ಭಾರತದಲ್ಲಿ ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಳೆದ 24ಗಂಟೆಯಲ್ಲಿ 1,65,553 ಹೊಸ ಕೊವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 3460 ಮಂದಿ ಮೃತಪಟ್ಟಿದ್ದಾರೆ. ಅಲ್ಲಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ದೇಶದಲ್ಲಿ 3,25,972ಕ್ಕೆ ತಲುಪಿದೆ. ಹಾಗೇ ಕಳೆದ 24ಗಂಟೆಯಲ್ಲಿ 2,76,309 ಜನರು ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 21,14,508 ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೇ 29ರವರೆಗೆ 34,31,83,748 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಶೇ.50ರಷ್ಟು ಕುಸಿತ
ಅತ್ಯಂತ ಉಲ್ಬಣವಾಗಿದ್ದ ಕೊವಿಡ್ ಸೋಂಕಿನ ಪ್ರಮಾಣ ಕೇವಲ ಮೂರೇ ವಾರಗಳಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುವ ಪ್ರಮಾಣ ಮೇ 8ರಂದು ಉತ್ತುಂಗದಲ್ಲಿತ್ತು. ಅದೀಗ ಮೂರೇ ವಾರದಲ್ಲಿ ಶೇ.50ರಷ್ಟು ಇಳಿಕೆ ಕಂಡಿದೆ. ಒಂದು ದಿನದಲ್ಲಿ 3 ಲಕ್ಷದವರೆಗೆ ದಾಖಲಾಗುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ 1 ಲಕ್ಷಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಸಮಾಧಾನಕರ ಸಂಗತಿಯನ್ನು ತಿಳಿಸಿದೆ.
ಇದನ್ನೂ ಓದಿ: ನಕ್ಕು ನಗಿಸುವ ಕಪಿಲ್ ಶರ್ಮಾ ಶೋಗೆ ಹೊಸ ಟ್ವಿಸ್ಟ್; ಯಾವಾಗಿಂದ ಶುರು ಆಗಲಿದೆ ನಗೆ ಹಬ್ಬ?
Published On - 9:57 am, Sun, 30 May 21