AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಶ್ಚಿಯನ್ ಮಹಿಳೆ, ಮುಸ್ಲಿಂ ಡಿವೈಎಫ್‌ಐ ನಾಯಕನ ಅಂತರ್‌ಧರ್ಮೀಯ ಸಂಬಂಧದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿದ ಕೇರಳ ಹೈಕೋರ್ಟ್

ಶೆಜಿನ್ (ಡಿವೈಎಫ್‌ಐ ನಾಯಕ) ಅವರನ್ನು ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದ್ದೇನೆ ಮತ್ತು ಯಾವುದೇ ಬಲವಂತದಿಂದ ಅಲ್ಲ ಎಂದು ಜ್ಯೋತ್ಸ್ನಾ ಮೇರಿ ಜೋಸೆಫ್ ಸ್ಪಷ್ಟವಾಗಿ ಹೇಳಿದ್ದಾರೆ ಅವರೊಂದಿಗೆ ಸಂವಾದ ನಡೆಸಿದ ನಂತರ ನ್ಯಾಯಮೂರ್ತಿ...

ಕ್ರಿಶ್ಚಿಯನ್ ಮಹಿಳೆ, ಮುಸ್ಲಿಂ ಡಿವೈಎಫ್‌ಐ ನಾಯಕನ ಅಂತರ್‌ಧರ್ಮೀಯ ಸಂಬಂಧದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿದ ಕೇರಳ ಹೈಕೋರ್ಟ್
ಶೆಜಿನ್ ಮತ್ತು ಜ್ಯೋತ್ಸ್ನಾ ಮೇರಿ ಜೋಸೆಫ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Apr 19, 2022 | 5:20 PM

Share

ಕೊಚ್ಚಿ: ಮುಸ್ಲಿಂ ಡಿವೈಎಫ್‌ಐ (DYFI) ನಾಯಕನನ್ನು ಮದುವೆಯಾಗುವ ಕ್ರಿಶ್ಚಿಯನ್ ಮಹಿಳೆಯ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಕೇರಳ ಹೈಕೋರ್ಟ್ (Kerala High Court) ಮಂಗಳವಾರ ನಿರಾಕರಿಸಿದೆ. ಆಕೆಯ ಸಂಬಂಧಿಕರು ಇದು ಲವ್ ಜಿಹಾದ್(love jihad) ಎಂದು ಆರೋಪಿಸಿದ್ದು ಕೇರಳದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿದೆ. ತನ್ನನ್ನು ಯಾರೂ ಅಕ್ರಮವಾಗಿ ಬಂಧಿಸಿಲ್ಲ. ಪ್ರಸ್ತುತ ತನ್ನ ಕುಟುಂಬದೊಂದಿಗೆ ಮಾತನಾಡಲು ನಾನು ಇಚ್ಛಿಸುತ್ತಿಲ್ಲ ಎಂದು ಮಹಿಳೆ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಶೆಜಿನ್ (ಡಿವೈಎಫ್‌ಐ ನಾಯಕ) ಅವರನ್ನು ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದ್ದೇನೆ,  ಬಲವಂತದಿಂದ ಅಲ್ಲ ಎಂದು ಜ್ಯೋತ್ಸ್ನಾ ಮೇರಿ ಜೋಸೆಫ್ ಸ್ಪಷ್ಟವಾಗಿ ಹೇಳಿದ್ದಾರೆ ಅವರೊಂದಿಗೆ ಸಂವಾದ ನಡೆಸಿದ ನಂತರ ನ್ಯಾಯಮೂರ್ತಿಗಳಾದ ವಿ ಜಿ ಅರುಣ್ ಮತ್ತು ಸಿ ಎಸ್ ಸುಧಾ ಅವರ ಪೀಠವು ಹೇಳಿದೆ. ಈಗ ಆಕೆ ತನ್ನ ಹೆತ್ತವರು ಅಥವಾ ಕುಟುಂಬದೊಂದಿಗೆ ಸಂವಹನ ನಡೆಸಲು ಆಸಕ್ತಿ ಹೊಂದಿಲ್ಲ ಮತ್ತು ನಂತರದ ಹಂತದಲ್ಲಿ ಹಾಗೆ ಮಾಡುವುದಾಗಿ ಹೇಳಿದ್ದಾಳೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಮಹಿಳೆಯ ಕುಟುಂಬಕ್ಕೆ ತನ್ನ ಮದುವೆಯ ನಂತರ ಅವರನ್ನು ಭೇಟಿ ಮಾಡುವ ಉದ್ದೇಶವಿದೆ ಎಂದು ಅವರು ಹೇಳಿದರು. ಇದಕ್ಕಾಗಿ ವಿಶೇಷ ವಿವಾಹ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದು ಪರಿಗಣನೆಗೆ ಬಾಕಿ ಇದೆ ಮತ್ತು ಅದಕ್ಕಿಂತ ಮೊದಲು ಅಲ್ಲ ಎಂದು ನ್ಯಾಯಾಲಯ ಹೇಳಿದೆ. ನಿಮ್ಮ ಕಾಳಜಿ ಅರ್ಥಮಾಡಿಕೊಂಡಿದ್ದರೂ, ಅವರ ಮಗಳು ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿರುವ 26 ವರ್ಷದ ಮಹಿಳೆ ಮತ್ತು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಪೀಠವು ಕುಟುಂಬಕ್ಕೆ ತಿಳಿಸಿದೆ. “ಅವಳು ನಿರ್ಧಾರ ತೆಗೆದುಕೊಂಡಿದ್ದಾಳೆ ಮತ್ತು ಅವಳು ಹಿಂದೆ ಸರಿಯುತ್ತಿಲ್ಲ. ಇದು ಅವಳ ಇಚ್ಛೆ ಮತ್ತು ಖುಷಿ. ಅವಳು ಈಗ ತನ್ನ ಹೆತ್ತವರೊಂದಿಗೆ ಮಾತನಾಡಲು ಸಿದ್ಧಳಿಲ್ಲ, ಆದ್ದರಿಂದ ನಾವು ಅವಳನ್ನು ಹಾಗೆ ಮಾಡಲು ಒತ್ತಾಯಿಸುವುದು ಹೇಗೆ ಎಂದು ಅದು ಹೇಳಿದೆ.

ಮಹಿಳೆಯ ತಂದೆ ಜೋಸೆಫ್, ತನ್ನ ಮಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದು, ಅವಳನ್ನು ತನ್ನ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.

ತನ್ನ ಮಗಳು ತನ್ನ ಮನೆಯನ್ನು ತೊರೆದ ದಿನದಿಂದ ಅವಳು ಯಾರೊಂದಿಗೂ ಮಾತನಾಡಿಲ್ಲ ಮತ್ತು ಆದ್ದರಿಂದ, ಡಿವೈಎಫ್‌ಐ ನಾಯಕ ತನ್ನ ಇಚ್ಛೆಗೆ ವಿರುದ್ಧವಾಗಿ ಅವಳನ್ನು ನಿರ್ಬಂಧಿಸುತ್ತಿದ್ದಾನೆ ಎಂದು ಅನಿಸುತ್ತಿದೆ ಎಂದು ಜ್ಯೋತ್ಸ್ನಾ ಅವರ ಅಪ್ಪ ಜೋಸೆಫ್ ಸುದ್ದಿ ವಾಹಿನಿಯಲ್ಲಿ ಹೇಳಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ಕೇರಳ ಪೊಲೀಸರಲ್ಲಿ ನಂಬಿಕೆಯ ಕೊರತೆಯಿದೆ ಮತ್ತು ಏನಾಯಿತು ಎಂಬುದನ್ನು ತನಿಖೆ ಮಾಡಲು ಸಿಬಿಐ ಅಥವಾ ಎನ್ಐಎಯಂತಹ ರಾಜ್ಯದ ಹೊರಗಿನ ಏಜೆನ್ಸಿಗೆ ಒಪ್ಪಿಸಬೇಕು ಎಂದು ಜೋಸೆಫ್ ಹೇಳಿದ್ದಾರೆ.

ಮಹಿಳೆಯ ಸಂಬಂಧಿಕರು “ಲವ್ ಜಿಹಾದ್” ಎಂದು ಆರೋಪಿಸಿದ ನಂತರ ಅಂತರ್ಧರ್ಮೀಯ ಸಂಬಂಧವು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತು.ಎಡ ಪಕ್ಷದ  ಹಿರಿಯ ನಾಯಕರೊಬ್ಬರು ಆರೋಪವನ್ನು ಬೆಂಬಲಿಸಿ, ನಂತರ ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಾಯಿತು. ನಂತರ ಸಿಪಿಐ(ಎಂ), ಅಂತರ್‌ಧರ್ಮೀಯ ವಿವಾಹಗಳಲ್ಲಿ ಅಸಹಜವಾದದ್ದೇನೂ ಇಲ್ಲ ಮತ್ತು ‘ಲವ್ ಜಿಹಾದ್’ ಅಭಿಯಾನವು ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಸೃಷ್ಟಿಯಾಗಿದೆ ಎಂದು ಸ್ಪಷ್ಟಪಡಿಸಿದೆ.  ಲವ್ ಜಿಹಾದ್ ಆರೋಪವನ್ನು ದಂಪತಿ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಣದಲ್ಲಿ ದೊಡ್ಡ ಬದಲಾವಣೆಗಾಗಿ ಗುಜರಾತ್‌ನ ವಿದ್ಯಾ ಸಮೀಕ್ಷಾ ಕೇಂದ್ರವನ್ನು ಅಧ್ಯಯನ ಮಾಡುವಂತೆ ರಾಜ್ಯಗಳಿಗೆ ಮೋದಿ ಸೂಚನೆ

Published On - 5:17 pm, Tue, 19 April 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?