Viral Video: ಮೊದಲ ಮಹಡಿಯಿಂದ ಬೀಳುತ್ತಿದ್ದವರನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ ಯುವಕ; ಸೋಷಿಯಲ್​ ಮೀಡಿಯಾಗಳಲ್ಲಿ ಈಗ ಹೀರೋ..

ಬಿನು ಎಚ್ಚರ ತಪ್ಪಲು ಕಾರಣವೇನು ಎಂಬುದೂ ಗೊತ್ತಾಗಿಲ್ಲ. ಆದರೆ ಒಮ್ಮೆ ಪೂರ್ತಿಯಾಗಿ ಬಿದ್ದಿದ್ದರೆ ಖಂಡಿತ ಜೀವಕ್ಕೆ ಅಪಾಯವಂತೂ ಆಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಟ್ಟಡದ ಸಮೀಪವೇ ವಿದ್ಯುತ್ ತಂತಿ ಕೂಡ ಹಾದುಹೋಗಿದ್ದು, ಬಿನು ಅದಕ್ಕೆ ತಾಗಿ ಬೀಳುವ ಸಾಧ್ಯತೆಯೂ ಇತ್ತು.

Viral Video: ಮೊದಲ ಮಹಡಿಯಿಂದ ಬೀಳುತ್ತಿದ್ದವರನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ ಯುವಕ; ಸೋಷಿಯಲ್​ ಮೀಡಿಯಾಗಳಲ್ಲಿ ಈಗ ಹೀರೋ..
ಮೊದಲ ಮಹಡಿಯಿಂದ ಬೀಳುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ ಯುವಕ
Follow us
Lakshmi Hegde
|

Updated on:Mar 20, 2021 | 2:20 PM

ಕೇರಳದ ಯುವಕನೊಬ್ಬನ ಸಮಯಪ್ರಜ್ಞೆ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭರ್ಜರಿ ಚರ್ಚೆಯಾಗುತ್ತಿದೆ. ಇವರು ತನ್ನ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೋರ್ವರ ಜೀವ ಕಾಪಾಡಿ, ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಯುವಕ ಏನಾದರೂ ಆ ವ್ಯಕ್ತಿಯತ್ತ ಗಮನಹರಿಸದೆ ಇದ್ದಿದ್ದರೆ ಮೊದಲ ಮಹಡಿಯಿಂದ ಅವರು ಬಿದ್ದು ಜೀವವೇ ಹೋಗಬಹುದಿತ್ತು ಅಥವಾ ತೀವ್ರವಾಗಿ ಗಾಯಗೊಳ್ಳುತ್ತಿದ್ದರು. ಆದರೆ ಯುವಕ ತಯ್ಯಿಲ್​ ಮಿತ್ತಲ್​ ಬಾಬುರಾಜ್​ ಈ ಅವಘಡಕ್ಕೆ ಅವಕಾಶ ಕೊಡಲಿಲ್ಲ.

ದಿ ನ್ಯೂಸ್ ಮಿನ್ಯೂಟ್​ ವರದಿ ಮಾಡಿದಂತೆ, ಘಟನೆ ನಡೆದಿದ್ದು ಕೇರಳದ ವಡಕರ ಎಂಬಲ್ಲಿ. ಬಾಬುರಾಜ್​ ಹಾಗೂ ಬಿನು ಇಬ್ಬರೂ ಕೇರಳ ಬ್ಯಾಂಕ್​ನ ವಡಕರ ಬ್ರ್ಯಾಂಚ್​ನ ಉದ್ಯೋಗಿಗಳು. ಇವರಿಬ್ಬರೂ ತಮ್ಮ ಪಿಎಫ್​ ತುಂಬಲು ಬ್ಯಾಂಕ್​ನ ಮೊದಲ ಮಹಡಿಯಲ್ಲಿ ಹೊರಗಡೆ ಅಕ್ಕಪಕ್ಕ ನಿಂತಿದ್ದರು. ಬಿನು ಕೆಂಪು ಶರ್ಟ್​ ಹಾಕಿಕೊಂಡು, ಕೈಕಟ್ಟಿ, ಗೋಡೆಗೆ ಒರಗಿ ನಿಂತಿದ್ದರು. ಅವರ ಪಕ್ಕದಲ್ಲೇ ಬಾಬುರಾಜ್​ ಇದ್ದರು. ಈ ಗೋಡೆ ಅರ್ಧ ಮಾತ್ರ ಇತ್ತು. ಬಿನು ಅವರಿಗೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಹಾಗೇ, ಗೋಡೆಗೆ ಒರಗಿದ್ದವರು ಹಿಮ್ಮುಖವಾಗಿ ಬಿದ್ದರು. ಇನ್ನೇನು ಪೂರ್ತಿಯಾಗಿ ತಲೆ ಕೆಳಗಾಗಿ ಬೀಳುತ್ತಾರೆ, ಅಷ್ಟರಲ್ಲಿ ಪಕ್ಕದಲ್ಲಿದ್ದ ಬಾಬುರಾಜ್​ ಅವರ ಎಡಗಾಲನ್ನು ಗಟ್ಟಿಯಾಗಿ ಹಿಡಿದುಕೊಂಡರಲು. ಅಷ್ಟರಲ್ಲಿ ಅಕ್ಕಪಕ್ಕ ಇದ್ದವರೆಲ್ಲ ಓಡಿ ಬಂದು ಬಿನುವನ್ನು ಮೇಲೆತ್ತಿ, ಅವರನ್ನು ಎಚ್ಚರವಾಗಿಸಲು ಪ್ರಯತ್ನಿಸಿದ್ದಾರೆ. ನೀವು ವಿಡಿಯೋ ನೋಡಿದರೆ ಅಲ್ಲೇನಾಯಿತು ಎಂಬುದು ಸರಿಯಾಗಿ ಅರ್ಥವಾಗುತ್ತದೆ.

ಬಿನು ಎಚ್ಚರ ತಪ್ಪಲು ಕಾರಣವೇನು ಎಂಬುದೂ ಗೊತ್ತಾಗಿಲ್ಲ. ಆದರೆ ಒಮ್ಮೆ ಪೂರ್ತಿಯಾಗಿ ಬಿದ್ದಿದ್ದರೆ ಖಂಡಿತ ಜೀವಕ್ಕೆ ಅಪಾಯವಂತೂ ಆಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಟ್ಟಡದ ಸಮೀಪವೇ ವಿದ್ಯುತ್ ತಂತಿ ಕೂಡ ಹಾದುಹೋಗಿದ್ದು, ಬಿನು ಅದಕ್ಕೆ ತಾಗಿ ಬೀಳುವ ಸಾಧ್ಯತೆಯೂ ಇತ್ತು. ಅಲ್ಲದೆ, ತಲೆಕೆಳಗಾಗಿ ಬೀಳುತ್ತಿರುವುದರಿಂದ ನೆಲಕ್ಕೆ ತಲೆ ಜಜ್ಜಿದ್ದರೆ ಜೀವ ಹೋಗುತ್ತಿತ್ತು. ಈ ದುರಂತವನ್ನು ಬಾಬುರಾಜ್​ ತಪ್ಪಿಸಿದ್ದಾರೆ. ಅಷ್ಟೊತ್ತು ಅಲ್ಲಿ-ಇಲ್ಲಿ ನೋಡುತ್ತಿದ್ದ ಬಾಬುರಾಜ್​, ಬಿನು ಬೀಳುತ್ತಿದ್ದಂತೆ ಪಟ್ಟನೆ ಅವರ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಬುರಾಜ್​ ಸಿನಿಮೀಯ ರೀತಿಯಲ್ಲಿ ಬಿನುವನ್ನು ಕಾಪಾಡಿದ್ದಾರೆ ಎಂಬ ಅಭಿಪ್ರಾಯ ಎಲ್ಲೆಡೆಯಿಂದ ವ್ಯಕ್ತವಾಗಿದೆ.

Published On - 2:19 pm, Sat, 20 March 21

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ