ಚುನಾವಣೆಯಲ್ಲಿ ಮಗ ಸೋಲಲಿ ಎಂದು ಶಾಪ ಹಾಕಿದ ಕಾಂಗ್ರೆಸ್​ನ ಹಿರಿಯ ನಾಯಕ ಎಕೆ ಆಂಟನಿ

|

Updated on: Apr 09, 2024 | 3:18 PM

ಇತ್ತೀಚೆಗೆಷ್ಟೇ ಬಿಜೆಪಿಗೆ ಸೇರಿರುವ ಅನಿಲ್ ಆಂಟನಿ(Anil Antony) ಚುನಾವಣೆಯಲ್ಲಿ ಸೋಲಲಿ ಎಂದು ಅವರ ತಂದೆ ಎಕೆ ಆಂಟನಿ( AK Antony) ಶಾಪ ಹಾಕಿದ್ದಾರೆ. ಕಾಂಗ್ರೆಸ್​ನ ಹಿರಿಯ ನಾಯಕರಾಗಿರುವ ಎಕೆ ಆಂಟನಿ ನನ್ನ ಮಗನನ್ನು ಚುನಾವಣೆಯಲ್ಲಿ ಸೋಲಿಸುವ ಅಗತ್ಯವಿದೆ ಎಂದಿದ್ದಾರೆ. ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಅನಿಲ್ ಆಂಟನಿ ಸ್ಪರ್ಧಿಸಿದ್ದಾರೆ.

ಚುನಾವಣೆಯಲ್ಲಿ ಮಗ ಸೋಲಲಿ ಎಂದು ಶಾಪ ಹಾಕಿದ ಕಾಂಗ್ರೆಸ್​ನ ಹಿರಿಯ ನಾಯಕ ಎಕೆ ಆಂಟನಿ
ಅನಿಲ್ ಆಂಟನಿ
Image Credit source: NDTV
Follow us on

ಇತ್ತೀಚೆಗೆಷ್ಟೇ ಬಿಜೆಪಿಗೆ ಸೇರಿರುವ ಅನಿಲ್ ಆಂಟನಿ(Anil Antony) ಚುನಾವಣೆಯಲ್ಲಿ ಸೋಲಲಿ ಎಂದು ಅವರ ತಂದೆ ಎಕೆ ಆಂಟನಿ( AK Antony) ಶಾಪ ಹಾಕಿದ್ದಾರೆ. ಕಾಂಗ್ರೆಸ್​ನ ಹಿರಿಯ ನಾಯಕರಾಗಿರುವ ಎಕೆ ಆಂಟನಿ ನನ್ನ ಮಗನನ್ನು ಚುನಾವಣೆಯಲ್ಲಿ ಸೋಲಿಸುವ ಅಗತ್ಯವಿದೆ ಎಂದಿದ್ದಾರೆ. ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಅನಿಲ್ ಆಂಟನಿ ಸ್ಪರ್ಧಿಸಿದ್ದಾರೆ.

ಕೆಲ ಸಮಯದ ಹಿಂದೆ ಬಿಜೆಪಿ ಸೇರಿದ್ದರು. ತಂದೆ ಎ.ಕೆ.ಆಂಟನಿ ಈಗ ಮಗನ ಸೋಲಿಗಾಗಿ ಪ್ರಾರ್ಥಿಸಿದ್ದಾರೆ. ಆ್ಯಂಟನಿ ಮಗನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್​ ವಿರುದ್ಧ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯವರನ್ನು ಸೋಲಿಸಬೇಕಾಗುತ್ತದೆ, ಮಗ ಬಿಜೆಪಿಗೆ ಸೇರಿ ತಪ್ಪು ಮಾಡಿದ್ದಾರೆ.

ಕಳೆದ ವರ್ಷ ಅನಿಲ್ ಆಂಟನಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. 2002ರ ಗುಜರಾತ್ ಗಲಭೆ ಮತ್ತು ಬಿಬಿಸಿಯ ಪ್ರಧಾನಿ ನರೇಂದ್ರ ಮೋದಿ ಅವರ ಸಾಕ್ಷ್ಯಚಿತ್ರದ ವಿವಾದದ ನಂತರ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಅನಿಲ್ ಆಂಟನಿ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಇಲ್ಲಿಯವರೆಗೆ ಈ ಸ್ಥಾನಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಸಿಪಿಐ(ಎಂ) ಟಿಎಂ ಥಾಮಸ್ ಐಸಾಕ್ ಅವರನ್ನು ಕಣಕ್ಕಿಳಿಸಿದೆ.

ಮತ್ತಷ್ಟು ಓದಿ: Anil Antony: ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ನನ್ನ ಧರ್ಮ ಎಂದು ಎಕೆ ಆಂಟನಿ ಅವರು ತಮ್ಮ ಮಗನ ನಿಲುವು ಹಾಗೂ ಬಿಜೆಪಿ ಸೇರುವ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ