ಪಂಜಾಬ್: ಐಸ್ಕ್ರೀಂನಲ್ಲಿ ಹಲ್ಲಿ ಪತ್ತೆ, ಆದರೂ ಮಾರಾಟ ಮುಂದುವರೆಸಿದ ವ್ಯಾಪಾರಿ, ತೀವ್ರ ಆಕ್ರೋಶ
ಬೀದಿ ಬದಿ ವ್ಯಾಪಾರಿಯಿಂದ ಖರೀದಿಸಿದ ಐಸ್ಕ್ರೀಂನಲ್ಲಿ ಹಲ್ಲಿ(Lizard) ಪತ್ತೆಯಾಗಿರುವ ಘಟನೆ ಪಂಜಾಬ್ನ ಲುಧಿಯಾನಾದಲ್ಲಿ ನಡೆದಿದೆ. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಮಧ್ಯೆಯೂ ವ್ಯಾಪಾರಿ ಮಾರಾಟವನ್ನು ಮುಂದುವರೆಸಿದ್ದಾರೆ. 7 ವರ್ಷದ ಬಾಲಕನೊಬ್ಬ ಮಿಲ್ಕ್ ಬೆಲ್ ಹೆಸರಿನ ಗಾಡಿಯಿಂದ 20 ರೂ.ಗೆ ಎರಡು ಚಾಕೋ ಬಾರ್ ಖರೀದಿಸಿದ್ದ. ತಿನ್ನುವಾಗ ಅದರಲ್ಲಿ ಹಲ್ಲಿ ಇರುವುದನ್ನು ಗಮನಿಸಿದ್ದ.ತಕ್ಷಣ ತನ್ನ ಅಜ್ಜಿಗೆ ವಿಷಯ ತಿಳಿಸಿದ್ದ.ಲುಧಿಯಾನದ ಸುಂದರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವಿಷಯ ತಿಳಿದು ಬಂದ ನಂತರ, ಆತಂಕಗೊಂಡ ಸ್ಥಳೀಯರು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡರು.

ಲುಧಿಯಾನ, ಜೂನ್ 10: ಬೀದಿ ಬದಿ ವ್ಯಾಪಾರಿಯಿಂದ ಖರೀದಿಸಿದ ಐಸ್ಕ್ರೀಂನಲ್ಲಿ ಹಲ್ಲಿ(Lizard) ಪತ್ತೆಯಾಗಿರುವ ಘಟನೆ ಪಂಜಾಬ್ನ ಲುಧಿಯಾನಾದಲ್ಲಿ ನಡೆದಿದೆ. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಮಧ್ಯೆಯೂ ವ್ಯಾಪಾರಿ ಮಾರಾಟವನ್ನು ಮುಂದುವರೆಸಿದ್ದಾರೆ. 7 ವರ್ಷದ ಬಾಲಕನೊಬ್ಬ ಮಿಲ್ಕ್ ಬೆಲ್ ಹೆಸರಿನ ಗಾಡಿಯಿಂದ 20 ರೂ.ಗೆ ಎರಡು ಚಾಕೋ ಬಾರ್ ಖರೀದಿಸಿದ್ದ.
ತಿನ್ನುವಾಗ ಅದರಲ್ಲಿ ಹಲ್ಲಿ ಇರುವುದನ್ನು ಗಮನಿಸಿದ್ದ.ತಕ್ಷಣ ತನ್ನ ಅಜ್ಜಿಗೆ ವಿಷಯ ತಿಳಿಸಿದ್ದ.ಲುಧಿಯಾನದ ಸುಂದರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವಿಷಯ ತಿಳಿದು ಬಂದ ನಂತರ, ಆತಂಕಗೊಂಡ ಸ್ಥಳೀಯರು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡರು.ವ್ಯಾಪಾರ ನಿಲ್ಲಿಸುವಂತೆ ಹೇಳಿದ್ದರು, ಆದರೂ ಆತ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ.ಐಸ್ಕ್ರೀಂ ಕಾರ್ಖಾನೆಯಲ್ಲಿ ಮಾಡಿದ್ದಾರೆ, ತಾನು ಮಾಡಿಲ್ಲ ಎಂದು ಹೇಳಿದ್ದಾರೆ.
ಆ ಪ್ರದೇಶದಲ್ಲಿ ಐಸ್ಕ್ರೀಂ ಮಾರಾಟ ಮಾಡುವುದನ್ನು ಮುಂದುವರೆಸಿದ್ದರು.ದು ನಿವಾಸಿಗಳನ್ನು ಮತ್ತಷ್ಟು ಕೆರಳಿಸಿತು. ಮಾರಾಟವನ್ನು ನಿಲ್ಲಿಸುವಂತೆ ಅಜ್ಜಿ ಮಾಡಿದ ಮನವಿಯನ್ನು ಪಾಲಿಸಲು ನಿರಾಕರಿಸಿದ ನಂತರ ಸ್ಥಳೀಯರು ಅವನನ್ನು ಮತ್ತೆ ತಡೆದರು. ಬಾಲಕನ ಸ್ಥಿತಿ ಹದಗೆಡದಂತೆ ತಡೆಯಲು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ: ಹಲ್ಲಿ ನಿಮ್ಮ ದೇಹದ ಯಾವ ಭಾಗಗಳ ಮೇಲೆ ಬಿದ್ದರೆ ಏನರ್ಥ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ
ಆರೋಗ್ಯ ಅಧಿಕಾರಿಗಳು ಸಹ ಈ ಘಟನೆಯನ್ನು ಗಮನಿಸಿದ್ದಾರೆ. ಇದರ ಮೂಲವನ್ನು ನಿರ್ಧರಿಸಲು ಜೂನ್ 10 ರಂದು ಪರೀಕ್ಷೆಗಾಗಿ ಐಸ್ ಕ್ರೀಂನ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ (DHO) ದೃಢಪಡಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ