ಕೇರಳ ಈಗ ಭಯೋತ್ಪಾದನೆಯ ಹಾಟ್ಸ್ಪಾಟ್, ಇಲ್ಲಿ ಬದುಕು ಸುರಕ್ಷಿತ ಅಲ್ಲ: ಜೆಪಿ ನಡ್ಡಾ
ಸೋಮವಾರ ತಿರುವನಂತಪುರಂನಲ್ಲಿ ಭಾಷಣ ಮಾಡಿದ ನಡ್ಡಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ, ಇಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿದೆ. ಹಿಂಸಾಚಾರವನ್ನು ಸೃಷ್ಟಿಸುವ ಮತ್ತು ಉತ್ತೇಜಿಸುವವರಿಗೆ ಎಡ ಸರ್ಕಾರದ ಮೌನ ಬೆಂಬಲವಿದೆ...
ತಿರುವನಂತಪುರಂ: ಕೇರಳ (Kerala) ಈಗ ಭಯೋತ್ಪಾದನೆ ಮತ್ತು ತೀವ್ರವಾದಿ ಅಂಶಗಳ “ಹಾಟ್ ಸ್ಪಾಟ್” ಆಗಿದೆ. ಇಲ್ಲಿ ಬದುಕು ಸುರಕ್ಷಿತವಲ್ಲ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ (JP Nadda) ಸೋಮವಾರ ಹೇಳಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ವಿಜಯನ್ ಕುಟುಂಬವೂ ಸರ್ಕಾರಿ ವಿಷಯಗಳಲ್ಲಿ ತೊಡಗಿಸಿಕೊಂಡಿದೆ. ಎಡ ಪಕ್ಷವು ಕುಟುಂಬ ಅಥವಾ ವಂಶಾಡಳಿತ ಮಾಡುತ್ತಿದೆ. ಅವರ ಮಗಳು, ಅಳಿಯ ಕೂಡಾ ಸರ್ಕಾರದಲ್ಲಿ ತೊಡಗಿಸಿಕೊಂಡಿರುವುದುಗೊತ್ತಿದೆ ಎಂದಿದ್ದಾರೆ. ಒಂದು ದಿನದ ಹಿಂದೆ ಕೋಟ್ಟಯಂನಲ್ಲಿ ಮಾತನಾಡಿದ ನಡ್ಡಾ, ಎಲ್ಲ ರಾಜ್ಯದಲ್ಲಿರುವ ವಿರೋಧ ಪಕ್ಷಗಳು ಪ್ರಾದೇಶಿಕ ಪಕ್ಷಗಳು ಮತ್ತು ಅವುಗಳಲ್ಲಿ ಹೆಚ್ಚಿನವು “ಕುಟುಂಬ ಪಕ್ಷಗಳು” ಎಂದು ಆರೋಪಿಸಿದ್ದರು. ಹರ್ಯಾಣದಲ್ಲಿ ಮಾಜಿ ಮುಖ್ಯಮಂತ್ರಿ ದೇವಿಲಾಲ್ ಅವರ ಜನ್ಮದಿನವನ್ನು ಆಚರಿಸಲು ಜಮಾಯಿಸಿದ ವಿರೋಧ ಪಕ್ಷಗಳ ರ್ಯಾಲಿಯನ್ನು ಉಲ್ಲೇಖಿಸಿದ ಅವರು ಎರಡು ವಿಷಯಗಳು ಅವರಿಗೆ ಸಾಮಾನ್ಯವಾಗಿದೆ. ಒಂದು ಅವೆಲ್ಲವೂ ಕುಟುಂಬ ಪಕ್ಷಗಳು. ಎರಡನೆಯದ್ದು ಅವೆಲ್ಲವೂ ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ ಕುಟುಂಬ ರಾಜಕಾರಣದ ಉದಾಹರಣೆಗಳನ್ನು ನೀಡಿದ ಅವರು ವಂಶಾಡಳಿತ ಮತ್ತು ಅತ್ಯಂತ ಭ್ರಷ್ಟ ಪಕ್ಷಗಳಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಬಿಜೆಪಿ ಹೋರಾಡುತ್ತಿದೆ ಎಂದು ಹೇಳಿದ್ದರು.
ಸೋಮವಾರ ತಿರುವನಂತಪುರಂನಲ್ಲಿ ಭಾಷಣ ಮಾಡಿದ ನಡ್ಡಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ, ಇಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿದೆ. ಹಿಂಸಾಚಾರವನ್ನು ಸೃಷ್ಟಿಸುವ ಮತ್ತು ಉತ್ತೇಜಿಸುವವರಿಗೆ ಎಡ ಸರ್ಕಾರದ ಮೌನ ಬೆಂಬಲವಿದೆ ಎಂದು ಆರೋಪಿಸಿದರು.
ಬೂತ್ ಮಟ್ಟದಿಂದ ಬಿಜೆಪಿ ಕಾರ್ಯಕರ್ತರು ಜನರ ಬಳಿಗೆ ಹೋಗಿ ಕೇರಳದ ಆಡಳಿತದ ಬಗ್ಗೆ ತಿಳಿಸಲು ರಾಜ್ಯ ಪ್ರಾಯೋಜಿತ ಕಾನೂನು ತೊಡಕು ಕೂಡಾ ಕಾರಣವಾಗಿದೆ ಎಂದು ಅವರು ಹೇಳಿದರು. ಕೇರಳ ಈಗ ಭಯೋತ್ಪಾದನೆ ಮತ್ತು ತೀವ್ರವಾದಿ ಅಂಶಗಳ ಹಾಟ್ ಸ್ಪಾಟ್ ಆಗಿದೆ, ಇಲ್ಲಿ ಜೀವನ ಸುರಕ್ಷಿತವಾಗಿಲ್ಲ, ಸಾಮಾನ್ಯ ನಾಗರಿಕರು ತಮ್ಮನ್ನು ತಾವು ಸುರಕ್ಷಿತವಾಗಿ ಕಾಣುತ್ತಿಲ್ಲ, ಕೋಮು ಉದ್ವಿಗ್ನತೆ ಹೆಚ್ಚುತ್ತಿದೆ. ಹಿಂಸೆಯನ್ನು ಸೃಷ್ಟಿಸುವ ಮತ್ತು ಉತ್ತೇಜಿಸುವ ಜನರಿಗೆ ಎಡ ಸರ್ಕಾರದ ಮೌನ ಬೆಂಬಲವಿದೆ ಎಂದು ಬೂತ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ನಡ್ಡಾ ಹೇಳಿದ್ದಾರೆ.
Kerala | BJP national president JP Nadda arrived in Thiruvananthapuram, earlier today pic.twitter.com/X6fP3HuQBu
— ANI (@ANI) September 26, 2022
ತಿರುವನಂತಪುರದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯನ್ನು ನಡ್ಡಾ ಉದ್ಘಾಟಿಸಿದರು.
ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕೇರಳ ವಿಶ್ವವಿದ್ಯಾಲಯಗಳಲ್ಲಿ ಸ್ವಜನಪಕ್ಷಪಾತದ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಮುಖ್ಯಮಂತ್ರಿಗಳ ಕಚೇರಿಯಲ್ಲಿ (ಸಿಎಂಒ) ಭಾಗಿಯಾಗಿರುವವರ ಸಂಬಂಧಿಕರು ವಿಶ್ವವಿದ್ಯಾಲಯಗಳಲ್ಲಿ ನೇಮಕಗೊಳ್ಳುತ್ತಿದ್ದಾರೆ. ಲೋಕಾಯುಕ್ತದ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇರಳ ವಿಧಾನಸಭೆಯು ಅಂಗೀಕರಿಸಿದ ವಿವಾದಾತ್ಮಕ ಮಸೂದೆಯನ್ನು ಉಲ್ಲೇಖಿಸಿದ ನಡ್ಡಾ ಮತ್ತು ರಾಜ್ಯ ಸರ್ಕಾರವು ಲೋಕಾಯುಕ್ತದ ಅಧಿಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಸಿಎಂಒ ಲೋಕಾಯುಕ್ತದ ವ್ಯಾಪ್ತಿಗೆ ಬರದಂತೆ ನೋಡಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಈ ಎಲ್ಲಾ ಆರೋಪಗಳ ಹೊರತಾಗಿ, ಭ್ರಷ್ಟಾಚಾರ ಮತ್ತು ಆರ್ಥಿಕ ಶಿಸ್ತಿನ ಕೊರತೆಯ ಬಗ್ಗೆ ಅವರು ಒಂದು ದಿನದ ಹಿಂದೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಮಾಡಿದ ಆರೋಪಗಳನ್ನು ಪುನರುಚ್ಚರಿಸಿದ ನಡ್ಡಾ, ಇದು ಕೇರಳವನ್ನು ಸಾಲದ ಸುಳಿಗೆ ತಳ್ಳಿದೆ ಎಂದಿದ್ದಾರೆ.