ದೇಶದ್ರೋಹ ಪ್ರಕರಣ: ಲಕ್ಷದ್ವೀಪದ ಸಿನಿಮಾ ನಿರ್ಮಾಪಕಿ ಆಯೆಷಾ ಸುಲ್ತಾನಾಗೆ ನಿರೀಕ್ಷಣಾ ಜಾಮೀನು

| Updated By: ರಶ್ಮಿ ಕಲ್ಲಕಟ್ಟ

Updated on: Jun 25, 2021 | 3:17 PM

Aisha Sultana: ಫೇಸ್‌ಬುಕ್ ಪೋಸ್ಟ್‌ನಲ್ಲಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸುಲ್ತಾನಾ, “ನಾನು ಟಿವಿ ಚಾನೆಲ್ ಚರ್ಚೆಯಲ್ಲಿ ಜೈವಿಕ ಶಸ್ತ್ರ ಎಂಬ ಪದವನ್ನು ಬಳಸಿದ್ದೇನೆ. ನಾನು ಪಟೇಲ್ ಮತ್ತು ಅವರ ನೀತಿಗಳನ್ನು ಜೈವಿಕ ಅಸ್ತ್ರವಾಗಿ ಭಾವಿಸಿದ್ದೇನೆ ಎಂದು ಬರೆದಿದ್ದಾರೆ.

ದೇಶದ್ರೋಹ ಪ್ರಕರಣ: ಲಕ್ಷದ್ವೀಪದ ಸಿನಿಮಾ ನಿರ್ಮಾಪಕಿ ಆಯೆಷಾ ಸುಲ್ತಾನಾಗೆ ನಿರೀಕ್ಷಣಾ ಜಾಮೀನು
ಆಯೆಷಾ ಸುಲ್ತಾನಾ (ಕೃಪೆ: ಫೇಸ್​ಬುಕ್)
Follow us on

ತಿರುವನಂತಪುರಂ: ದೇಶದ್ರೋಹ ಪ್ರಕರಣದಲ್ಲಿ ಲಕ್ಷದ್ವೀಪದ ಸಿನಿಮಾ ನಿರ್ಮಾಪಕಿ ಆಯೆಷಾ ಸುಲ್ತಾನಾಗೆ  ಶುಕ್ರವಾರ ಕೇರಳ ಹೈಕೋರ್ಟ್  ನಿರೀಕ್ಷಣಾ ಜಾಮೀನು ನೀಡಿದೆ. ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಹೊಸ ನೀತಿ ಮತ್ತು ಅಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಲಯಾಳಂ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಸುಲ್ತಾನಾ ಕೇಂದ್ರವನ್ನು ಟೀಕಿಸಿದ್ದಾರೆ. ಪಟೇಲ್ ಅವರನ್ನು “ಬಯೋವೆಪನ್” ಎಂದು ಕರೆದಿದ್ದಾರೆ ಎಂದು ಬಿಜೆಪಿ ಲಕ್ಷದ್ವೀಪ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಹಾಜಿ ಆಯೆಷಾ ವಿರುದ್ಧ ದೂರು ನೀಡಿದ್ದರು.

ಕೇರಳ ಹೈಕೋರ್ಟ್‌ನ ಏಕ ನ್ಯಾಯಪೀಠವು ಜೂನ್ 17 ರಂದು ಒಂದು ವಾರ ಕಾಲ ಆಯೆಷಾಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಭಾನುವಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅವರು ಲಕ್ಷದ್ವೀಪದ ಕವರತ್ತಿ ಪೊಲೀಸರ ಮುಂದೆ ಹಾಜರಾಗಿದ್ದರು. ತನ್ನ ವಕೀಲರು ಸಹ ಅವರೊಂದಿಗೆ ಹೋಗುತ್ತಿದ್ದಾರೆ ಮತ್ತು ಅವರು ಪೊಲೀಸರೊಂದಿಗೆ ಸಹಕರಿಸುತ್ತಾರೆ ಎಂದು ಸುಲ್ತಾನಾ ಪಿಟಿಐಗೆ ತಿಳಿಸಿದ್ದಾರೆ.
ಮಧ್ಯಂತರ ಜಾಮೀನಿನ ಮೇಲೆ ಸುಲ್ತಾನ ಕೊವಿಡ್ ಪ್ರೋಟೋಕಾಲ್  ಉಲ್ಲಂಘಿಸಿದ್ದಾರೆ ಎಂದು ಲಕ್ಷದ್ವೀಪ ಆಡಳಿತವು ಕೇರಳ ಹೈಕೋರ್ಟ್ ಮುಂದೆ ಗುರುವಾರ ವಾದಿಸಿತು.

ಈ ಹಿಂದೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸುಲ್ತಾನಾ, “ನಾನು ಟಿವಿ ಚಾನೆಲ್ ಚರ್ಚೆಯಲ್ಲಿ ಜೈವಿಕ ಶಸ್ತ್ರ ಎಂಬ ಪದವನ್ನು ಬಳಸಿದ್ದೇನೆ. ನಾನು ಪಟೇಲ್ ಮತ್ತು ಅವರ ನೀತಿಗಳನ್ನು ಜೈವಿಕ ಅಸ್ತ್ರವಾಗಿ ಭಾವಿಸಿದ್ದೇನೆ. ಪಟೇಲ್ ಮತ್ತು ಅವರ ಸಹಚರರಿಂದಾಗಿಯೇ ಕೊವಿಡ್ -19 ಲಕ್ಷದ್ವೀಪದಲ್ಲಿ ಹರಡಿತು. ನಾನು ಪಟೇಲರನ್ನು ಬಯೋವೆಪನ್ ಎಂದು ಹೋಲಿಸಿದ್ದೇನೆ, ಸರ್ಕಾರ ಅಥವಾ ದೇಶವಲ್ಲ…. ನೀವು ಅರ್ಥಮಾಡಿಕೊಳ್ಳಬೇಕು. ನಾನು ಅವನನ್ನು ಇನ್ನೇನು ಕರೆಯಬೇಕು ಎಂದಿದ್ದಾರೆ.

ಇತ್ತೀಚೆಗೆ ಲಕ್ಷದ್ವೀಪದಲ್ಲಿ ಪ್ರಸ್ತಾಪಿಸಲಾದ ಶಾಸನ ಮತ್ತು ವಿವಾದಾತ್ಮಕ ಸುಧಾರಣಾ ಕ್ರಮಗಳ ವಿರುದ್ಧ ಇತ್ತೀಚಿನ ಅಭಿಯಾನದಲ್ಲಿ ಸುಲ್ತಾನ ಮುಂಚೂಣಿಯಲ್ಲಿದ್ದು, ಪಟೇಲ್ ಅವರ ನೀತಿ ವಿರುದ್ಧ ಲಕ್ಷದ್ವೀಪದಲ್ಲಿ ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:  Lakshadweep Sedition Case: ಆಯೆಷಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್

ಇದನ್ನೂ ಓದಿ:  Lakshadweep ಡೈರಿ ಫಾರಂಗಳನ್ನು ಮುಚ್ಚಲು ಮತ್ತು ಶಾಲಾ ಮಕ್ಕಳ ಊಟದ ಮೆನುನಿಂದ ಮಾಂಸಾಹಾರ ತೆಗೆದುಹಾಕುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

(Kerala High Court on Friday granted anticipatory bail to Lakshadweep filmmaker Aisha Sultana in the sedition case)