ಕೇವಲ ಮದ್ಯದ ವಾಸನೆ ಬಂದರೆ ವ್ಯಕ್ತಿ ಅಮಲೇರಿದ ಎಂದು ಅರ್ಥವಲ್ಲ: ಕೇರಳ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Nov 16, 2021 | 3:21 PM

Kerala High Court ಕೇವಲ ಮದ್ಯದ ವಾಸನೆ ಬಂದರೆ ವ್ಯಕ್ತಿಯು ಅಮಲೇರಿದ ಅಥವಾ ಮದ್ಯದ ಅಮಲಿನಲ್ಲಿದ್ದ ಎಂದು ಅರ್ಥವಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಕೇವಲ ಮದ್ಯದ ವಾಸನೆ ಬಂದರೆ ವ್ಯಕ್ತಿ ಅಮಲೇರಿದ ಎಂದು ಅರ್ಥವಲ್ಲ: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
Follow us on

ತಿರುವನಂತಪುರಂ: ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಿರುವವರೆಗೆ ಖಾಸಗಿ ಸ್ಥಳಗಳಲ್ಲಿ ಮದ್ಯಪಾನ (alcohol) ಮಾಡುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ (Kerala HC) ಸೋಮವಾರ ತೀರ್ಪು ನೀಡಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಕೇವಲ ಮದ್ಯದ ವಾಸನೆ ಬಂದರೆ ವ್ಯಕ್ತಿಯು ಅಮಲೇರಿದ ಅಥವಾ ಮದ್ಯದ ಅಮಲಿನಲ್ಲಿದ್ದ ಎಂದು ಅರ್ಥವಲ್ಲ ಎಂದು ನ್ಯಾಯಾಲಯವು ಹೇಳಿದೆ.  ನ್ಯಾಯಮೂರ್ತಿ ಸೋಫಿ ಥಾಮಸ್ (Justice Sophy Thomas)ಅವರ ಏಕಸದಸ್ಯ ಪೀಠವು ವಿಚಾರಣೆಯನ್ನು ರದ್ದುಗೊಳಿಸಿದ್ದು ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಅಮಲೇರಿದ ರೀತಿಯಲ್ಲಿ ಅಥವಾ ಗಲಭೆ ಮಾಡುವ ಸ್ಥಿತಿಯಲ್ಲಿ ಕಂಡುಬರಬೇಕು. ಅವರು ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಅಸಮರ್ಥರಾಗಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಹೇಳಿದ್ದಾರೆ.  ಈ ಅಂಶವನ್ನು ಸಾಬೀತುಪಡಿಸಲು ನ್ಯಾಯಾಲಯವು ಬ್ಲ್ಯಾಕ್‌ನ ನಿಯಮ (Black’s Law) ನಿಘಂಟಿನ ಪ್ರಕಾರ ‘ನಶೆ’ ವ್ಯಾಖ್ಯಾನವನ್ನು ಉಲ್ಲೇಖಿಸಿದೆ. ವ್ಯಾಖ್ಯಾನವು ಹೀಗೆ ಹೇಳುತ್ತದೆ: “ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವನೆಯಿಂದಾಗಿ ಪೂರ್ಣ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಗಳೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಕಡಿಮೆಯಾಗಿರುವುದು; ಕುಡಿತ.”

ಮದ್ಯದ ಅಮಲಿನಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿದ್ದಕ್ಕಾಗಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಎ) ಅಡಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಅರ್ಜಿಯ ಮೇಲೆ ನ್ಯಾಯಾಲಯ ತೀರ್ಪು ನೀಡಿತು.

ಆರೋಪಿಯನ್ನು ಗುರುತಿಸಲು ಪೊಲೀಸ್ ಠಾಣೆಗೆ ಆಹ್ವಾನಿಸಲಾಗಿದ್ದು, ಪೊಲೀಸರು ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ವಕೀಲರಾದ ಐ.ವಿ.ಪ್ರಮೋದ್, ಕೆ.ವಿ.ಶಶಿಧರನ್ ಮತ್ತು ಸಾಯಿರಾ ಸೌರಜ್ ಅವರ ಅರ್ಜಿದಾರರ ಪರ ವಾದ ಮಂಡಿಸಿದರು.

ಇದನ್ನೂ ಓದಿ: 20 ವರ್ಷಗಳಲ್ಲಿ 1,888 ಕಸ್ಟಡಿ ಸಾವು; ಇದರಲ್ಲಿ ಶಿಕ್ಷೆ ಆಗಿದ್ದು ಕೇವಲ 26 ಪೊಲೀಸರಿಗೆ

ಇದನ್ನೂ ಓದಿ: Purvanchal Expressway Inaguration: ಉತ್ತರ ಪ್ರದೇಶದಲ್ಲಿ 22,500 ಕೋಟಿ ವೆಚ್ಚದ ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ