ಜೆಸಿಬಿಯಲ್ಲಿ ಮೆರವಣಿಗೆ, ಮಂಟಪದಲ್ಲಿ ಕೋಳಿ ಅಂಕ, ಈ ಸ್ನೇಹಿತರು ಮಾಡುವುದು ಒಂದೆರೆಡಲ್ಲ
ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಹೊಸ ಹೊಸ ಕಾನ್ಸೆಪ್ಟ್ಗಳು ಬಂದಿವೆ. ಮದುವೆಯಲ್ಲಿ ವಧು ಮತ್ತು ವರನ ಕಾಲೆಳೆಯುವ ಸಲುವಾಗಿ ಮುಖ್ಯವಾಗಿ ವರನ ಗೆಳೆಯರು ತಮಾಷೆಯ ಇವೆಂಟ್ಗಳನ್ನು ಮದುವೆ ಮಂಟಪದಲ್ಲಿ ಅರೇಂಜ್ ಮಾಡುತ್ತಾರೆ. ಕೆಲವೊಬ್ಬರು ವಧುವರರನ್ನು ಸೈಕಲ್ ಅಥವಾ ಟ್ರ್ಯಾಕ್ಟರ್ ಅಲ್ಲಿ ಕೂರಿಸಿ ಮೆರವಣಿಗೆ ಮಾಡಿದರೆ, ಇಲ್ಲೊಂದು ಗೆಳೆಯರ ಬಳಗ ನವ ವಧುವರರನ್ನು ಜೆ.ಸಿ.ಬಿಯಲ್ಲಿ ಕೂರಿಸಿ ಅದ್ದೂರಿ ಮೆರವಣಿಗೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ವಧುವರರ ಮಧ್ಯೆ ಕೋಳಿ ಅಂಕದ ಸ್ಪರ್ಧೆಯನ್ನು ಸಹ ಏರ್ಪಡಿಸಿದ್ದಾರೆ. ಈ ವಿಶಿಷ್ಟ ಮದುವೆ ಸಮಾರಂಭದ ವಿಡಿಯೋ ಇದೀಗ ವೈರಲ್ ಆಗಿದೆ.
ಮದುವೆ ಸೀಸನ್ ಈಗಾಗಲೇ ಆರಂಭವಾಗಿದೆ. ಈಗಂತೂ ಪ್ರತಿನಿತ್ಯ ಹಲವಾರು ಮದುವೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಹೊಸ ಹೊಸ ವಿಭಿನ್ನ ಕಾನ್ಸೆಪ್ಟ್ಗಳು ಬಂದಿವೆ. ಮದುವೆ ಸಮಾರಂಭದಲ್ಲಿ ವಧು ಮತ್ತು ವರನ ಕಾಲೆಳೆಯುವ ಸಲುವಾಗಿ, ಮುಖ್ಯವಾಗಿ ವರನ ಗೆಳೆಯರು ಮದುವೆ ಮನೆ ಮತ್ತು ಮದುವೆ ಮಂಟಪದಲ್ಲಿ ತಮಾಷೆಯ ಇವೆಂಟ್ಗಳನ್ನು ಏರ್ಪಡಿಸುತ್ತಾರೆ. ಕೆಲವರು ಬೀಯರ್ ಬಾಟಲಿಯಲ್ಲಿ ನೀರು ಹಾಕಿ ಮದುಮಗನಿಗೆ ಕುಡಿಸಿದರೆ, ಕೆಲವರು ಮದುಮಗನಿಗೆ ಪಾತ್ರೆ, ಪೊರಕೆ ಇತ್ಯಾದಿ ತಮಾಷೆಯ ಉಡುಗೊರೆಗಳನ್ನು ನೀಡಿ ವಧುವರರ ಕಾಲೆಳೆಯುತ್ತಾರೆ. ಇನ್ನೂ ಕೆಲವರಂತೂ ಮದುಮಕ್ಕಳನ್ನು ಟ್ರ್ಯಾಕ್ಟರ್ ಅಥವಾ ಸೈಕಲ್ ಅಲ್ಲಿ ಕೂರಿಸಿ ಊರಿಡಿ ಮೆರವಣಿಗೆ ಮಾಡಿಸುತ್ತಾರೆ. ಮದುವೆ ಸಮಾರಂಭಗಳ ಇಂತಹ ಹಲವಾರು ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ.
ಈಗ ಇಂತಹದ್ದೇ ವಿಶಿಷ್ಟ ಮದುವೆಯೊಂದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದ್ದು, ವರನ ಗೆಳೆಯರು ಮದುಮಕ್ಕಳನ್ನು ಜೆಸಿಬಿಯಲ್ಲಿ ಕೂರಿಸಿ ಅದ್ದೂರಿ ಮೆರವಣಿಗೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ವಧುವರರ ನಡುವೆ ಕೋಳಿ ಅಂಕದ ಸ್ಪರ್ಧೆಯನ್ನು ಸಹ ಏರ್ಪಡಿಸಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ಪಾನಿಪುರಿ ವ್ಯಾಪರಿಗಳ ತಿಂಗಳ ಆದಾಯ ಎಷ್ಟು? ದಿನದ ಗಳಿಕೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ
ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಈ ವಿಶಿಷ್ಟ ಮದುವೆ ನಡೆದಿದ್ದು, ಈ ಮದುವೆ ಸಮಾರಂಭದಲ್ಲಿ ವರನ ಗಳೆಯರು ಒಂದು ವಿಶಿಷ್ಟ ಕಾನ್ಸೆಪ್ಟ್ ಅನ್ನು ಏರ್ಪಡಿಸಿದ್ದರು, ಅದೇನೆಂದರೆ, ಜೆಸಿಬಿ ವಾಹನಕ್ಕೆ ಅದ್ದೂರಿಯಾಗಿ ಹೂವಿನ ಅಲಂಕಾರ ಮಾಡಿಸಿ, ಆ ಜೆಸಿಬಿಯ ಮುಂದುಗಡೆ ವಧುವರರನ್ನು ಕೂರಿಸಿ ಬಾಜಾ ಭಜಂತ್ರಿ ಬಾರಿಸುತ್ತಾ ಮೆರವಣಿಗೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಮಂಟಪದ ಒಳಗೆ ವಧು ಪೂಜಾ ಮತ್ತು ವರ ಮಿಥುನ್ ಅವರ ನಡುವೆ ಕೋಳಿ ಅಂಕದ ಸ್ಪರ್ಧೆಯನ್ನು ಕೂಡಾ ಏರ್ಪಡಿಸಿದ್ದಾರೆ. ಈ ವಿಶಿಷ್ಟ ಮದುವೆಯ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: