AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ನಿ ದುರಂತ: 45 ಭಾರತೀಯರ ಶವಗಳೊಂದಿಗೆ ಕುವೈತ್​ನಿಂದ ಕೇರಳಕ್ಕೆ ಬಂದಿಳಿದ ಸೇನಾ ವಿಮಾನ

ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ 33 ಮಂದಿ ಕೇರಳದವರು, ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಬೆಂಕಿಯಲ್ಲಿ ಗಾಯಗೊಂಡ ಭಾರತೀಯರಿಗೆ ಸಹಾಯ ಮಾಡಲು ಹಾಗೂ ಮೃತದೇಹವನ್ನು ತರಲು ಕುವೈತ್​ಗೆ ಹೋಗಿದ್ದರು.

ಅಗ್ನಿ ದುರಂತ: 45 ಭಾರತೀಯರ ಶವಗಳೊಂದಿಗೆ ಕುವೈತ್​ನಿಂದ ಕೇರಳಕ್ಕೆ ಬಂದಿಳಿದ ಸೇನಾ ವಿಮಾನ
ನಯನಾ ರಾಜೀವ್
|

Updated on:Jun 14, 2024 | 11:51 AM

Share

ಕುವೈತ್​ನ ಮುಂಗಾಫ್​ನಲ್ಲಿ ಸಂಭವಿಸಿದ ಅಗ್ನಿ ಅವಘಡ(Fire Accident)ದಲ್ಲಿ ಸಾವನ್ನಪ್ಪಿದ್ದ 45 ಭಾರತೀಯರ ಶವಗಳೊಂದಿಗೆ ವಾಯು ಸೇನಾ ವಿಮಾನ ಕೊಚ್ಚಿಗೆ ಬಂದಿಳಿದಿದೆ. ಸಿ-130ಜೆ ವಿಮಾನವು ಜೂನ್​ 13ರಂದು ಕುವೈತ್​ಗೆ ಹೊರಟಿತ್ತು. ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗ ಮೃತರ ಸಂಖ್ಯೆ 46ಕ್ಕೆ ಏರಿಕೆ,  ಇದೀಗ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿರುವ ವಿಮಾನ ಬಳಿಕ ದೆಹಲಿಗೆ ತೆರಳಲಿದೆ.

ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ 33 ಮಂದಿ ಕೇರಳದವರು, ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಬೆಂಕಿಯಲ್ಲಿ ಗಾಯಗೊಂಡ ಭಾರತೀಯರಿಗೆ ಸಹಾಯ ಮಾಡಲು ಹಾಗೂ ಮೃತದೇಹಗಳನ್ನು ತರಲು ಕುವೈತ್​ಗೆ ಹೋಗಿದ್ದರು.

ಈ ಮುಂಗಾಫ್​ ಕಟ್ಟದಲ್ಲಿ 160 ಮಂದಿ ವಾಸವಾಗಿದ್ದರು, ಅಲ್ಲಿದ್ದವರಲ್ಲಿ ಬಹುತೇಕರು ವಲಸೆ ಕಾರ್ಮಿಕರು. ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ.

ಮತ್ತಷ್ಟು ಓದಿ:Kuwait Building Fire: ಕುವೈತ್ ಬೆಂಕಿ ಅಪಘಾತದಲ್ಲಿ 40 ಭಾರತೀಯರ ಸಾವು; ದುಃಖಕರ ಸಂಗತಿ ಎಂದ ಪ್ರಧಾನಿ ಮೋದಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ವಿಮಾನ ನಿಲ್ದಾಣದಲ್ಲಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಮೃತದೇಹಗಳನ್ನು ಅವರವರ ಮನೆಗೆ ಸಾಗಿಸಲು ರಾಜ್ಯ ಸರ್ಕಾರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ. ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇಡೀ ಕಟ್ಟಡವನ್ನು ವ್ಯಾಪಿಸಿ ದುರಂತ ಸಂಭವಿಸಿದೆ.

ಅಲ್ಲದೆ ಕೀರ್ತಿ ವರ್ಧನ್ ಸಿಂಗ್ ಅವರು ಉಪ ಪ್ರಧಾನಿ ಶೇಖ್ ಫಹಾದ್ ಯೂಸುಫ್ ಸೌದ್ ಎಐ-ಸಬಾಹ್ ಅವರ ಜತೆಯೂ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರ, ಮೃತದೇಹಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸಲು ಮತ್ತು ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಸಂಪೂರ್ಣ ಬೆಂಬಲ ಮತ್ತು ಸಹಾಯ ಒದಗಿಸುವುದಾಗಿ ಭರವಸೆ ನೀಡಿದೆ.

ಮಾತ್ರವಲ್ಲ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಅಲಿ ಎಐ-ಯಾಹ್ಯಾ ಮತ್ತು ಆರೋಗ್ಯ ಸಚಿವ ಅಹ್ಮದ್ ಅಬ್ದೆಲ್ವಹಾಬ್ ಅಹ್ಮದ್ ಅಲ್-ಅವಾಡಿ ಅವರನ್ನು ಭೇಟಿಯಾಗಿ ಕೀರ್ತಿ ವರ್ಧನ್ ಸಿಂಗ್ ಚರ್ಚೆ ನಡೆಸಿದರು. ಸಂತ್ರಸ್ತರ ಕುಟುಂಬ ಸದಸ್ಯರು ಮತ್ತು ಗಾಯಗೊಂಡವರಿಗಾಗಿ 24×7 ಮೀಸಲಾದ ಸಹಾಯವಾಣಿ +965-65505246 ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯವಿದ್ದವರು ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ.

ಕೇರಳದವರ ಜೊತೆಗೆ ತಮಿಳುನಾಡಿನ 7 ಜನ ಆಂಧ್ರ ಪ್ರದೇಶದ ಮೂವರು ಹಾಗೂ ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರ್ಯಾಣ ಪಂಜಾಬ್‌ನ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬರು ಈ ದುರಂತದಲ್ಲಿ ಮಡಿದಿದ್ದಾರೆ. ಇತ್ತ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ನಿನ್ನೆಯೇ ಕುವೈತ್‌ಗೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಮೂಲದ ಗಾಯಾಳುಗಳ ಕ್ಷೇಮ ವಿಚಾರಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Fri, 14 June 24

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!