Sign In

By signing in or creating an account, you agree with Associated Broadcasting Company's Terms & Conditions and Privacy Policy.

Baryl Vanneihsangi: ಟಿವಿ ನಿರೂಪಕಿಯಾಗಿದ್ದವರು ಈಗ ಮಿಜೋರಾಂನ ಅತ್ಯಂತ ಕಿರಿಯ ಶಾಸಕಿ

ಮಿಜೋರಾಂ ವಿಧಾನಸಭಾ ಚುನಾವಣೆ(Mizoram Assembly Election)ಯ ಫಲಿತಾಂಶವು ಎಲ್ಲರನ್ನು ಅಚ್ಚರಿಗೊಳಿಸಿದೆ. ಡಿಸೆಂಬರ್ 4 ರಂದು ಬಿಡುಗಡೆಯಾದ ಫಲಿತಾಂಶಗಳಲ್ಲಿ, ಝೋರಂ ಪೀಪಲ್ಸ್ ಮೂವ್​ಮೆಂಟ್ (ZPM) ಎಂಬ ಬಿರುಗಾಳಿಯು MNFನ ಸೋಲಿಗೆ ಕಾರಣವಾಯಿತು. ZPM ನ ಹೊಸ ಚುನಾಯಿತ ಮಹಿಳಾ ಶಾಸಕಿ ಬೆರಿಲ್ ವನ್ನೈಹಸಂಗಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಐಜ್ವಾಲ್ ಸೌತ್-III ಸ್ಥಾನದಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ, ಬೆರಿಲ್ ವನ್ನೆಹಸಂಗಿ ಮಿಜೋರಾಂನ ಅತ್ಯಂತ ಕಿರಿಯ ಮಹಿಳಾ ಶಾಸಕರಾಗಿದ್ದಾರೆ.

Baryl Vanneihsangi: ಟಿವಿ ನಿರೂಪಕಿಯಾಗಿದ್ದವರು ಈಗ ಮಿಜೋರಾಂನ ಅತ್ಯಂತ ಕಿರಿಯ ಶಾಸಕಿ
Baryl
Follow us
ನಯನಾ ರಾಜೀವ್
|

Updated on: Dec 06, 2023 | 9:04 AM

ಮಿಜೋರಾಂ ವಿಧಾನಸಭಾ ಚುನಾವಣೆ(Mizoram Assembly Election)ಯ ಫಲಿತಾಂಶವು ಎಲ್ಲರನ್ನು ಅಚ್ಚರಿಗೊಳಿಸಿದೆ. ಡಿಸೆಂಬರ್ 4 ರಂದು ಬಿಡುಗಡೆಯಾದ ಫಲಿತಾಂಶಗಳಲ್ಲಿ, ಝೋರಂ ಪೀಪಲ್ಸ್ ಮೂವ್​ಮೆಂಟ್ (ZPM) ಎಂಬ ಬಿರುಗಾಳಿಯು MNFನ ಸೋಲಿಗೆ ಕಾರಣವಾಯಿತು. ZPM ನ ಹೊಸ ಚುನಾಯಿತ ಮಹಿಳಾ ಶಾಸಕಿ ಬೆರಿಲ್ ವನ್ನೈಹಸಂಗಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಐಜ್ವಾಲ್ ಸೌತ್-III ಸ್ಥಾನದಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ, ಬೆರಿಲ್ ವನ್ನೆಹಸಂಗಿ ಮಿಜೋರಾಂನ ಅತ್ಯಂತ ಕಿರಿಯ ಮಹಿಳಾ ಶಾಸಕರಾಗಿದ್ದಾರೆ.

ವನ್ನೈಹಸಂಗಿ ಅವರು ಎಂಎನ್‌ಎಫ್‌ನ ಎಫ್ ಲಾಲ್ನುನ್ಮಾವಿಯಾ ಅವರನ್ನು 1,414 ಮತಗಳಿಂದ ಸೋಲಿಸಿದರು. ಬೆರಿಲ್ ವನ್ನೆಹಸಂಗಿ 9,370 ಮತಗಳನ್ನು ಪಡೆದರೆ, ಎಫ್ ಲಾಲ್ನುನ್ಮಾವಿಯಾ 7,956 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ 2,066 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರೋಸಿಯಮ್ಮಘಟ್ಟ ಮೂರನೇ ಸ್ಥಾನದಲ್ಲಿದ್ದಾರೆ.

ಬೆರಿಲ್ ವನ್ನೆಹಿಸಂಗಿ ಯಾರು? ಮಿಜೋರಾಂ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ ಬೆರಿಲ್ ವನ್ನೈಹಸಂಗಿ. ಆಕೆಗೆ 32 ವರ್ಷ. ಆಕೆಯ ಚುನಾವಣಾ ಅಫಿಡವಿಟ್ ಪ್ರಕಾರ, ಅವರು ಈ ಹಿಂದೆ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್ (AMC) ನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡಿದ್ದಾರೆ. ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ ಎಂಎ ಮಾಡಿದ್ದಾರೆ. ವರದಿಗಳ ಪ್ರಕಾರ, ಬೆರಿಲ್ ವನ್ನೆಹಿಸಂಗಿ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ. ಅವರು ಪ್ರಸಿದ್ಧ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಮತ್ತಷ್ಟು ಓದಿ: ಮಿಜೋರಾಂನಲ್ಲಿ ಸರ್ಕಾರ ರಚಿಸಲಿದೆ ZPM; 9 ಸೀಟು ಗೆದ್ದ ಎಂಎನ್ಎಫ್, ಬಿಜೆಪಿಗೆ 2

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬೆರಿಲ್ ವನ್ನೆಹ್‌ಸಂಗಿ ಸಾಕಷ್ಟು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ತನ್ನ Instagram ಬಯೋದಲ್ಲಿ, ಅವರು ಟಿವಿ ನಿರೂಪಕಿ, ಹೊಸ್ಟೆಸ್, ಆಂಕರ್ ಮತ್ತು ರಾಜಕಾರಣಿ ಎಂದು ವಿವರಿಸಿದ್ದಾರೆ.

ಮಿಜೋರಾಂನಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಐಜ್ವಾಲ್ ಸೌತ್-III ರಿಂದ ಬೆರಿಲ್ ವನ್ನೆಹಸಂಗಿ ಹೊರತುಪಡಿಸಿ, ಲುಂಗ್ಲೆಯಿ ಪೂರ್ವ ಸ್ಥಾನದಿಂದ ಝಡ್​ಪಿಎಂ ಲಾಲ್ರಿನ್ಪುಯಿ ಮತ್ತು ಪಶ್ಚಿಮ ತುಯಿಪುಯಿ ಕ್ಷೇತ್ರದಿಂದ ಪ್ರೊವಾ ಚಕ್ಮಾ ಗೆದ್ದಿದ್ದಾರೆ.

ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, 40 ಝಡ್​ಪಿಎಂ 27 ಸ್ಥಾನಗಳನ್ನು, ಎಂಎನ್‌ಎಫ್ 10 ಸ್ಥಾನಗಳನ್ನು, ಬಿಜೆಪಿ 2 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ. ರಾಜ್ಯದಲ್ಲಿ ಜೆಡಿಎಸ್ ಶೇ.37.86, ಎಂಎನ್‌ಎಫ್ ಶೇ.35.10, ಬಿಜೆಪಿ ಶೇ.5.06 ಮತ್ತು ಕಾಂಗ್ರೆಸ್ ಶೇ.20.82 ಮತಗಳನ್ನು ಪಡೆದಿವೆ. ಇದೇ ವೇಳೆ ಶೇ.0.68ರಷ್ಟು ಮತಗಳು ಇತರರ ಖಾತೆಗೆ ಚಲಾವಣೆಯಾದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ