Congress Guarantee: ಮೋದಿ ಗ್ಯಾರಂಟಿಗೆ ಪ್ರತಿಯಾಗಿ ರಾಹುಲ್ ಗಾಂಧಿ ಪಂಚ ಗ್ಯಾರಂಟಿ; ಏನವು ಅವರ ಐದು ಭರವಸೆಗಳು

Modi Ki Guarantee vs Rahul Guarantee: ಲೋಕಸಭಾ ಚುನಾವಣೆಯಲ್ಲಿ ಈಗ ಗ್ಯಾರಂಟಿಗಳ ಸಮರ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಯ ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಎಂಎಸ್​ಪಿಗೆ ಕಾನೂನು ಖಾತ್ರಿ, 30 ಲಕ್ಷ ಸರ್ಕಾರಿ ಉದ್ಯೋಗಗಳ ನೇಮಕಾತಿ ಗ್ಯಾರಂಟಿಗಳು ಇದರಲ್ಲಿ ಒಳಗೊಂಡಿವೆ. ಕಳೆದ 10 ವರ್ಷದಲ್ಲಿ ಖಾಲಿ ಉಳಿದಿರುವ ಕೇಂದ್ರ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

Congress Guarantee: ಮೋದಿ ಗ್ಯಾರಂಟಿಗೆ ಪ್ರತಿಯಾಗಿ ರಾಹುಲ್ ಗಾಂಧಿ ಪಂಚ ಗ್ಯಾರಂಟಿ; ಏನವು ಅವರ ಐದು ಭರವಸೆಗಳು
ರಾಹುಲ್ ಗಾಂಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 07, 2024 | 6:41 PM

ನವದೆಹಲಿ, ಮಾರ್ಚ್ 7: ಕರ್ನಾಟಕದ ಕಾಂಗ್ರೆಸ್​ನಿಂದ ಶುರುವಾದ ಗ್ಯಾರಂಟಿ (congress guarantee) ಭರವಸೆ ಈಗ ಲೋಕ ಸಮರದಲ್ಲಿ ಜೋರಾಗಿ ನಡೆಯುತ್ತಿದೆ. ನರೇಂದ್ರ ಮೋದಿ ನೀಡುತ್ತಿರುವ ಗ್ಯಾರಂಟಿಗಳಿಗೆ (Modi ki Guarantee) ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಅಸ್ತ್ರ ಬಿಟ್ಟಿದೆ. ರೈತರು, ಯುವಕರು, ಅಸಂಘಟಿತ ವಲಯದವರು, ಯುವೋದ್ಯಮಿಗಳು ಹೀಗೆ ವಿವಿಧ ವಲಯದ ಜನರನ್ನು ಆಕರ್ಷಿಸುವಂತಹ ಖಾತ್ರಿ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ದೇಶದ ಯುವಕರಿಗೆ ಉದ್ಯೋಗ ಕೊಡುವ ಉದ್ದೇಶ ಪ್ರಧಾನಿ ಮೋದಿಗೆ ಇಲ್ಲ ಎಂದು ಹಂಗಿಸಿರುವ ರಾಹುಲ್ ಗಾಂಧಿ, ಖಾಲಿ ಉಳಿದಿರುವ 30 ಲಕ್ಷ ಸರ್ಕಾರಿ ನೌಕರಿಗಳನ್ನು ಭರ್ತಿ ಮಾಡುವುದಾಗಿ ದೊಡ್ಡ ಭರವಸೆ ಕೂಡ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು

  1. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ
  2. ಗುತ್ತಿಗೆ ಕೆಲಸಗಾರರಿಗೆ (ಗಿಗ್ ವರ್ಕರ್ಸ್) ಸಾಮಾಜಿಕ ಭದ್ರತೆ
  3. ಖಾಲಿ ಇರುವ 30 ಲಕ್ಷ ಸರ್ಕಾರಿ ನೌಕರಿಗಳ ನೇಮಕಾತಿ
  4. ಸರ್ಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೋರಿಕೆ ತಡೆಯಲು ಕಠಿಣ ಕಾನೂನು
  5. ಸ್ಟಾರ್ಟಪ್​ಗಳಿಗೆ 5,000 ಕೋಟಿ ರೂ ಫಂಡ್ ನಿಯೋಜನೆ

ಇದನ್ನೂ ಓದಿ: ಈ ಹಣಕಾಸು ವರ್ಷ ಜಿಡಿಪಿ ದರ ಶೇ. 8ಕ್ಕೆ ಸಮೀಪ: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು

ಯುವಕರತ್ತ ಕಾಂಗ್ರೆಸ್ ಚಿತ್ತ…

ಯುವಕರಿಗೆ ಅಪ್ರೆಂಟಿಸ್ ಅಥವಾ ತರಬೇತಿ ಹಕ್ಕು ಒದಗಿಸುವ ಭರವಸೆಯನ್ನು ಕಾಂಗ್ರೆಸ್ ಪರಿಶೀಲಿಸುತ್ತಿದೆ. ಅದರ ಅಡಿಯಲ್ಲಿ ಯುವಸಮುದಾಯಕ್ಕೆ ಅಗತ್ಯ ವೃತ್ತಿಪರ ಶಿಕ್ಷಣದ ವ್ಯವಸ್ಥೆ ಮಾಡುವುದರ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಅವರಿಗೆ ಇಂಟರ್ನ್​ಶಿಪ್ ಅಥವಾ ತರಬೇತಿ ಕೊಡಿಸುವುದು ಈ ಯೋಜನೆಯಲ್ಲಿದೆ.

ಯುವಕರನ್ನು ವೃತ್ತಿಪರ ತರಬೇತಿ ಮೂಲಕ ಕೆಲಸಕ್ಕೆ ಅಣಿಗೊಳಿಸುವುದು ಈ ಯೋಜನೆಯ ಉದ್ದೇಶ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Thu, 7 March 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್