ಜಾತಿ ರಾಜಕೀಯದ ವಿಷವನ್ನು ಬಿಹಾರ ತಿರಸ್ಕರಿಸಿದೆ; ಗುಜರಾತ್‌ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯ ಗಳಿಸಿದೆ. ಆರ್‌ಜೆಡಿ-ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದೆ. ಗುಜರಾತ್‌ನಲ್ಲಿ ಇಂದು ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 2025ರ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಜಾತಿವಾದದ ವಿಷವನ್ನು ಬಿತ್ತುತ್ತಿದ್ದವರನ್ನು ಜನರು ತಿರಸ್ಕರಿಸಿದ್ದಾರೆ ಎಂದು ತೋರಿಸಿದೆ ಎಂದು ಹೇಳಿದ್ದಾರೆ.

ಸೂರತ್, ನವೆಂಬರ್ 15: “ಬಿಹಾರ ಐತಿಹಾಸಿಕ ಗೆಲುವು ಸಾಧಿಸಿದೆ. ನಾವು ಬಿಹಾರದ (Bihar Assembly Elections) ಜನರನ್ನು ಭೇಟಿಯಾಗದೆ ಸೂರತ್‌ನಿಂದ ಹೊರಟರೆ, ನಮ್ಮ ಪ್ರಯಾಣ ಅಪೂರ್ಣವೆಂದು ಭಾಸವಾಗುತ್ತದೆ. ಆದ್ದರಿಂದ, ಗುಜರಾತ್‌ನಲ್ಲಿ ಅದರಲ್ಲೂ ವಿಶೇಷವಾಗಿ ಸೂರತ್‌ನಲ್ಲಿ ವಾಸಿಸುವ ನನ್ನ ಬಿಹಾರಿ ಸಹೋದರ-ಸಹೋದರಿಯರ ಜೊತೆ ಈ ವಿಜಯೋತ್ಸವ ನಡೆಸುವುದು ನನ್ನ ಜವಾಬ್ದಾರಿಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಯ ಅದ್ಭುತ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ವಿರೋಧ ಪಕ್ಷಗಳು ಹರಡಿದ ಜಾತಿ ಆಧಾರಿತ ರಾಜಕೀಯದ ವಿಷವನ್ನು ಬಿಹಾರ ರಾಜ್ಯ ತಿರಸ್ಕರಿಸಿದೆ ಎಂದು ಪ್ರತಿಪಾದಿಸಿದ್ದಾರೆ.
Speaking in Surat. Watch. https://t.co/chw5JEn0Kj
— Narendra Modi (@narendramodi) November 15, 2025
“ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ವಿಪಕ್ಷಗಳ ನಾಯಕರು ಜಾತಿ ಆಧಾರಿತ ರಾಜಕೀಯದ ವಿಷವನ್ನು ಹರಡುತ್ತಿದ್ದಾರೆ. ಈ ಬಾರಿ ಬಿಹಾರದ ಜನರು ಚುನಾವಣೆಯಲ್ಲಿ ಜಾತಿವಾದವನ್ನು ತಿರಸ್ಕರಿಸಿದ್ದಾರೆ” ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ ಮಹಿಳೆಯರು ಮತ್ತು ಯುವಜನರು ಎಂಬ ಹೊಸ ಸೂತ್ರ ನೀಡಿದೆ; ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ
#WATCH | Surat, Gujarat | Prime Minister Narendra Modi says, “When we meet young Congress members or INDIA alliance members in the Parliament, they say, ‘Sir, what can we do? Our careers are coming to an end. We don’t even get a chance to speak in Parliament because these people… pic.twitter.com/9kEp5UENu6
— ANI (@ANI) November 15, 2025
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಚುನಾವಣಾ ಆಯೋಗದ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವ ಆರ್‌ಜೆಡಿ-ಕಾಂಗ್ರೆಸ್ ಜೋಡಿಯನ್ನು ಟೀಕಿಸಿದ ಮೋದಿ, “ಅವರು ದ್ವೇಷದ ವಾತಾವರಣವನ್ನು ಹರಡುತ್ತಿದ್ದಾರೆ. ಆದರೂ ಎಲ್ಲಾ ವರ್ಗದ ಜನರು ಸರ್ವಾನುಮತದಿಂದ ಎನ್‌ಡಿಎಗೆ ಮತ ಹಾಕಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Bihar Election Results: ಬಿಹಾರದಲ್ಲಿ ತನ್ನದೇ ದಾಖಲೆ ಮುರಿದು ದೊಡ್ಡಣ್ಣನಾಗಿ ಹೊರಹೊಮ್ಮಿದ ಬಿಜೆಪಿ!
डेडियापाड़ा में गुजरात के मेरे परिवारजनों ने जिस आत्मीयता के साथ स्वागत किया, वो अभिभूत करने वाला है! भगवान बिरसा मुंडा जी की जयकारों के बीच राज्य की नारीशक्ति और युवा साथियों की बड़ी भागीदारी ने एक नई ऊर्जा से भर दिया। pic.twitter.com/Uz4wts3RJy
— Narendra Modi (@narendramodi) November 15, 2025
“ಆರ್‌ಜೆಡಿ-ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಏಕೆ ಸೋತಿತು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಆದ್ದರಿಂದ ಅವರು ಸುಲಭವಾದ ನೆಪವನ್ನು ಆರಿಸಿಕೊಂಡಿದ್ದಾರೆ. ಕೆಲವೊಮ್ಮೆ ಇವಿಎಂ ಅನ್ನು ದೂಷಿಸುವುದು, ಕೆಲವೊಮ್ಮೆ ಚುನಾವಣಾ ಆಯೋಗವನ್ನು ದೂಷಿಸುವುದು, ಕೆಲವೊಮ್ಮೆ ಎಸ್‌ಐಆರ್ ಅನ್ನು ದೂಷಿಸುವುದು ಅವರಿಗೆ ಅಭ್ಯಾಸವಾಗಿದೆ. ಆದರಎ, ಈ ನೆಪಗಳು ಅವರನ್ನು ಕೆಲವು ದಿನಗಳವರೆಗೆ ಉಳಿಸಿಕೊಳ್ಳಬಹುದೇ ವಿನಃ ದೀರ್ಘಾವಧಿಯಲ್ಲಿ ಅವರ ಕಾರ್ಯಕರ್ತರು ಅದನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




