ಕೋಲ್ಕತ್ತಾ ವೈದ್ಯರ ಅತ್ಯಾಚಾರ-ಕೊಲೆ ಪ್ರಕರಣ: ಸಾಮಾಜಿಕ ಮಾಧ್ಯಮದಲ್ಲಿನ ವಾದ ಇಲ್ಲಿ ಬೇಡ ಎಂದ ಸಿಜೆಐ

|

Updated on: Aug 22, 2024 | 6:32 PM

ವಿಚಾರಣೆಯ ಸಮಯದಲ್ಲಿ, ವಕೀಲರೊಬ್ಬರು, ಮೈ ಲಾರ್ಡ್ PMR (ಪೋಸ್ಟ್ ಮಾರ್ಟಮ್ ವರದಿ) 151 ಮಿಗ್ರಾಂ ವೀರ್ಯದ ಬಗ್ಗೆ ಹೇಳುತ್ತದೆ, ಅದು ಮಿಲ್ಲಿ ಲೀಟರ್ ಎಂದಿದ್ದಾರೆ.  ಇದಕ್ಕೆ ಉತ್ತರಿಸಿದ ಸಿಜೆಐ ಚಂದ್ರಚೂಡ್, “ಇದನ್ನು ಗೊಂದಲಗೊಳಿಸಬೇಡಿ. ನ್ಯಾಯಾಲಯದಲ್ಲಿ ವಾದ ಮಂಡಿಸಲು ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ಬಳಸಬೇಡಿ. ನಮ್ಮ ಮುಂದೆ ನಿರ್ದಿಷ್ಟವಾಗಿ ಮರಣೋತ್ತರ ಪರೀಕ್ಷೆಯ ವರದಿಯಿದೆ ಎಂದು ಹೇಳಿದ್ದಾರೆ.

ಕೋಲ್ಕತ್ತಾ ವೈದ್ಯರ ಅತ್ಯಾಚಾರ-ಕೊಲೆ ಪ್ರಕರಣ: ಸಾಮಾಜಿಕ ಮಾಧ್ಯಮದಲ್ಲಿನ ವಾದ ಇಲ್ಲಿ ಬೇಡ ಎಂದ ಸಿಜೆಐ
ಸುಪ್ರೀಂಕೋರ್ಟ್
Follow us on

ದೆಹಲಿ ಆಗಸ್ಟ್ 22: . ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ಬಗ್ಗೆ (Kolkata Doctor Rape-Murder case) ಸುಪ್ರೀಂಕೋರ್ಟ್ (Supreme Court) ಗುರುವಾರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಸಂತ್ರಸ್ತೆಯ ದೇಹದಲ್ಲಿ 151 ಮಿಲ್ಲಿ ಗ್ರಾಂ ವೀರ್ಯ ಪತ್ತೆಯಾಗಿದೆ ಎಂಬ ವಾದಗಳನ್ನು ತಳ್ಳಿಹಾಕಿತು.

ವಿಚಾರಣೆಯ ಸಮಯದಲ್ಲಿ, ವಕೀಲರೊಬ್ಬರು, ಮೈ ಲಾರ್ಡ್ PMR (ಪೋಸ್ಟ್ ಮಾರ್ಟಮ್ ವರದಿ) 151 ಮಿಗ್ರಾಂ ವೀರ್ಯದ ಬಗ್ಗೆ ಹೇಳುತ್ತದೆ, ಅದು ಮಿಲ್ಲಿ ಲೀಟರ್ ಎಂದಿದ್ದಾರೆ.  ಇದಕ್ಕೆ ಉತ್ತರಿಸಿದ ಸಿಜೆಐ ಚಂದ್ರಚೂಡ್, “ಇದನ್ನು ಗೊಂದಲಗೊಳಿಸಬೇಡಿ. ನ್ಯಾಯಾಲಯದಲ್ಲಿ ವಾದ ಮಂಡಿಸಲು ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ಬಳಸಬೇಡಿ. ನಮ್ಮ ಮುಂದೆ ನಿರ್ದಿಷ್ಟವಾಗಿ ಮರಣೋತ್ತರ ಪರೀಕ್ಷೆಯ ವರದಿಯಿದೆ. ಆ 151 ಏನನ್ನು ಸೂಚಿಸುತ್ತದೆ ಎಂದು ನಮಗೆ ತಿಳಿದಿದೆ. ನಾವು ಮಾಧ್ಯಮಗಳಲ್ಲಿ ಹೇಳಿರುವುದನ್ನು ಬಿಟ್ಟು ಆಧಾರದ ಮೇಲೆ ಕಾನೂನು ವಾದಗಳನ್ನು ಮಾಡೋಣ ಎಂದಿದ್ದಾರೆ.

ಸಂತ್ರಸ್ತೆಯ ದೇಹದಲ್ಲಿ 150 ಮಿಗ್ರಾಂ ವೀರ್ಯ ಕಂಡುಬಂದಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಕೆಲವು ಮಾಧ್ಯಮ ವರದಿಗಳು ಈ ಹಿಂದೆ ಹೇಳಿದ್ದವು.

ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಸುತ್ತಲಿನ “ವದಂತಿಗಳು” ಮತ್ತು “ನಿರೂಪಣೆಗಳನ್ನು” ನಿರ್ಲಕ್ಷಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ. ಅದೇ ವೇಳೆ ಪ್ರಸ್ತುತ ತನಿಖೆಯನ್ನು ನಿರ್ವಹಿಸುತ್ತಿರುವ ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ನಂಬಿ ಎಂದು ಅವರು ಹೇಳಿದ್ದಾರೆ. ಪ್ರಕರಣದ ಕುರಿತು ವಿವಿಧ ಊಹಾಪೋಹಗಳ ನಡುವೆ ಅವರ ಈ ಹೇಳಿಕೆಗಳು ಬಂದಿವೆ.

ಪೊಲೀಸರು ಆತ್ಮಹತ್ಯೆಯ ಬಗ್ಗೆ ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಿದ್ದಾರೆ ಮತ್ತು ಆಕೆಯ ದೇಹದಲ್ಲಿ 150 ಮಿಗ್ರಾಂ ವೀರ್ಯವನ್ನು ಕಂಡುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಪೋಸ್ಟ್ ಹರಿದಾಡಿದ್ದವುಯ

ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು ಆಕೆಯ ದೇಹದಲ್ಲಿ ಕಂಡುಬಂದಿದೆ ಎನ್ನಲಾದ ವೀರ್ಯದ ಬಗ್ಗೆ ವದಂತಿಯನ್ನು ನಿರಾಕರಿಸಿದರು.

ಇದನ್ನೂ ಓದಿ: ಸುಪ್ರೀಂಕೋರ್ಟ್‌ ಮನವಿಯ ನಂತರ 11 ದಿನಗಳ ಮುಷ್ಕರ ಮುಕ್ತಾಯಗೊಳಿಸಿದ ಏಮ್ಸ್ ವೈದ್ಯರು

“ಈಗಲೂ ವದಂತಿ ಹರಡುವಿಕೆ ಏಕೆ ನಡೆಯುತ್ತಿದೆ? ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಕ್ಕೆ ತಿಳಿಸಲಾಗಿದೆ ಎನ್ನುವುದು ತಪ್ಪು. ಆಕೆಯ ದೇಹದಲ್ಲಿ 150 ಮಿಲಿಗ್ರಾಂ ವೀರ್ಯ ಪತ್ತೆಯಾಗಿರುವುದು ತಪ್ಪು,” ಎಂದು ಅವರು ಹೇಳಿದ್ದಾರೆ.  ಗುರುವಾರ, ಸುಪ್ರೀಂಕೋರ್ಟ್ ವೈದ್ಯೆಯ ಅಸಹಜ ಸಾವನ್ನು ದಾಖಲಿಸುವಲ್ಲಿ ಕೋಲ್ಕತ್ತಾ ಪೊಲೀಸರ ವಿಳಂಬವನ್ನು “ಅತ್ಯಂತ ಗೊಂದಲದ್ದು ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ