ಇಂದು ಸಿಂಗು ಗಡಿಯಲ್ಲಿ ಸಭೆ ಸೇರಲಿದ್ದಾರೆ ರೈತ ಮುಖಂಡರು.. ಸೌಹಾರ್ದಯುತ ಪರಿಹಾರಕ್ಕೆ ಯತ್ನ

| Updated By: ಸಾಧು ಶ್ರೀನಾಥ್​

Updated on: Jan 21, 2021 | 12:03 PM

ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳವರೆಗೆ ಮುಂದೂಡಲು ಸರ್ಕಾರ ಸೂಚಿಸಿದೆ.

ಇಂದು ಸಿಂಗು ಗಡಿಯಲ್ಲಿ ಸಭೆ ಸೇರಲಿದ್ದಾರೆ ರೈತ ಮುಖಂಡರು.. ಸೌಹಾರ್ದಯುತ ಪರಿಹಾರಕ್ಕೆ ಯತ್ನ
ಪ್ರತಿಭಟನಾ ನಿರತ ರೈತರು
Follow us on

ದೆಹಲಿ: ಕೃಷಿ ಕಾನೂನುಗಳ ಅನುಷ್ಠಾನವನ್ನು ಒಂದೂವರೆ ವರ್ಷಕ್ಕೆ ಮುಂದೂಡಲು ಮತ್ತು ಸರ್ಕಾರ ಮತ್ತು ರೈತ ಮುಖಂಡರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಚರ್ಚಿಸಲು 30 ಕ್ಕೂ ಹೆಚ್ಚು ರೈತ ಸಂಘಗಳ ಪ್ರತಿನಿಧಿಗಳು ಗುರುವಾರ ಸಭೆ ಸೇರಲಿದ್ದಾರೆ. ಕೃಷಿ ಸಮುದಾಯದ ಹಿತದೃಷ್ಟಿಯಿಂದ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವುದು ಈ ಸಭೆಯ ಉದ್ದೇಶವಾಗಿದೆ.

2019 ರಲ್ಲಿ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಎನ್‌ಡಿಎ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಗು ಗಡಿಯಲ್ಲಿ ಮೂವತ್ತೆರಡು ರೈತ ಸಂಘಗಳ ಮುಖಂಡರು ಸಭೆ ಸೇರಲಿದ್ದಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಮಿನಿಸಿಟರ್ ಪಿಯೂಷ್ ಗೋಯಲ್ ಮತ್ತು ಕೇಂದ್ರ ರಾಜ್ಯ ಸಚಿವ ಸೋಮ್ ಪ್ರಕಾಶ್ ಸೇರಿದಂತೆ ರೈತ ಸಂಘದ ಮುಖಂಡರು ಮತ್ತು ಸರ್ಕಾರಿ ಪ್ರತಿನಿಧಿಗಳು ಜನವರಿ 20 ರಂದು 10 ನೇ ಸುತ್ತಿನ ಮಾತುಕತೆ ನಡೆಸಿದ್ದರು.

3 ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳವರೆಗೆ ಮುಂದೂಡಿಕೆ..
ಸಭೆಯ ವಿವರಗಳನ್ನು ನೀಡಿದ ತೋಮರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳವರೆಗೆ ಮುಂದೂಡಲು ಸರ್ಕಾರ ಸೂಚಿಸಿದೆ ಎಂದು ಹೇಳಿದರು. ಈ ಅವಧಿಯಲ್ಲಿ ಸರ್ಕಾರ ಮತ್ತು ರೈತ ಸಂಘಗಳ ಪ್ರತಿನಿಧಿಗಳ ಜಂಟಿ ಸಮಿತಿ ಮಾತುಕತೆಯನ್ನು ಮುಂದುವರಿಸಬಹುದು ಮತ್ತು ರೈತ ಸಮುದಾಯಕ್ಕೆ ಅನುಕೂಲವಾಗುವಂತಹ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದರು.

ಮೂರು ಕೃಷಿ ಕಾನೂನುಗಳನ್ನು 1 ರಿಂದ 1.5 ವರ್ಷಗಳವರೆಗೆ ಅಮಾನತುಗೊಳಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಸರ್ಕಾರ ಪ್ರಸ್ತಾಪಿಸಿದೆ ಮತ್ತು ಹೆಚ್ಚಿನ ಚರ್ಚೆ ನಡೆಸಲು ಸಮಿತಿಯನ್ನು ರಚಿಸಿದೆ. ನವೆಂಬರ್ 2019 ರ ಕೊನೆಯ ವಾರದಿಂದ, ಸಾವಿರಾರು ರೈತರು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಿಂದ ದೆಹಲಿಯ ವಿವಿಧ ಗಡಿಗಳಲ್ಲಿ ದಿ ಫಾರ್ಮರ್ಸ್ ಪ್ರೊಡ್ಯೂಸ್ ಟ್ರೇಡ್ ಅಂಡ್ ಕಾಮರ್ಸ್ ಕಾಯ್ದೆ, 2020 ರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ರ ವಿರುದ್ಧ ರೈತರು ಧರಣಿ ನಡೆಸುತ್ತಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ: ಕಾಂಗ್ರೆಸ್ ಮುಖಂಡರ ಪ್ರತಿಭಟನೆ