ಕನ್ವರ್ ಯಾತ್ರಾ ಮಾರ್ಗದಲ್ಲಿ ಆಹಾರ ಮಾರುವವರಿಗೆ ಯುಪಿ ಸರ್ಕಾರದ ನಿಯಮ; ವಿರೋಧ ವ್ಯಕ್ತಪಡಿಸಿದ ಚಿರಾಗ್ ಪಾಸ್ವಾನ್

|

Updated on: Jul 19, 2024 | 5:00 PM

ಕನ್ವರ್ ಯಾತ್ರಾ ಮಾರ್ಗದಲ್ಲಿ ಆಹಾರ ಮಾರುವವರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಹೇಳಿದ ಯುಪಿ ಪೊಲೀಸರ ಸಲಹೆಗೆ ಪ್ರತಿಕ್ರಯಿಸಿದ ಚಿರಾಗ್ ಪಾಸ್ವಾನ್, ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ವರ್ಗದ ಜನರು ಇದ್ದಾರೆ. ವಿವಿಧ ಜಾತಿಗಳು ಮತ್ತು ಧರ್ಮಗಳ ವ್ಯಕ್ತಿಗಳು ಎರಡೂ ವರ್ಗಗಳಲ್ಲಿ ಇರುತ್ತಾರೆ. ನಾವು ಈ ಎರಡು ವರ್ಗದ ಜನರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಕನ್ವರ್ ಯಾತ್ರಾ ಮಾರ್ಗದಲ್ಲಿ ಆಹಾರ ಮಾರುವವರಿಗೆ ಯುಪಿ ಸರ್ಕಾರದ ನಿಯಮ; ವಿರೋಧ ವ್ಯಕ್ತಪಡಿಸಿದ ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್
Follow us on

ದೆಹಲಿ ಜುಲೈ 19: ಕನ್ವರ್ ಯಾತ್ರಾ (Kanwar Yatra) ಮಾರ್ಗದಲ್ಲಿ ಆಹಾರ ಮಾರುವವರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಲು ಮುಜಾಫರ್‌ನಗರದ (Muzaffarnagar) ಪೊಲೀಸ್ ಸಲಹೆಗೆ ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಚಿರಾಗ್ ಪಾಸ್ವಾನ್ ಪೊಲೀಸರ ಸಲಹೆಗೆ ನನ್ನ ಸಹಮತ ಇಲ್ಲ, “ಜಾತಿ ಅಥವಾ ಧರ್ಮದ ಹೆಸರಿನಲ್ಲಿ ವಿಭಜನೆಯನ್ನು” ಸೃಷ್ಟಿಸುವ ಯಾವುದನ್ನೂ ನಾನೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ನೀವು ಸಲಹೆಯನ್ನು ಬೆಂಬಲಿಸುತ್ತೀರಾ ಎಂದು ಕೇಳಿದಾಗ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷರು “ಇಲ್ಲ, ನಾನು ಇದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ವರ್ಗದ ಜನರು ಇದ್ದಾರೆ. ವಿವಿಧ ಜಾತಿಗಳು ಮತ್ತು ಧರ್ಮಗಳ ವ್ಯಕ್ತಿಗಳು ಎರಡೂ ವರ್ಗಗಳಲ್ಲಿ ಇರುತ್ತಾರೆ. ನಾವು ಈ ಎರಡು ವರ್ಗದ ಜನರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ. ದಲಿತರು, ಹಿಂದುಳಿದವರು, ಮೇಲ್ಜಾತಿಗಳು ಮತ್ತು ಮುಸ್ಲಿಮರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಿರುವ ಬಡವರಿಗಾಗಿ ಕೆಲಸ ಮಾಡುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲರೂ ಇದ್ದಾರೆ. ಅವರಿಗಾಗಿ ನಾವು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಪಾಸ್ವಾನ್.

“ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಇಂತಹ ವಿಭಜನೆ ಉಂಟಾದಾಗ, ನಾನು ಅದನ್ನು ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ. ನನ್ನ ವಯಸ್ಸಿನ ಯಾವುದೇ ವಿದ್ಯಾವಂತ ಯುವಕರು ಅವರು ಜಾತಿ ಅಥವಾ ಧರ್ಮವನ್ನು ಪರಿಗಣಿಸುವುದಿಲ್ಲ, ಮತ್ತು ಅಂಥಾ ವಿಷಯಗಳಿಂದ ಪ್ರಭಾವಿತರಾಗುತ್ತಾರೆ ಎಂದು ಭಾವಿಸುತ್ತಿಲ್ಲ ಎಂದಿದ್ದಾರೆ.

ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಜನತಾ ದಳ (ಯುನೈಟೆಡ್) ಈಗಾಗಲೇ ಮುಜಾಫರ್‌ನಗರ ಆದೇಶವನ್ನು ಪರಿಶೀಲಿಸುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದೆ.

ಇದಕ್ಕಿಂತ ದೊಡ್ಡ ಕನ್ವರ್ ಯಾತ್ರೆ  ಬಿಹಾರದಲ್ಲಿ ನಡೆಯುತ್ತದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. “ಅಲ್ಲಿ ಅಂತಹ ಯಾವುದೇ ಆದೇಶ ಜಾರಿಯಲ್ಲಿಲ್ಲ. ವಿಧಿಸಲಾಗಿರುವ ಈ ನಿರ್ಬಂಧಗಳು ಪ್ರಧಾನಿ ಮಾತನಾಡುವ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ದ ಉಲ್ಲಂಘನೆಯಾಗಿದೆ. ಈ ಆದೇಶವು ಬಿಹಾರ ಅಥವಾ ರಾಜಸ್ಥಾನ ಮತ್ತು ಜಾರ್ಖಂಡ್‌ನಲ್ಲಿ ಜಾರಿಯಲ್ಲಿಲ್ಲ. ಈ ಆದೇಶವನ್ನು ಹಿಂಪಡೆಯುವುದು ಒಳ್ಳೆಯದು ಎಂದು ಕೆಸಿ ತ್ಯಾಗಿ ಹೇಳಿದ್ದಾರೆ.

ಬಿಜೆಪಿಯ ಮತ್ತೊಂದು ಮಿತ್ರ ಪಕ್ಷ ಜಯಂತ್ ಚೌಧರಿ ಅವರ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮಾರಾಟಗಾರರಿಗೆ ನಾಮಫಲಕಗಳನ್ನು ತೋರಿಸಲು ಹೇಳುವ ಆದೇಶವು ಸಂಪೂರ್ಣವಾಗಿ ತಪ್ಪು ಎಂದು ಹೇಳಿದರು.

ಯಾರಾದರೂ ಬೀದಿ ಬಂಡಿಗಳಲ್ಲಿ ಅವರ ಹೆಸರನ್ನು ಬರೆಯುವಂತೆ ಯಾಕೆ ಕೇಳುತ್ತೀರಿ? ಅವರಿಗೆ ಕೆಲಸ ಮಾಡುವ ಹಕ್ಕಿದೆ. ಈ ಸಂಪ್ರದಾಯ ಸಂಪೂರ್ಣ ತಪ್ಪು. ಇದು ಗ್ರಾಹಕನಿಗೆ ಬಿಟ್ಟದ್ದು, ಅವರು ಎಲ್ಲಿ ಬೇಕಾದರೂ ಖರೀದಿ ಮಾಡಬಹುದು. ನಾನು ರಾಜಕಾರಣಿಗಳಲ್ಲಿ ಕೇಳುತ್ತಿದ್ದೇನೆ. ಮದ್ಯಪಾನವು ನಿಮ್ಮನ್ನು ಧಾರ್ಮಿಕವಾಗಿ ಭ್ರಷ್ಟಗೊಳಿಸುವುದಿಲ್ಲವೇ? ಮಾಂಸವನ್ನು ಸೇವಿಸಿದಾಗ ಮಾತ್ರ ಇದು ಸಂಭವಿಸುತ್ತದೆಯೇ? ಹಾಗಾದರೆ ಮದ್ಯಪಾನ ನಿಷೇಧ ಏಕೆ ಇಲ್ಲ? ಅವರು ಮದ್ಯದ ಬಗ್ಗೆ ಏಕೆ ಮಾತನಾಡುವುದಿಲ್ಲ? ವ್ಯಾಪಾರ ಮಾಡುವವರಿಗೆ ನಂಟು ಇರುವುದರಿಂದ ಅದು ಶಕ್ತಿಶಾಲಿಗಳ ಆಟ. ಈ ಸಣ್ಣ ಅಂಗಡಿಗಳನ್ನು ಬಡವರು ಸ್ಥಾಪಿಸಿದ್ದಾರೆ. ಆದ್ದರಿಂದ, ನೀವು ಅವರತ್ತ ಬೆರಳು ತೋರಿಸುತ್ತಿದ್ದೀರಿ. ನಾನು ಮದ್ಯಪಾನವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಆರ್‌ಎಲ್‌ಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ಒಂದು ಗ್ರಾಂ ಡ್ರಗ್ಸ್ ಕೂಡ ಭಾರತಕ್ಕೆ ಬರಲು, ಭಾರತದಿಂದ ಹೋಗಲು ಬಿಡುವುದಿಲ್ಲ; ಅಮಿತ್ ಶಾ

ಇಂದು (ಶುಕ್ರವಾರ) ಬೆಳಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾತ್ರಾರ್ಥಿಗಳ ನಂಬಿಕೆಯ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಕನ್ವರ್ ಮಾರ್ಗಗಳಲ್ಲಿ ಆಹಾರ ಮತ್ತು ಪಾನೀಯ ಅಂಗಡಿಗಳು ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸಬೇಕು ಎಂದು ಆದೇಶಿಸಿದ್ದಾರೆ. ಹೆಚ್ಚುವರಿಯಾಗಿ, ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ