AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಜತೆ ನಿಲ್ಲಲು ಯಾರೂ ಸಿದ್ಧರಿಲ್ಲ: ಬಿಜೆಪಿ

ಕಾಂಗ್ರೆಸ್​ ಜತೆ ನಿಲ್ಲಲು ಯಾರೂ ಸಿದ್ಧರಿಲ್ಲ ಎಂದು ಬಿಜೆಪಿ ಹೇಳಿದೆ. ಮುಂಬೈನಲ್ಲಿ ನಡೆದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ನ್ಯಾಯ ಯಾತ್ರೆಯ ಸಮಾರೋಪದಲ್ಲಿ ಭಾಗವಹಿಸದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇಂಡಿಯಾ ಒಕ್ಕೂಟದಲ್ಲಿರುವ ಯಾವ ಪಕ್ಷವೂ ಕೂಡ ಕಾಂಗ್ರೆಸ್​ನ ಪರವಾಗಿ ನಿಲ್ಲಲು ಸಿದ್ಧವಿಲ್ಲ, ಅಮೇಥಿ, ರಾಯ್​ ಬರೇಲಿಯಲ್ಲಿ ಸೋಲುವ ಭಯದಲ್ಲಿದೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ಬಿಜೆಪಿ ವಕ್ತಾರ ರಾಕೇಶ್​ ತ್ರಿಪಾಠಿ ಹೇಳಿದ್ದಾರೆ.

ಕಾಂಗ್ರೆಸ್​ ಜತೆ ನಿಲ್ಲಲು ಯಾರೂ ಸಿದ್ಧರಿಲ್ಲ: ಬಿಜೆಪಿ
ಅಖಿಲೇಶ್​ ಯಾದವ್, ರಾಹುಲ್ Image Credit source: India Today
ನಯನಾ ರಾಜೀವ್
|

Updated on:Mar 18, 2024 | 9:13 AM

Share

ಕಾಂಗ್ರೆಸ್(Congress)​ ಜತೆ ನಿಲ್ಲಲು ಯಾರೂ ಸಿದ್ಧರಿಲ್ಲ ಎಂದು ಬಿಜೆಪಿ ಹೇಳಿದೆ. ಮುಂಬೈನಲ್ಲಿ ನಡೆದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ನ್ಯಾಯ ಯಾತ್ರೆಯ ಸಮಾರೋಪದಲ್ಲಿ ಭಾಗವಹಿಸದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್(Akhilesh Yadav) ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇಂಡಿಯಾ ಒಕ್ಕೂಟದಲ್ಲಿರುವ ಯಾವ ಪಕ್ಷವೂ ಕೂಡ ಕಾಂಗ್ರೆಸ್​ನ ಪರವಾಗಿ ನಿಲ್ಲಲು ಸಿದ್ಧವಿಲ್ಲ, ಅಮೇಥಿ, ರಾಯ್​ ಬರೇಲಿಯಲ್ಲಿ ಸೋಲುವ ಭಯದಲ್ಲಿದೆ.

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ಬಿಜೆಪಿ ವಕ್ತಾರ ರಾಕೇಶ್​ ತ್ರಿಪಾಠಿ ಹೇಳಿದ್ದಾರೆ. ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾದಲ್ಲಿರುವ ಪಕ್ಷಗಳು ಆಗಾಗ ಕಾಂಗ್ರೆಸ್​ನ್ನು ಅವಮಾನಿಸುತ್ತಿದೆ. ಈ ಒಕ್ಕೂಟದಲ್ಲಿ ಕಾಂಗ್ರೆಸ್​ ಅತಿದೊಡ್ಡ ಪಕ್ಷವಾಗಿದೆ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಎಲ್ಲಾ ಪ್ರತಿಪಕ್ಷಗಳು ಕಟ್ಟಿಕೊಂಡ ಒಕ್ಕೂಟ ಇದಾಗಿದೆ.

ನಿತೀಶ್​ ಕುಮಾರ್​ ಹಾಗೂ ಆರ್​ಎಲ್​ಡಿ ಇಂಡಿಯಾ ಮೈತ್ರಿ ತೊರೆದಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ಅವರೊಂದಿಗಿಲ್ಲ, ಈಗ ಅಖಿಲೇಶ್​ ಯಾದವ್ ಕೂಡ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಯಾರೂ ಕಾಂಗ್ರೆಸ್​ನೊಂದಿಗೆ ನಿಲ್ಲಲು ಬಯಸುವುದಿಲ್ಲ. ಫೆಬ್ರವರಿ 25 ರಂದು ಆಗ್ರಾದಲ್ಲಿ ಭಾರತ್ ಜೋಡೊ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೊಲೆಯ ಕ್ಷಣದಲ್ಲಿ ರಾಹುಲ್ ಗಾಂಧಿಯೊಂದಿಗೆ ಅಖಿಲೇಶ್​ ಯಾದವ್ ಸೇರಿಕೊಂಡಿದ್ದರು. ಎಸ್​ಪಿ 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್​ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಮತ್ತಷ್ಟು ಓದಿ: ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಕಾಂಗ್ರೆಸ್ ವಿರುದ್ಧ ಅಖಿಲೇಶ್ ಯಾದವ್ ಮತ್ತೆ ವಾಗ್ದಾಳಿ

ಮುಂಬರುವ ಲೋಕಸಭೆ ಚುನಾವಣೆಗೆ ಮೀರತ್ ಕ್ಷೇತ್ರದಿಂದ ಸಮಾಜವಾದಿ ಪಕ್ಷವು ವಕೀಲ ಭಾನು ಪ್ರತಾಪ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಿದೆ. ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಸನಾತನ ಸಂಸ್ಥೆಯ ವಿರುದ್ಧ ಮಾತನಾಡುತ್ತಿರುವುದು ಕಂಡು ಬಂದಿದೆ. ಇದೀಗ ಭಾರತೀಯ ಜನತಾ ಪಕ್ಷ ಈ ಬಗ್ಗೆ ಎಸ್‌ಪಿ ವಿರುದ್ಧ ಪ್ರಶ್ನೆ ಎತ್ತಿದೆ.

ಸಮಾಜವಾದಿ ಪಕ್ಷವು 2024 ರ ಲೋಕಸಭಾ ಚುನಾವಣೆಯಲ್ಲಿ ತನ್ನ ಸನಾತನ ವಿರೋಧಿ ಸಂಪ್ರದಾಯವನ್ನು ಉಳಿಸಿಕೊಂಡಿದೆ ಎಂದು ಬಿಜೆಪಿ ಹೇಳಿದೆ. 2024ರ ಲೋಕಸಭೆ ಚುನಾವಣೆಗೆ ಮತ ಹಾಕುವ ಮುನ್ನ , ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಬೇಕೋ ಅಥವಾ ತುಷ್ಟೀಕರಣ ರಾಜಕಾರಣ ಮಾಡುವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದು ನಿಮಗೆ ಬಿಟ್ಟಿದ್ದು ಎಂದು ಬಿಜೆಪಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:13 am, Mon, 18 March 24