ಆಗಸ್ಟ್ 31 ರಂದು ಇಂಡಿಯಾ ಲೋಗೋ ಅನಾವರಣ ಸಾಧ್ಯತೆ: ಕಾಂಗ್ರೆಸ್ ನಾಯಕ ಅಶೋಕ್ ಚವಾಣ್

|

Updated on: Aug 26, 2023 | 8:09 PM

ಆಗಸ್ಟ್ 31 ರಂದು ಮುಂಬೈನಲ್ಲಿ ನಡೆಯಲಿರುವ ಬಣದ ಮೂರನೇ ಜಂಟಿ ಸಭೆಯಲ್ಲಿ ಸುಮಾರು 26-27 ವಿರೋಧ ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದರು. ಮೊದಲ ಸಭೆಯು ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಎರಡನೆಯದು ಬೆಂಗಳೂರಿನಲ್ಲಿ ನಡೆದಿತ್ತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು 26 ವಿರೋಧ ಪಕ್ಷಗಳು ಕಳೆದ ತಿಂಗಳು ಸಮ್ಮಿಶ್ರ ಇಂಡಿಯಾ ಮೈತ್ರಿಕೂಟ ರಚಿಸಿದವು

ಆಗಸ್ಟ್ 31 ರಂದು ಇಂಡಿಯಾ ಲೋಗೋ ಅನಾವರಣ ಸಾಧ್ಯತೆ: ಕಾಂಗ್ರೆಸ್ ನಾಯಕ ಅಶೋಕ್ ಚವಾಣ್
ಅಶೋಕ್ ಚೌಹಾಣ್
Follow us on

ದೆಹಲಿ ಆಗಸ್ಟ್ 26: ಮುಂಬೈನಲ್ಲಿ ನಡೆಯಲಿರುವ ಮೈತ್ರಿಕೂಟದ ಮೂರನೇ ಜಂಟಿ ಸಭೆಯಲ್ಲಿ ಹೊಸದಾಗಿ ರಚನೆಯಾದ ಇಂಡಿಯಾದ (INDIA) ಲೋಗೋವನ್ನು ಆಗಸ್ಟ್‌ 31ರಂದು ಅನಾವರಣ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ (Congress) ನಾಯಕ ಅಶೋಕ್ ಚವಾಣ್ (Ashok Chavan)ಹೇಳಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚವಾಣ್, ಸುಮಾರು 26 ರಿಂದ 27 ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ಆಗಸ್ಟ್ 31 ರಂದು ಸಂಜೆ ಮುಂಬೈನಲ್ಲಿ ಅನೌಪಚಾರಿಕ ಸಭೆ ಮತ್ತು ಸೆಪ್ಟೆಂಬರ್ 1 ರಂದು ಔಪಚಾರಿಕ ಸಭೆ ನಡೆಯಲಿದೆ. ಇಲ್ಲಿಯವರೆಗೆ ಎರಡು ಸಭೆಗಳನ್ನು ಆಯೋಜಿಸಲಾಗಿದೆ. ಆದ್ದರಿಂದ ಈ ಮೂರನೇ ಸಭೆಯಲ್ಲಿ ಮುಂದಿನ ಕಾರ್ಯಸೂಚಿಯನ್ನು ಚರ್ಚಿಸಲಾಗುವುದು. ನಾವು ಸಾಮಾನ್ಯ ಲೋಗೋ ಮಾಡಲು ನಿರ್ಧರಿಸಿದ್ದು ಆಗಸ್ಟ್ 31 ರಂದು ಅದನ್ನು ಅನಾವರಣಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಆಗಸ್ಟ್ 31 ರಂದು ಮುಂಬೈನಲ್ಲಿ ನಡೆಯಲಿರುವ ಬಣದ ಮೂರನೇ ಜಂಟಿ ಸಭೆಯಲ್ಲಿ ಸುಮಾರು 26-27 ವಿರೋಧ ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದರು. ಮೊದಲ ಸಭೆಯು ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಎರಡನೆಯದು ಬೆಂಗಳೂರಿನಲ್ಲಿ ನಡೆದಿತ್ತು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ನಂತರ ಮೈತ್ರಿಕೂಟದ ಪ್ರಧಾನಿ ಹುದ್ದೆಗೆ ಹೆಸರು ಬಹಿರಂಗ ಪಡಿಸಲಾಗುವುದು ಎಂದು ಪಕ್ಷದ ನಾಯಕ ಪಿಎಲ್ ಪುನಿಯಾ ಈ ಹಿಂದೆ ಹೇಳಿದ್ದರು. ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದ ನಂತರ ಪ್ರಧಾನಿಯನ್ನು ನಿರ್ಧರಿಸುತ್ತದೆ. ಚುನಾಯಿತ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು 26 ವಿರೋಧ ಪಕ್ಷಗಳು ಕಳೆದ ತಿಂಗಳು ಸಮ್ಮಿಶ್ರ ಇಂಡಿಯಾ ಮೈತ್ರಿಕೂಟ ರಚಿಸಿದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂಡಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ.

ಹೊಸದಾಗಿ ರೂಪುಗೊಂಡ ಮೈತ್ರಿಕೂಟವು ಜಾತಿ ಗಣತಿ, ಮಣಿಪುರ ಹಿಂಸಾಚಾರದಿಂದ ಹಿಡಿದು ರಾಜ್ಯಪಾಲರು ಮತ್ತು ಎಲ್‌ಜಿಗಳ ಪಾತ್ರ ಮತ್ತು ನೋಟು ಅಮಾನ್ಯೀಕರಣದವರೆಗಿನ ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸುವ ‘ಸಾಮೂಹಿಕ ಸಂಕಲ್ಪ್’ ಘೋಷಣೆಯನ್ನು ಸಹ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರನ್ನು ಸ್ವಾಗತಿಸುವ ಪ್ರೋಟೊಕಾಲ್ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಗೃಹ ಸಚಿವ ಪರಮೇಶ್ವರ್ ಗೊತ್ತಿಲ್ಲ ಎಂದುತ್ತರಿಸಿದರು!

ಇದರಲ್ಲಿರುವ 26 ವಿರೋಧ ಪಕ್ಷಗಳೆಂದರೆ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಜೆಎಂಎಂ, ಎನ್‌ಸಿಪಿ (ಶರದ್ ಪವಾರ್), ಶಿವಸೇನೆ (ಯುಬಿಟಿ), ಎಸ್‌ಪಿ, ಎನ್‌ಸಿ, ಪಿಡಿಪಿ, ಸಿಪಿಐ(ಎಂ), ಸಿಪಿಐ, ಆರ್‌ಎಲ್‌ಡಿ , MDMK, ಕೊಂಗುನಾಡು ಮಕ್ಕಳ್ ದೇಶಿಯಾ ಕಚ್ಚಿ (KMDK), VCK, RSP, CPI-ML (ಲಿಬರೇಶನ್), ಫಾರ್ವರ್ಡ್ ಬ್ಲಾಕ್, ಐಯುಎಂಲ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಾಣಿ), ಅಪ್ನಾ ದಳ (ಕಾಮೆರವಾಡಿ), ಮತ್ತು ಮನಿತಾನೇಯ ಮಕ್ಕಳ್ ಕಚ್ಚಿ (ಎಂಎಂಕೆ).

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ