ಬಿಹಾರ ಚುನಾವಣೆ ಮಹಿಳೆಯರು ಮತ್ತು ಯುವಜನರು ಎಂಬ ಹೊಸ ಸೂತ್ರ ನೀಡಿದೆ; ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ
ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗೇ, ಎನ್‌ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಹೀಗಾಗಿ, ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಹಲವು ನಾಯಕರು ಪಾಲ್ಗೊಂಡಿದ್ದರು.

ನವದೆಹಲಿ, ನವೆಂಬರ್ 14: “ಬಿಹಾರದ ಇಂದಿನ ಗೆಲುವು ಹೊಸ ಸಕಾರಾತ್ಮಕ ಸೂತ್ರವನ್ನು ನೀಡಿದೆ. ಅದು MY ಸೂತ್ರ (ಮಹಿಳೆ ಮತ್ತು ಯುವಜನರು). ಇಂದು, ಬಿಹಾರವು ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರತಿಯೊಂದು ಧರ್ಮ ಮತ್ತು ಪ್ರತಿಯೊಂದು ಜಾತಿಯ ಯುವಕರು ಸೇರಿದ್ದಾರೆ. ಅವರ ಆಸೆಗಳು, ಅವರ ಆಕಾಂಕ್ಷೆಗಳು ಮತ್ತು ಕನಸುಗಳು ಜಂಗಲ್ ರಾಜ್ ಜನರ ಹಳೆಯ ಕೋಮು ಸೂತ್ರವನ್ನು ಸಂಪೂರ್ಣವಾಗಿ ನಾಶಪಡಿಸಿವೆ” ಎಂದು ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ (PM Modi) ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಗೆಲುವು ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. 2025ರ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟವು 243 ಸ್ಥಾನಗಳಲ್ಲಿ ಸುಮಾರು 202 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಅನ್ನು 35 ಸ್ಥಾನಕ್ಕೆ ಸೀಮಿತಗೊಳಿಸುವುದರೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆಗೆ ಸಜ್ಜಾಗಿದೆ.
Speaking from the @BJP4India HQ. https://t.co/z9kQk3U2be
— Narendra Modi (@narendramodi) November 14, 2025
ಇದನ್ನೂ ಓದಿ: Bihar Election Results: ಉತ್ತಮ ಆಡಳಿತ, ಅಭಿವೃದ್ಧಿ ಗೆದ್ದಿದೆ; ನಿತೀಶ್ ಕುಮಾರ್ಗೆ ಪ್ರಧಾನಿ ಮೋದಿ ಅಭಿನಂದನೆ
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ಜಂಗಲ್ ರಾಜ್ ಮತ್ತು ಕಟ್ಟಾ ಸರ್ಕಾರ್ ಬಗ್ಗೆ ಮಾತನಾಡುತ್ತಿದ್ದಾಗ, ಆರ್‌ಜೆಡಿ ಪಕ್ಷವು ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲಿಲ್ಲ. ಆದರೆ, ಇದು ಕಾಂಗ್ರೆಸ್ ಅನ್ನು ಅಸಮಾಧಾನಗೊಳಿಸಿತು. ಇಂದು, ಕಟ್ಟಾ ಸರ್ಕಾರ ಎಂದಿಗೂ ಬಿಹಾರಕ್ಕೆ ಹಿಂತಿರುಗುವುದಿಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ” ಎಂದಿದ್ದಾರೆ.
#BiharElections | Delhi: Chants of ‘Vande Mataram’ and ‘Bharat Mata ki Jai’ resonate as PM Narendra Modi concludes his address
Prime Minister Narendra Modi said, “I once again express my gratitude to every voter of Bihar. This year marks the 150th anniversary of Vande… pic.twitter.com/5DplmKyXHE
— ANI (@ANI) November 14, 2025
“ಬಿಹಾರದ ಜನರು ಅಭಿವೃದ್ಧಿ ಹೊಂದಿದ ಬಿಹಾರಕ್ಕೆ ಮತ ಹಾಕಿದ್ದಾರೆ, ಅವರು ಸಮೃದ್ಧ ಬಿಹಾರಕ್ಕೆ ಮತ ಹಾಕಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ, ನಾನು ಬಿಹಾರದ ಜನರನ್ನು ದಾಖಲೆಯ ಮತದಾನಕ್ಕಾಗಿ ಒತ್ತಾಯಿಸಿದ್ದೆ. ಅದಕ್ಕೆ ಬೆಂಬಲಿಸಿದ ಜನರು ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಮೋದಿ ಹೇಳಿದ್ದಾರೆ.
#BiharElections | Delhi: PM Narendra Modi says, “Ganga flows through Bihar and reaches Bengal. Bihar has also paved the way for the BJP’s victory in Bengal. I also congratulate the brothers and sisters of Bengal. Now, together with you, the BJP will uproot jungle raj from West… pic.twitter.com/Tm0c8A4Ngo
— ANI (@ANI) November 14, 2025
ಇದನ್ನೂ ಓದಿ: Bihar Election Results 2025 LIVE: ಎಲ್ಲ ದಾಖಲೆಗಳೂ ಧೂಳೀಪಟವಾಯ್ತು; ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಭಾಷಣ
“ನಾವು ಜನರ ಸೇವಕರು. ನಮ್ಮ ಕಠಿಣ ಪರಿಶ್ರಮದ ಮೂಲಕ ಜನರ ಹೃದಯಗಳನ್ನು ಗೆಲ್ಲುತ್ತಲೇ ಇದ್ದೇವೆ, ಅದಕ್ಕಾಗಿಯೇ ಇಡೀ ಬಿಹಾರವು ‘ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ (ಮತ್ತೊಂದು ಬಾರಿ ಎನ್‌ಡಿಎ ಸರ್ಕಾರ) ಎಂದು ಹೇಳಿದೆ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Fri, 14 November 25




