ಟೆನ್ನಿಸ್ ಆಟದಲ್ಲಿ ಮಿಂಚಿದ್ದ ಲಿಯಾಂಡರ್ ಪೇಸ್ ತೃಣಮೂಲ ಕಾಂಗ್ರೆಸ್ ಸೇರ್ಪಡೆ; ದೀದಿ ಸಮ್ಮುಖದಲ್ಲಿ ಪಕ್ಷದ ಬಾವುಟ ಹಿಡಿದ ಟೆನ್ನಿಸ್ ಐಕಾನ್
ಟಿಎಂಸಿ ಸೇರ್ಪಡೆಯಾದ ಬಳಿಕ ಮಾತನಾಡಿದ ಲಿಯಾಂಡರ್ ಪೇಸ್, ನಾನು ಟೆನ್ನಿಸ್ನಿಂದ ನಿವೃತ್ತನಾಗಿದ್ದೇನೆ. ಇನ್ನು ಮುಂದೆ ರಾಜಕೀಯ ಎಂಬ ವಾಹನವನ್ನೇರಿ ಜನ ಸೇವೆ ಮಾಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ಬರುವ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ (Goa Assembly Election) ಸಮೀಪಿಸುತ್ತಿರುವ ಬೆನ್ನಲ್ಲೇ ಟೆನ್ನಿಸ್ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಇಂದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದರು. ಗೋವಾಕ್ಕೆ ಭೇಟಿ ನೀಡಿರುವ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಇಂದು ಟಿಎಂಸಿಗೆ ಸೇರಿದ್ದಾರೆ. ಅದಕ್ಕೂ ಮೊದಲು ಬಾಲಿವುಡ್ ನಟಿ ನಫೀಸಾ ಅಲಿ ಮತ್ತು ಮೃಣಾಲಿನಿ ದೇಶಪ್ರಭು ಇಂದು ಇಂದು ದೀದಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ನ್ನು ಸೇರ್ಪಡೆಯಾಗಿದ್ದಾರೆ.
ಟಿಎಂಸಿ ಸೇರ್ಪಡೆಯಾದ ಬಳಿಕ ಮಾತನಾಡಿದ ಲಿಯಾಂಡರ್ ಪೇಸ್, ನಾನು ಟೆನ್ನಿಸ್ನಿಂದ ನಿವೃತ್ತನಾಗಿದ್ದೇನೆ. ಇನ್ನು ಮುಂದೆ ರಾಜಕೀಯ ಎಂಬ ವಾಹನವನ್ನೇರಿ ಜನ ಸೇವೆ ಮಾಡಲು ನಿರ್ಧಾರ ಮಾಡಿದ್ದೇನೆ. ಮಮತಾ ಬ್ಯಾನರ್ಜಿ ನಿಜಕ್ಕೂ ಒಬ್ಬ ಚಾಂಪಿಯನ್ ಎಂದು ಹೇಳಿದರು. ಅವರಿಗೆ 48 ವರ್ಷ ವಯಸ್ಸಾಗಿದ್ದು, 2020ರಲ್ಲಿ ಟೆನ್ನಿಸ್ನಿಂದ ನಿವೃತ್ತರಾಗಿದ್ದಾರೆ.
We are extremely delighted to share that Shri @Leander joined us today in the presence of our Hon’ble Chairperson @MamataOfficial!
Together, we shall ensure that every single person in this nation sees the Dawn of Democracy that we have been waiting for since 2014!
— All India Trinamool Congress (@AITCofficial) October 29, 2021
ಬರುವ ವರ್ಷ ಗೋವಾದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿ ಬಿಜೆಪಿಯನ್ನು ಸೋಲಿಸಲು ಮುಂದಾಗಿರುವ ಮಮತಾ ಬ್ಯಾನರ್ಜಿ ನಿನ್ನೆಯಿಂದ ಮೂರು ದಿನಗಳ ಗೋವಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಇಂದು ಪಣಜಿಯಲ್ಲಿ ಮಾತನಾಡಿರುವ ಅವರು, ನನಗೆ ಗೋವಾದಲ್ಲಿ ಅಧಿಕಾರ ಬೇಡ..ನಾನಿಲ್ಲಿ ಮುಖ್ಯಮಂತ್ರಿ ಹುದ್ದೆ ಏರಲು ಬಂದವಳಲ್ಲ. ಆದರೆ ಇಲ್ಲಿ ಬಿಜೆಪಿ ಸರ್ಕಾರದ ದಾದಾಗಿರಿ ನಡೆಯುಲು ಬಿಡುವುದಿಲ್ಲ. ಇಲ್ಲಿನ ಜನರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಹಾಗೇ, ನಾಳೆ ಸುದ್ದಿಗೋಷ್ಠಿಯನ್ನೂ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: Puneeth Rajkumar: ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ
Home Loan: ಜಂಟಿಯಾಗಿ ಗೃಹ ಸಾಲ ಪಡೆಯುವುದರ ಲಾಭಗಳೇನು ಗೊತ್ತೆ? ಇಲ್ಲಿದೆ ಮಾಹಿತಿ
Published On - 2:31 pm, Fri, 29 October 21