ಕೇರಳ: ಮದುವೆ ಮನೆಗೆ ಒಂಟೆಯ ಮೇಲೆ ಬಂದ ವರನ ವಿರುದ್ಧ ಪ್ರಕರಣ ದಾಖಲು

|

Updated on: Jan 18, 2024 | 9:03 AM

ಮದುವೆಗೆಂದು ವರನನ್ನು ಒಂಟೆ ಮೇಲೆ ಕರೆತಂದ ಘಟನೆಯಲ್ಲಿ ವರ ಸೇರಿ 26 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ, ವರ ಕುದುರೆ ಅಥವಾ ವಾಹನಬಿಟ್ಟು ಒಂಟೆಯ ಮೇಲೆ ಬಂದಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಕೇರಳ: ಮದುವೆ ಮನೆಗೆ ಒಂಟೆಯ ಮೇಲೆ ಬಂದ ವರನ ವಿರುದ್ಧ ಪ್ರಕರಣ ದಾಖಲು
ಒಂಟೆ
Image Credit source: Zee News
Follow us on

ಮದುವೆಗೆಂದು ವರನನ್ನು ಒಂಟೆ ಮೇಲೆ ಕರೆತಂದ ಘಟನೆಯಲ್ಲಿ ವರ ಸೇರಿ 26 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ, ವರ ಕುದುರೆ ಅಥವಾ ವಾಹನಬಿಟ್ಟು ಒಂಟೆಯ ಮೇಲೆ ಬಂದಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ವಲಪಟ್ಟಣ ಮೂಲದ ವರಣ್ ರಿಜ್ವಾನ್ ಹಾಗೂ ಆತನೊಂದಿಗೆ ಬಂದಿದ್ದ 25 ಮಂದಿ ವಿರುದ್ಧ ಚಾಕರಕಲ್ಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಮದುವೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಟಾಕಿ ಮತ್ತು ಬ್ಯಾಂಡ್‌ನೊಂದಿಗೆ ವರ ಒಂಟೆಯ ಮೇಲೆ ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮದುವೆ ಸಂಭ್ರಮಕ್ಕೆ ವಧುವಿನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದ ವರನ ಸ್ನೇಹಿತರು ಇದಕ್ಕೆ ಕಿವಿಗೊಡಲಿಲ್ಲ.

ಮತ್ತಷ್ಟು ಓದಿ: ಜೆಸಿಬಿಯಲ್ಲಿ ಮೆರವಣಿಗೆ, ಮಂಟಪದಲ್ಲಿ ಕೋಳಿ ಅಂಕ, ಈ ಸ್ನೇಹಿತರು ಮಾಡುವುದು ಒಂದೆರೆಡಲ್ಲ

ಅತಿಯಾದ ಸಂಭ್ರಮಾಚರಣೆಯಿಂದಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನೂ ಬಂದ್ ಮಾಡಲಾಗಿತ್ತು. ರಸ್ತೆ ತಡೆ ನಿರ್ಮಿಸಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಬಲಪ್ರಯೋಗ ಮಾಡಿದರು.

ಒಂಟೆ ಮೆರವಣಿಗೆ, ಪಟಾಕಿ ಸಿಡಿಸುವಿಕೆ ಮತ್ತು ಬ್ಯಾಂಡ್ ಸಂಗೀತದೊಂದಿಗೆ ಜನನಿಬಿಡ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು, ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಹಲವು ವಾಹನಗಳು ಸಿಲುಕಿಕೊಂಡಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ