ಲಷ್ಕರ್-ಎ-ತೊಯ್ಬಾದ (Lashkar-e-Taiba)ಭಾರತೀಯ ಉಪಶಾಖೆ ದಿ ರೆಸಿಸ್ಟೆನ್ಸ್ ಫೋರ್ಸ್ (TRF) ಕಾಶ್ಮೀರಿ ಪಂಡಿತರಿಗೆ (Kashmiri Pandits) ಹೊಸ ಬೆದರಿಕೆಯನ್ನು ನೀಡಿದೆ. ಕಾಶ್ಮೀರಿ ಸಮುದಾಯವು ‘ಯಾವಾಗಲೂ ಬಲಿಪಶು ಕಾರ್ಡ್ ಅನ್ನು ಆಡುತ್ತದೆ’ ಎಂದು ಹೇಳಿದ ಉಗ್ರ ಗುಂಪು ಜಮ್ಮು ಮತ್ತು ಕಾಶ್ಮೀರದ ಆರು ಆಡಳಿತ ಅಧಿಕಾರಿಗಳನ್ನು ಹಿಟ್ ಲಿಸ್ಟ್ ನಲ್ಲಿ ಹಾಕಿದ್ದು’ಪಿಎಂ ಪ್ಯಾಕೇಜ್ ಭಟರು’ ಎಂದು ಗುರುತಿಸಿ ಬೆದರಿಕೆಯೊಡ್ಡಿದ್ದಾರೆ. ಪಿಎಂ ಪ್ಯಾಕೇಜ್‌ಗಳ ಭಟರು ಎಂದು ಸಹಾನುಭೂತಿ ಹೊಂದಲು ಪ್ರಯತ್ನಿಸುವ ವಲಸಿಗ ಪಂಡಿತರೆಲ್ಲರಿಗೂ ಈ ಪಟ್ಟಿಯು ಕಣ್ಣು ತೆರೆಸುವಂತಿರಬೇಕು ಎಂದು ಟಿಆರ್‌ಎಫ್‌ನ ಬೆದರಿಕೆ ಪತ್ರದಲ್ಲಿ ಹೇಳಿದೆ. ತನ್ನ ಪಟ್ಟಿಯಲ್ಲಿ ಹೇಳಿದ ಅಧಿಕಾರಿಗಳ ಇಲಾಖೆಗಳನ್ನು ಪಟ್ಟಿ ಮಾಡಿರುವ ದಿ ರೆಸಿಸ್ಟೆನ್ಸ್ ಫೋರ್ಸ್ ಮುಖ್ಯವಾಗಿ ಶಿಕ್ಷಣ ಇಲಾಖೆಯಲ್ಲಿ ನಿಯೋಜಿತವಾಗಿರುವ ಅಧಿಕಾರಿಗಳನ್ನು 1990ರ ದಶಕಗಲ್ಲಿ ಗುಪ್ತಚರ ಇಲಾಖೆ ದಾಳವಾಗಿ ಬಳಸಿದ್ದು ಈಗ ಅವರು ಸಂಘಿ ಅಜೆಂಡಾವನ್ನು ಪೂರೈಸುತ್ತಾರೆ ಎಂದಿದೆ. “ವಲಸಿಗ ಕಾಶ್ಮೀರ ಪಂಡಿತರ ಪಿಎಂ ಪ್ಯಾಕೇಜ್ ಭಟರ ಸಹಾನುಭೂತಿ ಹೊಂದಲು ಪ್ರಯತ್ನಿಸುವ ಎಲ್ಲರಿಗೂ ಈ ಪಟ್ಟಿಯು ಕಣ್ಣು ತೆರೆಸುವಂತಿರಬೇಕು” ಎಂದು ಪತ್ರದಲ್ಲಿ ಬರೆಯಲಾಗಿದೆ.”ಈ ಪಿಎಂ ಪ್ಯಾಕೇಜ್ ಭಟರು ದೆಹಲಿಗೆ ಸೇವೆ ಸಲ್ಲಿಸಲು ಮತ್ತು ಅವರು ಸೇವೆ ಸಲ್ಲಿಸುವ ಎಲ್ಲಾ ಇಲಾಖೆಗಳನ್ನು ಭಾರತೀಕರಣಗೊಳಿಸಲು ಸಹಿ ಮಾಡಿದ ಒಪ್ಪಂದದ ಪ್ರಕಾರ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. 1990 ರ ದಶಕದ ಆರಂಭದಲ್ಲಿ ಅವರು ಐಬಿಯ ದಾಳಗಳಾಗಿದ್ದರು ಮತ್ತು ಈಗ ಅವರು ಸಂಘಿ ಅಜೆಂಡಾಕ್ಕೆ ಸೇವೆ ಸಲ್ಲಿಸುತ್ತಾರೆ. ಅವರಿಗೆ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಅವರ ಹುದ್ದೆಗಳನ್ನು ಲೆಕ್ಕಿಸದೆ ಅವರಿಗೆ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಈ ಪಟ್ಟಿಯು ಕೆಳ ದರ್ಜೆಯ ಕೆಲಸದಿಂದ ಹಿಡಿದು ಉನ್ನತ ಪ್ರೊಫೈಲ್‌ನ ಕೇರ್‌ಟೇಕರ್ ವರಗೆ ನಿಯೋಜಿಸಲಾಗಿದೆ ಎಂದು ಭಯೋತ್ಪಾದಕ ಸಂಘಟನೆಯು ಕಾಶ್ಮೀರಿ ಪಂಡಿತರಿಗೆ ನೀಡಿದ ಬೆದರಿಕೆಯಲ್ಲಿ ಹೇಳಿದೆ.
“ಇದು ಕೇವಲ ಒಂದೇ ಇಲಾಖೆ ಅಲ್ಲ ಆದರೆ ಎಲ್ಲಾ ಇಲಾಖೆಗಳಲ್ಲಿ ಈ ದೆಹಲಿ ಪ್ರಾಯೋಜಿತ ಏಜೆಂಟ್‌ಗಳನ್ನು ನೇಮಕ ಮಾಡಲಾಗುತ್ತದೆ” ಎಂದು ಅದು ಹೇಳಿದೆ.
ಇದನ್ನೂ ಓದಿ: ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸಿದ್ದಕ್ಕಾಗಿ ಇರಾನ್ನ ಖ್ಯಾತ ನಟಿ ತರನೇಹ್ ಅಲಿದೂಸ್ತಿ ಬಂಧನ
“ಪಟ್ಟಿ ತುಂಬಾ ದೊಡ್ಡದಾಗಿದೆ. ಶೀಘ್ರದಲ್ಲೇ ಈ ದೇಶದ್ರೋಹಿಗಳ ರಕ್ತಪಾತವಾಗುತ್ತದೆ. ಇಲ್ಲಿ ನಾವು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇವೆ1990 ರ ದಶಕದಲ್ಲಿ ವಲಸೆ ಹೋಗದ ಮತ್ತು ಕಣಿವೆಯಲ್ಲಿಯೇ ಉಳಿದುಕೊಂಡಿರುವ ಕಾಶ್ಮೀರಿ ಪಂಡಿತರು ಚಿಂತಿಸಬೇಕಾಗಿಲ್ಲ” ಎಂದು ಟಿಆರ್ಎಫ್ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ