Lok Sabha Election: ಆಂಧ್ರದಲ್ಲಿ ಎನ್ಡಿಎ ಸೀಟು ಹಂಚಿಕೆ ಸೂತ್ರ ಅಂತಿಮ
ಬಿಜೆಪಿ, ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಮುಂಬರುವ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗಳಿಗೆ ಸ್ಥಾನಗಳನ್ನು ಅಂತಿಮಗೊಳಿಸಿವೆ. ಬಿಜೆಪಿ ಆರು ಲೋಕಸಭೆ ಮತ್ತು 10 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ, ಟಿಡಿಪಿ 17 ಲೋಕಸಭೆ ಮತ್ತು 144 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಜನಸೇನೆ ಎರಡು ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆಂಧ್ರಪ್ರದೇಶವು 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಏಕಕಾಲದಲ್ಲಿ ಸ್ಪರ್ಧೆ ನಡೆಯಲಿದೆ.
ದೇಶದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆ(Lok Sabha Election)ಗೆ ಇನ್ನು ಸ್ವಲ್ಪ ದಿನಗಳಷ್ಟೇ ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳು ಚುನಾವಣೆಗೆ ಭಾರಿ ಸಿದ್ಧತೆ ನಡೆಸಿವೆ. ಮತ್ತೊಂದೆಡೆ ದಕ್ಷಿಣದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಬಲಪಡಿಸಲು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ನಿರತವಾಗಿವೆ. ಇದೀಗ ಬಿಜೆಪಿಯು ಚಂದ್ರಬಾಬು ನಾಯ್ಡು(Chandrababu Naidu) ಅವರ ತೆಲುಗು ದೇಶಂ ಪಕ್ಷ(ಟಿಡಿಪಿ)ಮತ್ತು ಪವನ್ ಕಲ್ಯಾಣ್(Pawan Kalyan) ಅವರ ಪಕ್ಷ ಜನಸೇನೆ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಮುಂಬರುವ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ಎದುರಿಸಲು ನಿರ್ಧರಿಸಿವೆ ಎನ್ನುವ ಮಾಹಿತಿ ಕೇಳಿಬಂದಿದೆ.
ಮೂರು ಪಕ್ಷಗಳ ನಡುವೆ ಸೀಟು ಹಂಚಿಕೆ ಸೂತ್ರಕ್ಕೆ ಒಪ್ಪಿಗೆ ದೊರೆತಿದ್ದು, ಆಂಧ್ರಪ್ರದೇಶದಲ್ಲಿ ಟಿಡಿಪಿ 17 ಕ್ಷೇತ್ರಗಳಲ್ಲಿ,ಮ ಬಿಜೆಪಿ 6ಸ್ಥಾನಗಳಲ್ಲಿ, ಪವನ್ ಕಲ್ಯಾಣ್ ಅವರ ಜನಸೇನೆ 2 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಲೋಕಸಭೆ ಚುನಾವಣೆಯ ಜತೆಗೆ ವಿಧಾನಸಭೆ ಚುನಾವಣೆಗೆ ವಿಧಾನಸಭಾ ಚುನಾವಣೆಗೂ ಮೂರು ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 144, ಬಿಜೆಪಿ 10 ಹಾಗೂ ಜೆಎಸ್ಪಿ 21 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಮತ್ತಷ್ಟು ಓದಿ: ಲೋಕಸಭೆ ಚುನಾವಣೆ: 2ನೇ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ಕಸರತ್ತು, ‘ಕೈ’ಗೆ ಸಂಕಷ್ಟ ತಂದಿತ್ತ ಕ್ಷೇತ್ರಗಳಿವು!
ಚಂದ್ರಬಾನು ನಾಯ್ಡು ಮಾತನಾಡಿ ಬಿಜೆಪಿ, ಟಿಡಿಪಿ ಹಾಗೂ ಜೆಎಸ್ಪಿ ನಡುವೆ ಅಮರಾವತಿಯಲ್ಲಿ ಸೀಟು ಹಂಚಿಕೆಗೆ ಪ್ರಚಂಡ ಸೂತ್ರವನ್ನು ರೂಪಿಸಲಾಗಿದೆ. ಮಾರ್ಚ್ 17ರಂದು ಗುಂಟೂರು ಜಿಲ್ಲೆಯಲ್ಲಿ ಟಿಡಿಪಿ ಚಂದ್ರಬಾಬು ನಾಯ್ಡು ಅವರೊಂದಿಗೆ ಪ್ರಧಾನಿ ಮೋದಿ ಜಂಟಿ ರ್ಯಾಲಿ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ಟಿಡಿಪಿ ಹಾಗೂ ಬಿಜೆಪಿ ನಡುವಿನ ಸಂಬಂಧ ಹಳೆಯದು ಬಿಜೆಪಿ ಹಾಗೂ ಟಿಡಿಪಿ ನಡುವಿನ ಸಂಬಂಧ ಬಹಳ ಹಳೆಯದು, ಎರಡೂ ಪಕ್ಷಗಳ ಮೊದಲ ಮೈತ್ರಿ 1996ರಲ್ಲಿ ಆಗಿತ್ತು. ಆಗ ಟಿಡಿಪಿ ಎನ್ಡಿಎ ಸೇರಿತ್ತು. ಇವರಿಬ್ಬರೂ 2014ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರೆ, 2014ರ ಚುನಾವಣೆಯಲ್ಲಿ ಜೆಎಸ್ಪಿ ಬಿಜೆಪಿಗೆ ಬೆಂಬಲ ನೀಡಿತ್ತು.
ಆದರೆ 2014ರ ನಂತರ ಟಿಡಿಪಿ ಎರಡು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದಿಂದ ಎನ್ಡಿಎಯಿಂದ ಬೇರ್ಪಟ್ಟಿತ್ತು. 2019ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು, ಅಲ್ಲಿ ವೈಎಸ್ಆರ್ ಕಾಂಗ್ರೆಸ್ ಟಿಡಿಪಿಗೆ ಸೋಲು ನೀಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ