National Creators Award: ಮಾ. 8ರಂದು ಮೊಟ್ಟಮೊದಲ ಬಾರಿಗೆ ‘ರಾಷ್ಟ್ರೀಯ ರಚನೆಕಾರರ ಪ್ರಶಸ್ತಿ’ ಪ್ರದಾನ ಮಾಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಮಾ. 8)ರ ಬೆಳಗ್ಗೆ 10:30 ಕ್ಕೆ ನವದೆಹಲಿಯ ಭಾರತ್ ಮಂಟಪದಲ್ಲಿ ಮೊದಲ ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರೀಯ ರಚನೆಕಾರರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕಥೆಗಾರ ಪ್ರಶಸ್ತಿ ಸೇರಿದಂತೆ ಇಪ್ಪತ್ತು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
ದೆಹಲಿ, ಮಾರ್ಚ್ 07: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಳೆ (ಮಾ. 8)ರ ಬೆಳಗ್ಗೆ 10:30 ಕ್ಕೆ ನವದೆಹಲಿಯ ಭಾರತ್ ಮಂಟಪದಲ್ಲಿ ಮೊದಲ ರಾಷ್ಟ್ರೀಯ ರಚನೆಕಾರರ ಪ್ರಶಸ್ತಿ (National Creators Award) ಯನ್ನು ಪ್ರದಾನ ಮಾಡಲಿದ್ದಾರೆ. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯು ಸಾಮಾಜಿಕ ಬದಲಾವಣೆ, ಪರಿಸರ ಸಮರ್ಥನೀಯತೆ, ಶಿಕ್ಷಣ, ಗೇಮಿಂಗ್ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವವರನ್ನು ಪರಿಚಯಿಸುವ ಪ್ರಯತ್ನವಾಗಿದೆ. ಸಕಾರಾತ್ಮಕ ಬದಲಾವಣೆ, ಸೃಜನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಗೆ ಸಾಕಷ್ಟು ಸಾರ್ವಜನಿಕರು ಸಾಕ್ಷಿಯಾಗಿದ್ದರು. ಮೊದಲ ಹಂತದಲ್ಲಿ 20 ವಿವಿಧ ವಿಭಾಗಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ. ಬಳಿಕ ಮತದಾನದ ಸುತ್ತಿನಲ್ಲಿ ವಿವಿಧ ಪ್ರಶಸ್ತಿ ವಿಭಾಗಗಳಲ್ಲಿ ಡಿಜಿಟಲ್ ರಚನೆಕಾರರಿಗೆ ಸುಮಾರು 10 ಲಕ್ಷ ಮತಗಳು ಚಲಾವಣೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್
At 10:30 AM tomorrow, 8th March, I will be presenting the first ever National Creators Award. These Awards are a celebration of innovation, creativity and the remarkable spirit of the creator’s community. https://t.co/3DSxBaeb7j
— Narendra Modi (@narendramodi) March 7, 2024
ಇದರ ನಂತರ, ಮೂವರು ಅಂತರರಾಷ್ಟ್ರೀಯ ರಚನೆಕಾರರು ಸೇರಿದಂತೆ 23 ವಿಜೇತರನ್ನು ಗುರುತಿಸಲಾಗಿದೆ. ನಿಜವಾಗಿಯೂ ಪ್ರಶಸ್ತಿಯು ಜನರ ಆಯ್ಕೆ ಮೇಲೆಯೇ ನಿರ್ಧರಿಸಲಾಗಿದೆ ಎಂಬುವುದಕ್ಕೆ ಅಲ್ಲಿ ನೆರೆದಿದ್ದ ಸಾರ್ವಜನಿಕರೆ ಸಾಕ್ಷಿಯಾಗಿದ್ದರು.
ಇದನ್ನೂ ಓದಿ: PM Modi Kashmir Visit: ಪ್ರಧಾನಿ ಮೋದಿಯನ್ನು ಇಂಪ್ರೆಸ್ ಮಾಡಿ ಅವರ ಜತೆ ಸೆಲ್ಫಿ ತೆಗೆದುಕೊಂಡ ನಾಜಿಮ್ ಯಾರು?
ಅತ್ಯುತ್ತಮ ಕಥೆಗಾರ ಪ್ರಶಸ್ತಿ ಸೇರಿದಂತೆ ಇಪ್ಪತ್ತು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ದಿ ಡಿಸ್ಟ್ರಪ್ಟರ್ ಆಫ್ ದಿ ಇಯರ್; ವರ್ಷದ ಸೆಲೆಬ್ರಿಟಿ ಕ್ರಿಯೇಟರ್; ಗ್ರೀನ್ ಚಾಂಪಿಯನ್ ಪ್ರಶಸ್ತಿ; ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಸೃಷ್ಟಿಕರ್ತ; ಅತ್ಯಂತ ಪ್ರಭಾವಶಾಲಿ ಕೃಷಿ ಸೃಷ್ಟಿಕರ್ತ; ವರ್ಷದ ಸಾಂಸ್ಕೃತಿಕ ರಾಯಭಾರಿ; ಅಂತರರಾಷ್ಟ್ರೀಯ ಸೃಷ್ಟಿಕರ್ತ ಪ್ರಶಸ್ತಿ; ಅತ್ಯುತ್ತಮ ಪ್ರಯಾಣ ರಚನೆಕಾರ ಪ್ರಶಸ್ತಿ; ಸ್ವಚ್ಛತಾ ರಾಯಭಾರಿ ಪ್ರಶಸ್ತಿ.
ಇದನ್ನೂ ಓದಿ: Odisha: 15 ವರ್ಷಗಳ ನಂತರ ಎನ್ಡಿಎ ತೆಕ್ಕೆಗೆ ಮರಳಲಿರುವ ಬಿಜು ಜನತಾ ದಳ; ಕಾರಣ ಇದು
ನ್ಯೂ ಇಂಡಿಯಾ ಚಾಂಪಿಯನ್ ಪ್ರಶಸ್ತಿ; ಟೆಕ್ ಕ್ರಿಯೇಟರ್ ಪ್ರಶಸ್ತಿ; ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿ; ಅತ್ಯಂತ ಸೃಜನಶೀಲ ಸೃಷ್ಟಿಕರ್ತ (ಪುರುಷ ಮತ್ತು ಸ್ತ್ರೀ); ಆಹಾರ ವರ್ಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ; ಶಿಕ್ಷಣ ವಿಭಾಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ; ಗೇಮಿಂಗ್ ವಿಭಾಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ; ಅತ್ಯುತ್ತಮ ಮೈಕ್ರೋ ಕ್ರಿಯೇಟರ್; ಅತ್ಯುತ್ತಮ ನ್ಯಾನೋ ಸೃಷ್ಟಿಕರ್ತ; ಅತ್ಯುತ್ತಮ ಆರೋಗ್ಯ ಮತ್ತು ಫಿಟ್ನೆಸ್ ಸೃಷ್ಟಿಕರ್ತ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.