
ಪಾಟ್ನಾ, ನವೆಂಬರ್ 15: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ (Bihar Assembly Elections) ಆರ್‌ಜೆಡಿ ಹೀನಾಯ ಸೋಲನ್ನು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಮಗಳು ರಾಜಕೀಯ ಹಾಗೂ ತಮ್ಮ ಕುಟುಂಬವನ್ನು ತೊರೆದಿರುವುದಾಗಿ ಘೋಷಿಸಿದ್ದಾರೆ. ಮೂಲಗಳ ಪ್ರಕಾರ, ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷದ ಸೋಲಿಗೆ ಆಚಾರ್ಯ ಅವರನ್ನು ದೂಷಿಸಲಾಗಿದೆ. ಅವರು ಸಿಂಗಾಪುರದಲ್ಲಿದ್ದಾಗ ರೋಹಿಣಿ ಆಚಾರ್ಯ ಅವರನ್ನು ಪ್ರಚಾರಕ್ಕಾಗಿ ಕರೆಯಲಾಗಿತ್ತು. ಅದು ಅವರ ಸಹೋದರ ತೇಜಸ್ವಿ ಯಾದವ್ ಸ್ಪರ್ಧಿಸುತ್ತಿದ್ದ ರಾಘೋಪೂರ್‌ಗೆ ಮಾತ್ರ ಸೀಮಿತವಾಗಿತ್ತು.
ಪಕ್ಷದ ಸೋಲಿನ ಎಲ್ಲಾ ಆರೋಪಗಳನ್ನು ತನ್ನ ಮೇಲೆ ಹೊತ್ತುಕೊಂಡು, ತೇಜಸ್ವಿ ಯಾದವ್ ಅವರ ಆಪ್ತರಾಗಿರುವ ಸಂಜಯ್ ಯಾದವ್ ಅವರನ್ನು ರೋಹಿಣಿ ಆಚಾರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ತನಗೆ ಕುಟುಂಬ ಹಾಗೂ ರಾಜಕೀಯ ತೊರೆಯಲು “ಕೇಳಿದ್ದು” ಸಂಜಯ್ ಯಾದವ್ ಮತ್ತು ರಮೀಜ್ ಎಂದು ಆರೋಪಿಸಿದ್ದಾರೆ.
I’m quitting politics and I’m disowning my family …
This is what Sanjay Yadav and Rameez had asked me to do …nd I’m taking all the blame’s— Rohini Acharya (@RohiniAcharya2) November 15, 2025
“ನಾನು ರಾಜಕೀಯ ತ್ಯಜಿಸುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ… ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ಕೇಳಿಕೊಂಡಿದ್ದು ಇದನ್ನೇ. ನಾನೇ ಎಲ್ಲಾ ಹೊಣೆಯನ್ನು ಹೊರುತ್ತಿದ್ದೇನೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ ಮಹಿಳೆಯರು ಮತ್ತು ಯುವಜನರು ಎಂಬ ಹೊಸ ಸೂತ್ರ ನೀಡಿದೆ; ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ
ಈಗ, ರಾಜಕೀಯವನ್ನು ತ್ಯಜಿಸಿ ತಮ್ಮ ಕುಟುಂಬವನ್ನು ತ್ಯಜಿಸುವ ಅವರ ನಿರ್ಧಾರವು ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿನ ದ್ವೇಷವನ್ನು ಎತ್ತಿ ತೋರಿಸುತ್ತದೆ. ಇದಕ್ಕೂ ಮೊದಲು, ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಲಾಲು ಯಾದವ್ ‘ಬೇಜವಾಬ್ದಾರಿ ವರ್ತನೆ’ಯನ್ನು ಉಲ್ಲೇಖಿಸಿ ತಮ್ಮ ಹಿರಿಯ ಮಗನೊಂದಿಗಿನ ಕುಟುಂಬದ ಎಲ್ಲಾ ಸಂಬಂಧಗಳನ್ನು ಸಹ ಕೊನೆಗೊಳಿಸಿದ್ದರು. ಇದೀಗ ಅವರ ಮಗಳು ಕುಟುಂಬ ತೊರೆಯುತ್ತಿದ್ದಾರೆ.
ರೋಹಿಣಿ ಆಚಾರ್ಯ ಯಾರು?:
ಮದುವೆಯ ನಂತರ ಸಿಂಗಾಪುರದಲ್ಲಿ ನೆಲೆಸಿರುವ ರೋಹಿಣಿ ಆಚಾರ್ಯ ವೈದ್ಯಕೀಯ ಪದವೀಧರೆ. ರೋಹಿಣಿ ತನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿದ ನಂತರ ಅಪಾರ ಗೌರವವನ್ನು ಗಳಿಸಿದರು. ಲಾಲು ಪ್ರಸಾದ್ ಯಾದವ್ ಅವರಿಗೆ ರೋಹಿಣಿ ಆಚಾರ್ಯ ತಮ್ಮ ಒಂದು ಕಿಡ್ನಿಯನ್ನು ನೀಡಿದ್ದರು. ಇದಾದ ನಂತರ ಅವರು ಭಾರೀ ಸುದ್ದಿಯಾಗಿದ್ದರು. ರೋಹಿಣಿ ಕಳೆದ ವರ್ಷ ಅವರ ತಂದೆ ಹಲವು ವರ್ಷಗಳ ಹಿಂದೆ ಪ್ರತಿನಿಧಿಸಿದ್ದ ಸರನ್ ಲೋಕಸಭಾ ಕ್ಷೇತ್ರದಲ್ಲಿ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಹಲವು ಬಾರಿ ಸಂಸದರಾಗಿದ್ದ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಮುಂದೆ ಗೆಲ್ಲಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಜಾತಿ ರಾಜಕೀಯದ ವಿಷವನ್ನು ಬಿಹಾರ ತಿರಸ್ಕರಿಸಿದೆ; ಗುಜರಾತ್ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
2015 ಮತ್ತು 2020ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ರಾಜ್ಯದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆರ್‌ಜೆಡಿ ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿ, ಕೇವಲ 25 ಸ್ಥಾನಗಳಿಗೆ ಸೀಮಿತವಾಯಿತು. ಕಾಂಗ್ರೆಸ್ 6 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಎಡ ಪಕ್ಷಗಳಾದ ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) (ಲಿಬರೇಶನ್) ಮತ್ತು ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 3 ಸ್ಥಾನಗಳನ್ನು ಗೆದ್ದವು. ಒಟ್ಟಾರೆಯಾಗಿ, ಮಹಾಘಟಬಂಧನ್ ಮೈತ್ರಿಕೂಟ ಕೇವಲ 34 ಸ್ಥಾನಗಳನ್ನು ಗೆದ್ದಿತು.
ಮತ್ತೊಂದೆಡೆ, ಎನ್‌ಡಿಎ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತು, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನತಾ ದಳ ಯುನೈಟೆಡ್ (ಜೆಡಿಯು) ಕ್ರಮವಾಗಿ 89 ಮತ್ತು 85 ಸ್ಥಾನಗಳನ್ನು ಗೆದ್ದವು. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಕ್ರಮವಾಗಿ 19, 5 ಮತ್ತು 4 ಸ್ಥಾನಗಳನ್ನು ಗೆದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ