅಪರಾಧಕ್ಕಾಗಿ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ಶಿವಮೊಗ್ಗ: ಆರು ವರ್ಷ ಪ್ರೀತಿಸಿ ಕೈಕೊಟ್ಟ ಯುವಕ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಆರೋಪಿ ಮಹಿಳೆಯ ಪತಿ ಮಾನಸಿಕ ಅಸ್ವಸ್ಥನಾಗಿರುವ ಕಾರಣ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರೇಮಿಯೊಂದಿಗೆ ವಾಸವಾಗಿದ್ದಳು. ಏಳು ವರ್ಷದವಳಿದ್ದಾಗಲೇ ಶಿಶುಪಾಲನ್ ಆಕೆಯ ಮೇಲೆ ದೌರ್ಜನ್ಯವೆಸಗಿದ್ದ. ಆದರೆ ತಾಯಿ ಏನೂ ಮಾಡಲಿಲ್ಲ. ಬದಲಾಗಿ ಪ್ರೇಮಿಗೆ ಸಹಾಯ ಮಾಡಿದ್ದಳು. ಆಕೆ ತಾಯಿ ಎನ್ನುವ ಹೆಸರಿಗೆ ಕಳಂಕ, ಯಾವುದೇ ಕ್ಷಮೆಗೆ ಆಕೆ ಅರ್ಹಳಲ್ಲ ಎಂದು ನ್ಯಾ. ಆರ್​ ರೇಖಾ ಹೇಳಿದ್ದಾರೆ.

ವಿಚಾರಣೆ ವೇಳೆ ಮೊದಲ ಆರೋಪಿ ಶಿಶುಪಾಲನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗಾಗಿ ತಾಯಿಯ ವಿರುದ್ಧವೇ ವಿಚಾರಣೆ ನಡೆದಿದೆ. ಸದ್ಯ ಮಕ್ಕಳು ಮನೆಯಲ್ಲಿ ವಾಸವಾಗಿದ್ದಾರೆ. ಪ್ರಕರಣದಲ್ಲಿ ಇಪ್ಪತ್ತೆರಡು ಸಾಕ್ಷಿಗಳನ್ನು ಪರೀಕ್ಷಿಸಲಾಯಿತು ಮತ್ತು ಮೂವತ್ಮೂರು ದಾಖಲೆಗಳನ್ನು ಸಲ್ಲಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ