Lok Sabha Election: ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಎಸ್‌ಪಿ

|

Updated on: Mar 18, 2024 | 10:45 AM

ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಇಲ್ಲಿಯವರೆಗೆ 13 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.

Lok Sabha Election: ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಎಸ್‌ಪಿ
ಮಾಯಾವತಿ
Follow us on

ಮುಂಬರುವ ಲೋಕಸಭಾ ಚುನಾವಣೆ(Lok Sabha Election)ಗೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ತಮ್ಮ ಪಕ್ಷದಿಂದ ಯಾವ ಕ್ಷೇತ್ರದಲ್ಲಿ ಯಾರು ನಿಲ್ಲಬೇಕೆನ್ನುವ ಪಟ್ಟಿಯನ್ನು ಸಿದ್ಧಪಡಿಸಿ, ಕೆಲವು ಪಕ್ಷಗಳು ಬಿಡುಗಡೆಯನ್ನೂ ಮಾಡಿವೆ. ಹಾಗೆಯೇ ಬಹುಜನ ಸಮಾಜವಾದಿ ಪಕ್ಷ(ಬಿಎಸ್​ಪಿ)ದ ಮುಖ್ಯಸ್ಥೆ ಮಾಯಾವತಿ ಕೂಡ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.

ಇಲ್ಲಿಯವರೆಗೆ ಪಕ್ಷವು ಒಟ್ಟು 13 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಬಿಎಸ್​ಪಿ ಇದುವರೆಗೆ ಐದು ಮುಸ್ಲಿಂ ಮತ್ತು ನಾಲ್ಕು ಬ್ರಾಹ್ಮಣ ಮುಖಗಳನ್ನು ತನ್ನ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ. ಇದೀಗ ಪಕ್ಷವು ಕಾನ್ಪುರ, ಮೀರತ್, ಅಕ್ಬರ್‌ಪುರ ಮತ್ತು ಬಾಗ್‌ಪತ್ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಬಿಎಸ್‌ಪಿ ಪಶ್ಚಿಮ ಯುಪಿಯ ಬಾಗ್‌ಪತ್ ಕ್ಷೇತ್ರದಿಂದ ಪ್ರವೀಣ್ ಬೈನ್ಸ್ಲಾ ಮತ್ತು ಮೀರತ್‌ನಿಂದ ದೇಬಬ್ರತ ತ್ಯಾಗಿ ಅವರನ್ನು ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನಾಗಿ ಮಾಡಿದೆ. ಇದಲ್ಲದೆ ಅಕ್ಬರ್‌ಪುರದಿಂದ ರಾಜೇಶ್ ದ್ವಿವೇದಿ ಮತ್ತು ಕಾನ್ಪುರದಿಂದ ಕುಲದೀಪ್ ಬದೌರಿಯಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಆದರೆ ಮಾಯಾವತಿ ಅವರ ಪಕ್ಷವು ಮೊದಲು ಇರ್ಫಾನ್ ಸೈಫಿ ಹೆಸರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು.

ಮತ್ತಷ್ಟು ಓದಿ: ಬಿಎಸ್​ಪಿ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್​ ಮಾಡುವಂತೆ ಯೋಗಿ ಬಳಿ ಮಾಯಾವತಿ ಮನವಿ

ಅವರ ಹೆಸರನ್ನು ಬಿಎಸ್‌ಪಿ ಪಶ್ಚಿಮ ಯುಪಿ ಉಸ್ತುವಾರಿ ಶಂಸುದ್ದೀನ್ ರೈನಿ ಘೋಷಿಸಿದ್ದಾರೆ. ಮೊರಾದಾಬಾದ್ ಕ್ಷೇತ್ರದಿಂದ ಇರ್ಫಾನ್ ಸೈಫಿ ಅವರನ್ನು ಬಿಎಸ್‌ಪಿ ಅಭ್ಯರ್ಥಿಯನ್ನಾಗಿ ಮಾಡಿತ್ತು.

ಮಾಯಾವತಿ ಅವರಿಗೆ ಆಗ್ರಾ ಲೋಕಸಭಾ ಕ್ಷೇತ್ರದಿಂದ ಪೂಜಾ ಅಮ್ರೋಹಿ, ಫೈಜಾಬಾದ್‌ನಿಂದ ಬಿಜೆಪಿಯ ಮಾಜಿ ನಾಯಕ ಸಚ್ಚಿದಾನಂದ್ ಪಾಂಡೆ, ಅಮ್ರೋಹಾದಿಂದ ಡಾ. ಮುಜಾಹಿದ್ ಹುಸೇನ್, ಮೊರಾದಾಬಾದ್‌ನಿಂದ ಇರ್ಫಾನ್ ಸೈಫಿ, ಪಿಲಿಭಿತ್‌ನಿಂದ ಅನೀಶ್ ಅಹ್ಮದ್ ಖಾನ್ ಅಲಿಯಾಸ್ ಫೂಲ್ ಬಾಬು ಮತ್ತು ಸಹರಾನ್‌ಪುರದಿಂದ ಮಜಿದ್ ಅಲಿ ಅವರಿಗೆ ಟಿಕೆಟ್ ನೀಡಿದ್ದರು . ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಬಿಎಸ್ಪಿ ಇದುವರೆಗೆ 13 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ತನ್ನ 13 ಅಭ್ಯರ್ಥಿಗಳಲ್ಲಿ, ಪಕ್ಷವು ಐದು ಮುಸ್ಲಿಮರು, ನಾಲ್ಕು ಬ್ರಾಹ್ಮಣರು, ಒಬ್ಬ ಜಾಟ್, ಒಬ್ಬ ಗುರ್ಜರ್, ಒಬ್ಬ ಒಬಿಸಿ ಮತ್ತು ಒಬ್ಬ ಕ್ಷತ್ರಿಯ ನಾಯಕನನ್ನು ತನ್ನ ಮುಖವನ್ನಾಗಿ ಮಾಡಿಕೊಂಡಿದೆ.

ಈ ಬಾರಿ ಮಾಯಾವತಿ ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದ್ದಾರೆ. ಪಕ್ಷದೊಂದಿಗೆ ಯಾವುದೇ ಮೈತ್ರಿಕೂಟದ ಭಾಗವಾಗುವುದಿಲ್ಲ. ಮಾಯಾವತಿಯವರ ಈ ಘೋಷಣೆಯ ನಂತರವೂ ಹಲವು ಊಹಾಪೋಹಗಳು ಎದ್ದಿವೆ.

ಆದಾಗ್ಯೂ, ಈ ಊಹಾಪೋಹಗಳಿಗೆ ವ್ಯತಿರಿಕ್ತವಾಗಿ, ಅವರು ಇಲ್ಲಿಯವರೆಗೆ ಪಶ್ಚಿಮ ಯುಪಿಯಲ್ಲಿ ಹೆಚ್ಚಾಗಿ ಮುಸ್ಲಿಂ ಮುಖಗಳ ಮೇಲೆ ಬಾಜಿ ಕಟ್ಟಿದ್ದಾರೆ. ಬಿಎಸ್ಪಿ ಇದುವರೆಗೆ ಐವರು ಮುಸ್ಲಿಮರು, ನಾಲ್ವರು ಬ್ರಾಹ್ಮಣರು, ಒಬ್ಬ ಜಾಟ್, ಒಬ್ಬ ಗುರ್ಜರ್, ಒಬಿಸಿ ಮತ್ತು ಒಬ್ಬ ಕ್ಷತ್ರಿಯ ನಾಯಕರಿಗೆ ಟಿಕೆಟ್ ನೀಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ