ಕೇರಳದ ಆಲುವಾ ರೈಲು ನಿಲ್ದಾಣದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು; 11 ರೈಲುಗಳು ರದ್ದು

| Updated By: ರಶ್ಮಿ ಕಲ್ಲಕಟ್ಟ

Updated on: Jan 28, 2022 | 12:28 PM

ಗುರುವಾರ ರಾತ್ರಿ 10.30ರ ಸುಮಾರಿಗೆ ಆಲುವಾ ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸುವಾಗ ರೈಲಿನ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ವ್ಯಾಗನ್‌ಗಳು ಹಳಿತಪ್ಪಿದವು.

ಕೇರಳದ ಆಲುವಾ ರೈಲು ನಿಲ್ದಾಣದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು; 11 ರೈಲುಗಳು ರದ್ದು
ಹಳಿ ತಪ್ಪಿದ ಗೂಡ್ಸ್ ರೈಲು
Follow us on

ಆಲುವಾ: ಗುರುವಾರ ರಾತ್ರಿ ಕೇರಳದ (Kerala) ಕೊಲ್ಲಂ ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ನಾಲ್ಕು ವ್ಯಾಗನ್‌ಗಳು ಆಲುವಾ ರೈಲು ನಿಲ್ದಾಣದಲ್ಲಿ(Aluva railway station) ಹಳಿತಪ್ಪಿದ್ದು, ಈ ಮಾರ್ಗದಲ್ಲಿ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ ಆದರೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸರಕು ಸಾಗಣೆ ರೈಲು ಆಂಧ್ರಪ್ರದೇಶದಿಂದ (AndhraPradesh) ಸಿಮೆಂಟ್ ಸಾಗಿಸುತ್ತಿತ್ತು.  ರಾತ್ರಿ 10.30ರ ಸುಮಾರಿಗೆ ಆಲುವಾ ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸುವಾಗ ರೈಲಿನ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ವ್ಯಾಗನ್‌ಗಳು ಹಳಿತಪ್ಪಿದವು.  ಘಟನೆಯ ನಂತರ, ಕೆಲವು ರೈಲುಗಳು ವಿವಿಧ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡು ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಯಿತು. ಘಟನೆಯಿಂದಾಗಿ ಇತರ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು 2.15ಕ್ಕೆ ಅದೇ ಹಳಿಗಳಲ್ಲಿ ಸಂಚಾರವನ್ನು ಪುನಃಸ್ಥಾಪಿಸಲಾಯಿತು. “ಶೀಘ್ರದಲ್ಲೇ ಸೇವೆಗಳನ್ನು ಮರುಸ್ಥಾಪಿಸಲು ನಾವು ಭಾವಿಸುತ್ತೇವೆ. ಈಗಾಗಲೇ ಕೆಲವು ಸೇವೆಗಳು ಶುರು ಆಗಿವೆ. ಈಗಾಗಲೇ ಒಂದು ಮಾರ್ಗವು ಕಾರ್ಯನಿರ್ವಹಿಸುತ್ತಿದೆ. ಎರಡನೇ ಮಾರ್ಗವು 9 ಗಂಟೆಗೆ ಸೇವೆಗಳನ್ನು ಪುನಃಸ್ಥಾಪಿಸಲು ನಾವು ಭಾವಿಸುತ್ತೇವೆ” ಎಂದು ತಿರುವನಂತಪುರಂ ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್ ಮುಕುಂದ್ ಹೇಳಿದರು.

“ಅಡೆತಡೆಗಳು ಕೆಲವು ರದ್ದತಿಗಳಿಗೆ ಕಾರಣವಾಗಿವೆ, ಕೆಲವು ರೈಲುಗಳು ಅಲ್ಪಾವಧಿಗೆ ನಿಲ್ಲಸಲಾಗಿದೆ ಕೆಲವು ರೈಲುಗಳನ್ನು ಮರುಹೊಂದಿಸಲಾಗಿದೆ. ನಾವು ಸೇವೆಗಳನ್ನು ತ್ವರಿತವಾಗಿ ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಕೆಲವು ತಡವಾಗಿ ಓಡುತ್ತವೆ. ಸಂಜೆಯ ವೇಳೆಗೆ ಅದನ್ನು ಸರಿಹೊಂದಿಸಲಾಗುತ್ತದೆ. ಇದೀಗ ನಾವು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದೇವೆ. ನಾವು ಅದನ್ನು ಇನ್ನೆರಡು-ಮೂರು ಗಂಟೆಗಳಲ್ಲಿ ಸರಿ ಮಾಡುತ್ತೇವೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.


ಗುರುವಾಯೂರ್ – ತಿರುವನಂತಪುರಂ ಎಕ್ಸ್‌ಪ್ರೆಸ್, ಎರ್ನಾಕುಲಂ – ಕಣ್ಣೂರು ಎಕ್ಸ್‌ಪ್ರೆಸ್, ಕೋಟ್ಟಯಂ – ನಿಲಂಬೂರ್ ಎಕ್ಸ್‌ಪ್ರೆಸ್, ನಿಲಂಬೂರ್ – ಕೋಟ್ಟಯಂ ಎಕ್ಸ್‌ಪ್ರೆಸ್, ಗುರುವಾಯೂರ್ – ಎರ್ನಾಕುಲಂ ಎಕ್ಸ್‌ಪ್ರೆಸ್ ವಿಶೇಷ, ತಿರುವನಂತಪುರಂ – ತಿರುಚ್ಚಿರಪ್ಪಾಫಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಎರ್ನಾಕುಲಂ – ಆಲಪ್ಪುಳ ವಿಶೇಷ ಎಕ್ಸ್ ಪ್ರೆಸ್, ಪಾಲಕ್ಕಾಡ್ – ಎರ್ನಾಕುಲಂ MEMU ವಿಶೇಷ ಎಕ್ಸ್‌ಪ್ರೆಸ್ ವಿಶೇಷ, ಎರ್ನಾಕುಲಂ – ಪಾಲಕ್ಕಾಡ್ MEMU ಎಕ್ಸ್‌ಪ್ರೆಸ್ ವಿಶೇಷ ಮತ್ತು ಶೋರನೂರ್ – ಎರ್ನಾಕುಲಂ MEMU ಎಕ್ಸ್‌ಪ್ರೆಸ್ ವಿಶೇಷ ಸೇರಿದಂತೆ ಒಟ್ಟು 11 ರೈಲುಗಳನ್ನು ರದ್ದುಗೊಳಿಸಲಾಗಿದೆ.

ರೈಲು ಹಳಿ ಬದಲಿಸುವ ವೇಳೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ, ಘಟನೆಗೆ ಒಂದೇ ಒಂದು ಕಾರಣವನ್ನು ಸೂಚಿಸಲು ಸಾಧ್ಯವಿಲ್ಲ. ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿBihar bandh ಬಿಹಾರ ಬಂದ್ ಕೈ ಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಶಿಕ್ಷಕ; ಯಾರು ಈ ಖಾನ್​​​​​ ಸರ್?