ಕೈರಳಿ ಮತ್ತು ಮೀಡಿಯಾ ಒನ್‌ನ ಪತ್ರಕರ್ತರು ಪತ್ರಿಕಾಗೋಷ್ಠಿಯಿಂದ ಹೊರನಡೆಯಿರಿ ಎಂದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

| Updated By: ರಶ್ಮಿ ಕಲ್ಲಕಟ್ಟ

Updated on: Nov 07, 2022 | 10:15 PM

ಕೈರಳಿ ಮತ್ತು ಮೀಡಿಯಾ ಒನ್‌ನ ಪ್ರತಿನಿಧಿಗಳು ಇದ್ದರೆ ನಾನು ಹೊರನಡೆಯುತ್ತೇನೆ. ಕೈರಳಿ ಮತ್ತು ಮೀಡಿಯಾ ಒನ್ ಜೊತೆ ಮಾತನಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೆ ಎಂದು ಗವರ್ನರ್ ಹೇಳಿದ್ದಾರೆ.

ಕೈರಳಿ ಮತ್ತು ಮೀಡಿಯಾ ಒನ್‌ನ ಪತ್ರಕರ್ತರು ಪತ್ರಿಕಾಗೋಷ್ಠಿಯಿಂದ ಹೊರನಡೆಯಿರಿ ಎಂದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
ಆರಿಫ್ ಮೊಹಮ್ಮದ್ ಖಾನ್
Follow us on

ಕೊಚ್ಚಿ: ಕೇರಳ(Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammad Khan) ಅವರು ಕೊಚ್ಚಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದು ಅದರಲ್ಲಿ ಭಾಗಿಯಾಗದಂತೆ ಎರಡು ಮಲಯಾಳಂ ಚಾನೆಲ್‌ಗಳನ್ನು ನಿರ್ಬಂಧಿಸಿದ್ದಾರೆ. ಕೈರಳಿ ನ್ಯೂಸ್ (Kairali News) ಮತ್ತು ಮೀಡಿಯಾ ಒನ್ ಚಾನೆಲ್‌ಗಳ (Media One channels) ವರದಿಗಾರರನ್ನು ಸ್ಥಳದಿಂದ ಹೊರಹೋಗುವಂತೆ ರಾಜ್ಯಪಾಲರು ಹೇಳಿದ್ದಾರೆ. ಇವರು ರಾಜಕೀಯ ವ್ಯಕ್ತಿಗಳ ಸೋಗಿನಲ್ಲಿ ಬರುವವರು. ಈ ಎರಡು ಚಾನೆಲ್‌ಗಳನ್ನು ನಾನು ಭೇಟಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಮಾಧ್ಯಮದವರನ್ನು ಮುಹೊರಗೆ ಹೋಗುವಂತೆ ಕೇಳಿಕೊಂಡ ಅವರು, “ನಾನು ಮಾಧ್ಯಮವನ್ನು ಬಹಳಖ್ಯವೆಂದು ಪರಿಗಣಿಸಿದ್ದೇನೆ, ನಾನು ಯಾವಾಗಲೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತೇನೆ. ಆದರೆ ಈಗ ಮಾಧ್ಯಮದ ಮುಖವಾಡ ಹೊಂದಿರುವವರಿಗೆ ನನ್ನ ಮನವೊಲಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಮಾಧ್ಯಮವಲ್ಲ, ಅವರು ಮಾಧ್ಯಮದವರೆಂದು ವೇಷ ಹಾಕುತ್ತಿದ್ದಾರೆ. ಆದರೆ ಮೂಲತಃ ರಾಜಕೀಯದವರು ಎಂದಿದ್ದಾರೆ.

ಇಲ್ಲಿ ನಿಜವಾಗಿಯೂ ಪಕ್ಷದ ಸದಸ್ಯರಿದ್ದಾರೆ. ಹಾಗಾಗಿ ಈ ವಾಹಿನಿಗಳ ಯಾರಾದರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರೆ ದಯವಿಟ್ಟು ಹೊರ ನಡಿಯಿರಿ. ಕೈರಳಿ ಮತ್ತು ಮೀಡಿಯಾ ಒನ್‌ನ ಪ್ರತಿನಿಧಿಗಳು ಇದ್ದರೆ ನಾನು ಹೊರನಡೆಯುತ್ತೇನೆ. ಕೈರಳಿ ಮತ್ತು ಮೀಡಿಯಾ ಒನ್ ಜೊತೆ ಮಾತನಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೆ ಎಂದು ಗವರ್ನರ್ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಕೊಚ್ಚಿಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆದಿದೆ. ಆಡಳಿತಾರೂಢ ಸಿಪಿಐ(ಎಂ) ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಅವರ ನಡವಳಿಕೆಯನ್ನು “ಫ್ಯಾಸಿಸ್ಟ್” ಎಂದು ಬಣ್ಣಿಸಿದರೆ, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಅವರ “ತಪ್ಪನ್ನು” ಸರಿಪಡಿಸುವಂತೆ ಒತ್ತಾಯಿಸಿದ್ದು ಈ “ಪ್ರಜಾಪ್ರಭುತ್ವ ವಿರೋಧಿ” ಕ್ರಮಕ್ಕೆ ವಿಷಾದ ವ್ಯಕ್ತಪಡಿಸಿತು.

ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಅವರು, ನಿರ್ದಿಷ್ಟ ಪತ್ರಿಕಾ ವಿಭಾಗವನ್ನು ನಿರ್ಬಂಧಿಸುವ ಮೂಲಕ, ಗವರ್ನರ್ ಖಾನ್ ಜನರಿಗೆ ಮಾಹಿತಿಯ ಪ್ರಸಾರವನ್ನು ತಡೆಯುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ, ಪ್ರಜಾಪ್ರಭುತ್ವ ವಿರೋಧಿ ಮತ್ತು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.

ಮಾಧ್ಯಮವನ್ನು ಹೊರಗಿಡುವುದು ಫ್ಯಾಸಿಸ್ಟ್ ಆಡಳಿತದ ಶೈಲಿಯಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಮಾತ್ರವಲ್ಲ ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್ 24 ರಂದು ರಾಜಭವನವು ಈ ಎರಡೂ ಚಾನೆಲ್‌ಗಳು ಸೇರಿದಂತೆ ನಾಲ್ಕು ಮಲಯಾಳಂ ಚಾನೆಲ್‌ಗಳನ್ನು ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿತು.
“ಈ ಹಿಂದೆಯೂ ರಾಜ್ಯಪಾಲರು ಇದೇ ನಿಲುವು ತಳೆದಿದ್ದರು. ಅವರನ್ನು ಟೀಕಿಸಿದವರನ್ನು ಕಾರ್ಯಕರ್ತರು ಎಂದು ಕರೆಯಲಾಗುತ್ತಿತ್ತು. ಇದು ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಹೇಳಿದ್ದಾರೆ.

ಕೈರಳಿ ನ್ಯೂಸ್ ಆಡಳಿತಾರೂಢ ಸಿಪಿಐ (ಎಂ) ಅಧೀನದ ವಾಹಿನಿಯಾಗಿದೆ. ಅಲ್ಲದೆ, ಮಲಯಾಳಂನ ಸ್ಯಾಟಲೈಟ್ ಚಾನೆಲ್ ಮೀಡಿಯಾ ಒನ್ ಭದ್ರತಾ ಕ್ಲಿಯರೆನ್ಸ್ ಸಮಸ್ಯೆಗಳ ಮೇಲೆ ಕೇಂದ್ರ ಸರ್ಕಾರದಿಂದ ನಿಷೇಧವನ್ನು ಎದುರಿಸುತ್ತಿದೆ.ನಿಷೇಧದ ವಿರುದ್ಧ ಮೀಡಿಯಾ ಒನ್ ಸಲ್ಲಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿರಿಸಿತ್ತು. ಮಾರ್ಚ್‌ನಲ್ಲಿ ಮಧ್ಯಂತರ ಆದೇಶದಲ್ಲಿ, ನ್ಯಾಯಾಲಯವು ತನ್ನ ಪ್ರಸಾರವನ್ನು ಮುಂದುವರಿಸಲು ಚಾನೆಲ್‌ಗೆ ಅನುಮತಿ ನೀಡಿತ್ತು