ದೆಹಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ 400 ಖಾಸಗಿ ವ್ಯಕ್ತಿಗಳನ್ನು ಸೇವೆಯಿಂದ ವಜಾ ಮಾಡಿದ ಎಲ್ಜಿ
ನೇಮಕಾತಿ ಮಾಡುವಾಗ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸೂಚಿಸಿದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕಡ್ಡಾಯ ಮೀಸಲಾತಿ ನೀತಿಯನ್ನು ಅನುಸರಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೆಹಲಿಯ (Delhi) ವಿವಿಧ ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸೊಸೈಟಿಗಳು ಮತ್ತು ಪಿಎಸ್‌ಯುಗಳಲ್ಲಿ ತಜ್ಞರಾಗಿ ತೊಡಗಿಸಿಕೊಂಡಿರುವ ಸುಮಾರು 400 ಖಾಸಗಿ ವ್ಯಕ್ತಿಗಳ ಸೇವೆಯನ್ನು ವಜಾಗೊಳಿಸುವಂತೆ ಲೆಫ್ಟಿನೆಂಟ್ ಗವರ್ನರ್ (Lieutenant governor) ವಿಕೆ ಸಕ್ಸೇನಾ (VK Saxena) ಅವರು ಸೋಮವಾರ ಆದೇಶ ನೀಡಿದ್ದಾರೆ. ಪ್ರಾಧಿಕಾರದ ಕಡ್ಡಾಯ ಅನುಮೋದನೆಗಳಿಲ್ಲದೆ ಪಾರದರ್ಶಕವಲ್ಲದ ರೀತಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ನೇಮಕಾತಿ ಮಾಡುವಾಗ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸೂಚಿಸಿದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕಡ್ಡಾಯ ಮೀಸಲಾತಿ ನೀತಿಯನ್ನು ಅನುಸರಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೆಹಲಿ ಸರ್ಕಾರವು ಫೆಲೋಗಳು/ಅಸೋಸಿಯೇಟ್ ಫೆಲೋಗಳು/ಸಲಹೆಗಾರರು/ಉಪ ಸಲಹೆಗಾರರು/ತಜ್ಞರು/ಹಿರಿಯ ಸಂಶೋಧನಾ ಅಧಿಕಾರಿಗಳು/ಸಮಾಲೋಚಕರು ಇತ್ಯಾದಿಯಾಗಿ ತೊಡಗಿಸಿಕೊಂಡಿರುವ ಸುಮಾರು 400 ಖಾಸಗಿ ವ್ಯಕ್ತಿಗಳ ಸೇವೆಗಳನ್ನು ತಕ್ಷಣವೇ ವಜಾಗೊಳಿಸುವ ಸೇವಾ ಇಲಾಖೆಯ ಪ್ರಸ್ತಾವನೆಗೆ ದೆಹಲಿಯ ಎಲ್ ಜಿ, ವಿಕೆ ಸಕ್ಸೇನಾ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಎಲ್ ಜಿ ಕಚೇರಿ ಹೇಳಿಕೆ ತಿಳಿಸಿದೆ.
ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಲಭ್ಯವಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 pm, Mon, 3 July 23