ದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್ಡೌನ್ನಿಂದ ಆರ್ಥಿಕ ತೊಂದರೆಗೊಳಗಾದ ಬಡವರಿಗೆ ಪ್ರತಿ ತಿಂಗಳು 6 ಸಾವಿರ ಸಹಾಯಧನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಲೋಕಸಭೆಯಲ್ಲಿನ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಲಾಕ್ಡೌನ್ ಜಾರಿಯಲ್ಲಿರುವ ರಾಜ್ಯಗಳ ಬಡಜನರಿಗೆ ಸಹಾಯ ಧನ ನೀಡುವುದು ಲಕ್ಷಾಂತರ ಬಡವರ ನೋವುಗಳನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು. ದೇಶದ ಆರ್ಥಿಕ ಸ್ಥಿತಿಯ ಮೇಲೂ ಇದು ಪರಿಣಾಮ ಬೀರಬಲ್ಲದು ಎಂದು ಅವರು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಲಾಕ್ಡೌನ್ ಇರುವ ರಾಜ್ಯಗಳಲ್ಲಿ ಬಡವರು ತಮ್ಮ ಕುಟುಂಬಕ್ಕೆ ಅಗತ್ಯ ಆಹಾರ ವಸ್ತುಗಳನ್ನು ಕೊಳ್ಳಲೂ ತೊಂದರೆಗೀಡಾಗಿರಬಹುದು. ಸಾವಿರಾರು ಜನರ ಉದ್ಯೋಗ ನಷ್ಟ ಸಂಭವಿಸಿರಬಹುದು. ಅಂತಹ ಕುಟುಂಬಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತವೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಸಹ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ತಕ್ಷಣವೇ ಲಾಕ್ಡೌನ್ ಜಾರಿಯಲ್ಲಿರುವ ರಾಜ್ಯಗಳ ಬಡಜನರಿಗೆ ಪ್ರತಿ ತಿಂಗಳು 6 ಸಾವಿರ ಸಹಾಯಧನ ಒದಗಿಸುವಂತೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Leader of Congress party in Lok Sabha, Adhir Ranjan Chowdhury writes to PM Narendra Modi, urging to provide Rs 6000/month to the poor in the states under lockdown pic.twitter.com/hzkjRwsY1s
— ANI (@ANI) May 16, 2021
ಇದನ್ನೂ ಓದಿ: ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ