ವಿಕ್ರಮ ಮತ್ತು ಬೇತಾಳನ ಕಥೆಗಳು ಖ್ಯಾತಿಯ ‘ಚಂದಮಾಮ’ ಕಲಾವಿದ ‘ಶಂಕರ’ ಇನ್ನಿಲ್ಲ
ಮೊಬೈಲ್ ಎಂಬ ಬ್ರಹ್ಮರಾಕ್ಷಸನ ಹಾವಳಿ ಇಲ್ಲದ ಕಾಲದಲ್ಲಿ.. ಅನೇಕ ಮಂದಿಯ ಬಾಲ್ಯದ ಬದುಕನ್ನು ಸಹ್ಯವಾಗಿಸಿದ್ದ, ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ, ತನ್ಮೂಲಕ ಬಾಲ್ಯದ ಜೀವನವನ್ನು ‘ಚಂದ’ವಾಗಿಸಿದ ‘ಚಂದಮಾಮ’ ಕಲಾವಿದ ‘ಶಂಕರ’ (ಕೆ ಸಿ ಶಿವಶಂಕರನ್) ಅವರು ಕೊನೆಯುಸಿರೆಳೆದಿದ್ದಾರೆ. ವಿಕ್ರಮ ಮತ್ತು ಬೇತಾಳನ ಕಥೆಗಳು ಕಥಾರೂಪಕಗಳಲ್ಲಿ ಸುಂದರವಾಗಿ ಮೂಡಿಬರುತ್ತಿದ್ದ ಕಲಾವಿದ ‘ಶಂಕರ’ ಅವರ ಅದ್ಭುತ ಚಿತ್ರಗಳು ನೇರವಾಗಿ ಮೆದುಳು ಮತ್ತು ಎದೆಗೆ ತಾಕುತ್ತಿದ್ದವು. ಅವರ ಚಿತ್ರಗಳು ಅಜರಾಮರ. ಕೆ ಸಿ ಶಿವಶಂಕರನ್, 1924ರಲ್ಲಿ ಈರೋಡ್ನಲ್ಲಿ […]
ಮೊಬೈಲ್ ಎಂಬ ಬ್ರಹ್ಮರಾಕ್ಷಸನ ಹಾವಳಿ ಇಲ್ಲದ ಕಾಲದಲ್ಲಿ.. ಅನೇಕ ಮಂದಿಯ ಬಾಲ್ಯದ ಬದುಕನ್ನು ಸಹ್ಯವಾಗಿಸಿದ್ದ, ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ, ತನ್ಮೂಲಕ ಬಾಲ್ಯದ ಜೀವನವನ್ನು ‘ಚಂದ’ವಾಗಿಸಿದ ‘ಚಂದಮಾಮ’ ಕಲಾವಿದ ‘ಶಂಕರ’ (ಕೆ ಸಿ ಶಿವಶಂಕರನ್) ಅವರು ಕೊನೆಯುಸಿರೆಳೆದಿದ್ದಾರೆ. ವಿಕ್ರಮ ಮತ್ತು ಬೇತಾಳನ ಕಥೆಗಳು ಕಥಾರೂಪಕಗಳಲ್ಲಿ ಸುಂದರವಾಗಿ ಮೂಡಿಬರುತ್ತಿದ್ದ ಕಲಾವಿದ ‘ಶಂಕರ’ ಅವರ ಅದ್ಭುತ ಚಿತ್ರಗಳು ನೇರವಾಗಿ ಮೆದುಳು ಮತ್ತು ಎದೆಗೆ ತಾಕುತ್ತಿದ್ದವು. ಅವರ ಚಿತ್ರಗಳು ಅಜರಾಮರ.
ಕೆ ಸಿ ಶಿವಶಂಕರನ್, 1924ರಲ್ಲಿ ಈರೋಡ್ನಲ್ಲಿ ಜನಿಸಿದರು. ಅವರ ತಂದೆ ಶಾಲಾ ಮಾಸ್ತರರಾಗಿದ್ದರು. ಮದ್ರಾಸಿನ ಕಾರ್ಪೊರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಶಂಕರ ಅವರ ಕೈಬರಹ ಅದ್ಭುತವಾಗಿತ್ತು. ಮುಂದೆ ಆ ಕೈಬರಹವೇ ಚಿತ್ರಕಾರನನ್ನಾಗಿ ಅವರ ರಚಿಸಿದ್ದು.
ಮುಂದೆ ತಂದೆ ಸೇರಿದಂತೆ ಅನೇಕ ಹಿತೈಷಿಗಳ ಮಾರ್ಗದರ್ಶನದಂತೆ ಬಾಲ ಶಂಕರ ಪದವಿ ಶಿಕ್ಷಣ ಪಡೆಯದೆ, ಫೈನ್ ಆರ್ಟ್ಸ್ ಕಾಲೇಜು ಸೇರಿಕೊಂಡು ಒಂದಷ್ಟು ಕಲೆ ಕಲೆತರು.
ಆ ಮೇಲೆ 1952ರ ವೇಳೆಗೆ ಮಾಸಿಕ 350 ರೂಪಾಯಿ ಸಂಬಳಕ್ಕೆ ಚಂದಮಾಮ ಮಾಸಿಕ ಪತ್ರಿಕೆ ಸೇರಿಕೊಂಡು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಂಡರು. ಜೊತೆಗೆ ಅನೇಕ ಕಲಾವಿದರಿಗೆ ಪ್ರೇರಕರಾದರು. ಅನೇಕ ಬಾಲ ಓದುಗರಿಗೆ ಸುಂದರ ಭವಿಷ್ಯದ ಪರಿಕಲ್ಪನೆ ಕಟ್ಟಿಕೊಟ್ಟರು. ಇಂತಹ ’ಚಂದಮಾಮ’ ಕಲಾವಿದ ‘ಶಂಕರ’ ತಾತಾ ನಿನ್ನೆ ತಮ್ಮ 97ನೇ ವಯಸ್ಸಿನಲ್ಲಿ ವಿಧಿವಶರಾದರು.
Published On - 5:32 am, Wed, 30 September 20