Lithium In Rajasthan: ರಾಜಸ್ಥಾನದಲ್ಲಿ ಲೀಥಿಯಂ ಬೃಹತ್ ನಿಕ್ಷೇಪ ಪತ್ತೆ, ಇನ್ಮುಂದೆ ಚೀನಾ ಮೇಲಿನ ಅವಲಂಬನೆ ಕಡಿಮೆಯಾಗುವುದೇ?

|

Updated on: May 09, 2023 | 10:52 AM

ರಾಜಸ್ಥಾನದಲ್ಲಿ ಲೀಥಿಯಂ(Lithium)ನ ಬೃಹತ್ ನಿಕ್ಷೇಪ ಪತ್ತೆಯಾಗಿದೆ, ಇದು ದೇಶದ ಒಟ್ಟು ಬೇಡಿಕೆಯ 80 ಪ್ರತಿಶತವನ್ನು ಪೂರೈಸುತ್ತದೆ ಎಂದು ಹೇಳಲಾಗುತ್ತಿದೆ.

Lithium In Rajasthan: ರಾಜಸ್ಥಾನದಲ್ಲಿ ಲೀಥಿಯಂ ಬೃಹತ್ ನಿಕ್ಷೇಪ ಪತ್ತೆ, ಇನ್ಮುಂದೆ ಚೀನಾ ಮೇಲಿನ ಅವಲಂಬನೆ ಕಡಿಮೆಯಾಗುವುದೇ?
ಲೀಥಿಯಂ
Image Credit source: ABP Live
Follow us on

ರಾಜಸ್ಥಾನದಲ್ಲಿ ಲೀಥಿಯಂ(Lithium)ನ ಬೃಹತ್ ನಿಕ್ಷೇಪ ಪತ್ತೆಯಾಗಿದೆ, ಇದು ದೇಶದ ಒಟ್ಟು ಬೇಡಿಕೆಯ 80 ಪ್ರತಿಶತವನ್ನು ಪೂರೈಸುತ್ತದೆ ಎಂದು ಹೇಳಲಾಗುತ್ತಿದೆ. ನಾಗೌರ್ ಜಿಲ್ಲೆಯ ದೇಗಾನಾ ಪ್ರದೇಶದಲ್ಲಿ ಈ ಲೀಥಿಯಂ ಪತ್ತೆಯಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪವನ್ನು ಆವಿಷ್ಕರಿಸಿದೆ. ಲೀಥಿಯಂ ನಿಕ್ಷೇಪಗಳ ಸಾಮರ್ಥ್ಯವು ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವದಲ್ಲಿರುವ ನಿಕ್ಷೇಪಗಳಿಗಿಂತ ಹೆಚ್ಚು ಎನ್ನಲಾಗಿದೆ.

ಈ ಪ್ರಮುಖ ಆವಿಷ್ಕಾರವು ಚೀನಾದ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಸಾಬೀತುಪಡಿಸಬಹುದು.

ಈ ಅಮೂಲ್ಯ ನಿಧಿ ಈಗ ದೇಶದ ಅತಿದೊಡ್ಡ ಲೀಥಿಯಂ ನಿಕ್ಷೇಪ ಎಂದು ಹೇಳಲಾಗುತ್ತಿದೆ. ಅದರ ಆವಿಷ್ಕಾರದಿಂದ, ಅದಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ಭರವಸೆಯ ಅಲೆ ಮೂಡಿದೆ.

ಮತ್ತಷ್ಟು ಓದಿ: Lithium Reserves: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಮೊದಲ ಲಿಥಿಯಂ ನಿಕ್ಷೇಪಗಳು ಪತ್ತೆ

ದೇಶದಲ್ಲಿ ಲೀಥಿಯಂ ನಿಕ್ಷೇಪಗಳು ಮತ್ತು ಉತ್ಪಾದನೆಯು ಎಲೆಕ್ಟ್ರಿಕ್ ವಾಹನಗಳ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದು ಮುಂಬರುವ ದಿನಗಳಲ್ಲಿ EV ವಾಹನ ಮಾರುಕಟ್ಟೆ ಮತ್ತು ಅದರ ಗ್ರಾಹಕರಿಗೆ ನೇರವಾಗಿ ಪ್ರಯೋಜನವನ್ನು ನೀಡಲಿದೆ. ರಾಜಸ್ಥಾನದ ಜೊತೆಗೆ ಜಮ್ಮು-ಕಾಶ್ಮೀರ, ಮೇಘಾಲಯ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಲಿಥಿಯಂ ಹುಡುಕಾಟ ನಡೆಯುತ್ತಿದೆ.

ಭಾರತವು ಇನ್ನೂ ಲೀಥಿಯಂಗಾಗಿ ಚೀನಾವನ್ನು ಅವಲಂಬಿಸಿದೆ. ಆದರೆ, ರಾಜಸ್ಥಾನದಲ್ಲಿ ಈ ನಿಕ್ಷೇಪ ಪತ್ತೆಯಾಗುವುದರೊಂದಿಗೆ ಚೀನಾದ ಏಕಸ್ವಾಮ್ಯ ಕೊನೆಗೊಳ್ಳಲಿದೆ . ಲೀಥಿಯಂ ಒಂದು ನಾನ್-ಫೆರಸ್ ಲೋಹವಾಗಿದೆ, ಇದನ್ನು ಮೊಬೈಲ್-ಲ್ಯಾಪ್‌ಟಾಪ್, ಎಲೆಕ್ಟ್ರಿಕ್ ವಾಹನ ಮತ್ತು ಇತರ ಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ಭಾರತವು ಲೀಥಿಯಂಗಾಗಿ ದುಬಾರಿ ವಿದೇಶಿ ಪೂರೈಕೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ