ಪಂಜಾಬ್​ CM ಅಮರೀಂದರ್ ಹತ್ಯೆ ಮಾಡಿದರೆ 10 ಲಕ್ಷ ಬಹುಮಾನ -ಮೊಹಾಲಿಯಲ್ಲಿ ರಾರಾಜಿಸಿವೆ ಪೋಸ್ಟರ್​ಗಳು

| Updated By: ಸಾಧು ಶ್ರೀನಾಥ್​

Updated on: Jan 02, 2021 | 5:06 PM

ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ರನ್ನು ಹತ್ಯೆ ಮಾಡಿದರೆ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ಪೋಸ್ಟರ್​ ಹಾಕಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.. ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಶುರು ಮಾಡಿದ್ದಾರೆ. ಮೊಹಾಲಿಯ 66 ಮತ್ತು 67ನೇ ಸೆಕ್ಟರ್​ನಲ್ಲಿ ಮಾರ್ಗಸೂಚಿ ಫಲಕಗಳ ಮೇಲೆ ಈ ಪೋಸ್ಟರ್​ಗಳನ್ನು ಹಾಕಲಾಗಿತ್ತು. ಇದನ್ನು ಯಾವುದೋ ಒಂದು ಸೈಬರ್​ ಕೆಫೆಯಲ್ಲಿ ಮುದ್ರಿಸಲಾಗಿದೆ. ಜೀವ ಬೆದರಿಕೆ ಪೋಸ್ಟರ್ ಮೇಲೆ ಈ ಮೇಲ್​ ಐ.ಡಿ. ಇದೆ. ಇದು ವೆರಿಫೈಡ್​ ಇಮೇಲ್​ ಐ.ಡಿ.ಯಾಗಿದೆ. ಹೆಚ್ಚಿನ […]

ಪಂಜಾಬ್​ CM ಅಮರೀಂದರ್ ಹತ್ಯೆ ಮಾಡಿದರೆ 10 ಲಕ್ಷ ಬಹುಮಾನ -ಮೊಹಾಲಿಯಲ್ಲಿ ರಾರಾಜಿಸಿವೆ ಪೋಸ್ಟರ್​ಗಳು
ಪಂಜಾಬ್​ ಸಿಎಂ ಹತ್ಯೆ ಮಾಡುವಂತಹ ಪೋಸ್ಟರ್​
Follow us on

ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ರನ್ನು ಹತ್ಯೆ ಮಾಡಿದರೆ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ಪೋಸ್ಟರ್​ ಹಾಕಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.. ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಶುರು ಮಾಡಿದ್ದಾರೆ.

ಮೊಹಾಲಿಯ 66 ಮತ್ತು 67ನೇ ಸೆಕ್ಟರ್​ನಲ್ಲಿ ಮಾರ್ಗಸೂಚಿ ಫಲಕಗಳ ಮೇಲೆ ಈ ಪೋಸ್ಟರ್​ಗಳನ್ನು ಹಾಕಲಾಗಿತ್ತು. ಇದನ್ನು ಯಾವುದೋ ಒಂದು ಸೈಬರ್​ ಕೆಫೆಯಲ್ಲಿ ಮುದ್ರಿಸಲಾಗಿದೆ. ಜೀವ ಬೆದರಿಕೆ ಪೋಸ್ಟರ್ ಮೇಲೆ ಈ ಮೇಲ್​ ಐ.ಡಿ. ಇದೆ. ಇದು ವೆರಿಫೈಡ್​ ಇಮೇಲ್​ ಐ.ಡಿ.ಯಾಗಿದೆ. ಹೆಚ್ಚಿನ ಮಾಹಿತಿ ನೀಡುವಂತೆ ಸೈಬರ್ ​ಕ್ರೈಂ ಪೊಲೀಸ್ ತಂಡಕ್ಕೆ ಸೂಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಸೋಹನ್​ ಸಿಂಗ್ ತಿಳಿಸಿದ್ದಾರೆ.

ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್ ಸಿಂಗ್​ ಅವರು ಇದೇ ಮೊದಲ ಬಾರಿಗೆ ಈ ರೀತಿಯ ಬೆದರಿಕೆಗೆ ಒಳಗಾಗುತ್ತಿದ್ದಾರೆ. ಪೋಸ್ಟರ್​ನಲ್ಲಿ ಅಮರೀಂದರ್​ ಸಿಂಗ್ ಫೋಟೋ ಹಾಕಿ, ಮೇಲೆ ವಾಂಟೆಡ್​ ಡೆಡ್​ ಎಂದು ಬರೆಯಲಾಗಿದೆ. ಒಂದೆಡೆ ರೈತರ ಹೋರಾಟ ತೀವ್ರವಾಗುತ್ತಿರುವ ಬೆನ್ನಲ್ಲೇ, ಈ ರೀತಿ ಬೆದರಿಕೆ ಕರೆ ಬಂದಿದೆ. ಇದರಲ್ಲಿ ಖಲಿಸ್ತಾನ ಹೋರಾಟಗಾರರ ಕೈವಾಡ ಇರಬಹುದು ಎಂದು ಅಂದಾಜಿಸಲಾಗಿದೆ.

Delhi Chalo: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್​ ಮೂಲಕ ರೈತರ ಪರೇಡ್​!