ಮಿಜೋರಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಲಾಲ್ದುಹೋಮ
ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ದುಹೋಮ (Lalduhoma) ಅವರು ಮಿಜೋರಾಂನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಹರಿಬಾಬು ಕಂಬಂಪತಿ ಅವರು ರಾಜಭವನ ಸಂಕೀರ್ಣದಲ್ಲಿ ಲಾಲ್ದುಹೋಮ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಮಿಜೋರಾಂನ (Mizoram) ಮುಖ್ಯಮಂತ್ರಿಯಾಗಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ದುಹೋಮ (Lalduhoma) ಅವರು ಇಂದು(ಡಿ.8) ಪ್ರಮಾಣವಚನ ಸ್ವೀಕರಿಸಿದರು. ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರು ರಾಜಭವನ ಸಂಕೀರ್ಣದಲ್ಲಿ ಲಾಲ್ದುಹೋಮ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮಿಜೋರಾಂನ ಐಜ್ವಾಲ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಮಿಜೋರಾಂನಲ್ಲಿ ನವೆಂಬರ್ ತಿಂಗಳನಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ. ಇತ್ತೀಚೆಗಷ್ಟೇ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ZPM (ಝೋರಾಮ್ ಪೀಪಲ್ಸ್ ಮೂವ್ಮೆಂಟ್) ಪಕ್ಷ 40 ವಿಧಾನಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರದಲ್ಲಿ ಗೆದ್ದಿದೆ. ಲಾಲ್ದುಹೋಮ ಅವರು ಸೆರ್ಚಿಪ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಅವರು ಒಟ್ಟು 8314 ಮತಗಳನ್ನು ಪಡೆದಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್‌ನ ನಾಯಕ ಜೆ. ಮಲ್ಸಾವ್ಮ್ಜುವಾಲಾ ವಾಂಚಾಂಗ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ
#WATCH | Aizawl, Mizoram: Zoram People’s Movement (ZPM) leader Lalduhoma takes oath as the Chief Minister of Mizoram as the swearing-in ceremony begins pic.twitter.com/oCMbU2xVSf
— ANI (@ANI) December 8, 2023
74 ವರ್ಷದ ಲಾಲ್ದುಹೋಮ ಅವರು ಮಾಜಿ ಐಪಿಎಸ್ ಅಧಿಕಾರಿ. ಅವರು 1977ರಲ್ಲಿ IPS ಸೇವೆಗೆ ಆಯ್ಕೆಯಾದರು. 1982ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತೆಯ ಭದ್ರತಾ ಉಸ್ತುವಾರಿಯಾಗಿ ಕೂಡ ಸೇವೆ ಸಲ್ಲಿಸಿದರು.
ಇದನ್ನೂ ಓದಿ:ಟಿವಿ ನಿರೂಪಕಿಯಾಗಿದ್ದವರು ಈಗ ಮಿಜೋರಾಂನ ಅತ್ಯಂತ ಕಿರಿಯ ಶಾಸಕಿ
ನಂತರ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ. 1984 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸಂಸದರಾದರು. ನಂತರ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬೇರೆ ಪಕ್ಷಗೆ ಹೋಗಲು ನಿರ್ಧಾರಿಸಿದರು. ಆದರೆ ನವೆಂಬರ್ 1988ರಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ